Switzerland ತನ್ನ ಪ್ರಕೃತಿ ಸೌಂದರ್ಯಕ್ಕೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಸುಂದರವಾದ ದೇಶವಾಗಿದೆ. ಈ ದೇಶದ ಪರ್ವತಗಳಲ್ಲಿರುವ ಅಲ್ಬಿನೆನ್ ಎಂಬ ಹಳ್ಳಿಯು ಸುಂದರವಾದ ಕಣಿವೆಗಳಿಗೂ ಹೆಸರುವಾಸಿಯಾಗಿದೆ.
ಈ ಗ್ರಾಮವು ಸಮುದ್ರ ಮಟ್ಟದಿಂದ ಸುಮಾರು 4,265 ಅಡಿ ಎತ್ತರದಲ್ಲಿದೆ. ಹಿಮದಿಂದ ಆವೃತವಾದ ಪರ್ವತಗಳ ನಡುವೆ ಇರುವ ಈ ಹಳ್ಳಿಯು ನಿಮ್ಮ ಹೃದಯವನ್ನು ಗೆಲ್ಲುವುದಂತೂ ಖಚಿತ. ಅಷ್ಟೊಂದು ಸುಂದರವಾಗಿದೆ ಈ ಗ್ರಾಮ.
ಈಗ ವಿಷಯ ಏನಂದ್ರೆ ಈ ಹಳ್ಳಿಯ ಜನಸಂಖ್ಯೆಯು ನಿರಂತರವಾಗಿ ಕಡಿಮೆಯಾಗುತ್ತಿದೆ, ಇದನ್ನು ತಡೆಯಲು ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದು ವರದಿಯ ಪ್ರಕಾರ, ಈ ಗ್ರಾಮದಲ್ಲಿ ಕೇವಲ 240 ರಿಂದ 245 ಜನರು ಮಾತ್ರ ಉಳಿದಿದ್ದಾರೆ.
ಈ ಹಳ್ಳಿಯ ಆರ್ಥಿಕತೆ ಕುಸಿಯದಂತೆ ಉಳಿಸಲು, ಸ್ವಿಸ್ ಸರ್ಕಾರ ಇಲ್ಲಿ ಜನರನ್ನು ನೆಲೆಸುವಂತೆ ಮಾಡಲು ಒಂದು ಕೊಡುಗೆಯನ್ನು ಪ್ರಾರಂಭಿಸಿದೆ. ಈ ಕೊಡುಗೆಯಲ್ಲಿ, ಸರ್ಕಾರವು ಈ ಗ್ರಾಮದಲ್ಲಿ ನೆಲೆಸಲು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ.
ನಿಮ್ಮ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ, ಪ್ರತಿಯೊಬ್ಬ ವಯಸ್ಕ ಸದಸ್ಯರಿಗೆ ಸುಮಾರು 22,500 ಪೌಂಡ್‌ಗಳು ಅಂದರೆ 22 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡಲಾಗುವುದು. ಇಷ್ಟು ಮಾತ್ರವಲ್ಲದೆ, ಪ್ರತಿ ಮಗುವಿಗೆ ಸುಮಾರು 9,000 ಪೌಂಡ್‌ಗಳು ಅಂದರೆ 8 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನೀಡಲಾಗುವುದು.
ಇದರೊಂದಿಗೆ, ಸರ್ಕಾರವು ಈ ಕೊಡುಗೆಯಲ್ಲಿ ಕೆಲವು ಷರತ್ತುಗಳನ್ನು ಸಹ ಇರಿಸಿದೆ. ಈ ಗ್ರಾಮದಲ್ಲಿ ನೆಲೆಸಲು ಪರವಾನಗಿ ತೆಗೆದುಕೊಳ್ಳುವವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಅನ್ನೋದು ಮುಖ್ಯವಾದ ಕಂಡೀಶನ್ ಆಗಿದೆ.