ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ, ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ರದ್ದತಿಗೆ -ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ

varthajala
0

ಬೆಂಗಳೂರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ !

ಬೆಂಗಳೂರು:- ಕರ್ನಾಟಕ ಸರಕಾರವು ಇತ್ತಿಚೇಗೆ ತನ್ನ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾದ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹಣಕಾಸು ವಿಧೇಯಕವು ಓಲೈಕೆಯಿಂದ ಕೂಡಿದ್ದು ಅಲ್ಪಸಂಖ್ಯಾತರಿಗೆ ವಿಶೇಷ ಅನುದಾನಗಳನ್ನು ನೀಡಿ ಹಿಂದೂಗಳ ಮೇಲೆ ಅನ್ಯಾಯ ಮಾಡಲಾಗಿದೆ. ಈ ಹಣಕಾಸು ವಿಧೇಯಕವನ್ನು ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಪರಿಷತ್ ನ ಶ್ರೀ. ವಿಕ್ರಮ್ ಶೆಟ್ಟಿ ಹಾಗೂ ಶ್ರೀ. ಸುರೇಶ ಗೌಡ, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪ್ರವೀಣ್, ಅಡ್ವೋಕೇಟ್ ಎ. ಶಕುಂತಲಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಬಿ ಎನ್ ಮಹೇಶ್ ಕುಮಾರ್, ಹಾಗೂ ಮುಂತಾದ ಹಿಂದುತ್ವ ನಿಷ್ಠರು ಉಪಸ್ಥಿತರಿದ್ದರು.


ರಾಜ್ಯ ಸರಕಾರ ಮುಸಲ್ಮಾನ ಕಾಲೋನಿಗಳಿಗೆ ೧೦೦೦ ಕೋಟಿ, ಮುಸಲ್ಮಾನ ಇಮಾಮರಿಗೆ ಮಾಸಿಕ ೬೦೦೦ ರೂಪಾಯಿ ವೇತನ, ಮುಸಲ್ಮಾನ ಹೆಣ್ಣುಮಕ್ಕಳ ಮದುವೆಗೆ ೫೦ ಸಾವಿರ ರೂಪಾಯಿ, ಮುಸಲ್ಮಾನ ವಿದ್ಯಾರ್ಥಿಗಳ ವಿದೇಶೀ ಶಿಷ್ಯವೇತನಕ್ಕೆ ೩೦ ಲಕ್ಷ ರೂ., ಮುಸಲ್ಮಾನ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣೆ ತರಬೇತಿ, ವಕ್ಫ್ ಬೋರ್ಡ ಆಸ್ತಿ ರಕ್ಷಣೆಗೆ ೧೫೦ ಕೋಟಿ ರೂ. ಅನುದಾನ, ಮುಸಲ್ಮಾನರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಐಟಿಐ ಕಾಲೇಜಿಗೆ ಮಂಜೂರಾತಿ, ೧೦೦ ಉರ್ದುಶಾಲೆಗಳ ಸ್ಥಾಪನೆ, ಮುಸಲ್ಮಾನ ಯುವಕರ ಸ್ಟಾರ್ಟ ಆಪಗೆ ಸರಕಾರೀ ಸಹಾಯಧನ, ಮುಸಲ್ಮಾನ ಮಕ್ಕಳಿಗೆ ವೃತ್ತಿಪರ ತರಬೇತಿ, ಹಜ್ ಭವನಕ್ಕೆ ಅನುದಾನ, ಹೀಗೆ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ದಿ ನೆಪದಲ್ಲಿ ೪೫೦೦ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅದಲ್ಲದೆ ಸರಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ ೪% ಮೀಸಲಾತಿ ನೀಡುವ ಮಸೂದೆಯನ್ನು ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ, ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿಯನ್ನು ನೀಡಿದೆ. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ೩೪ ಸಾವಿರ ಸೀ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇಮಾಮ್‌ರಿಗೆ ೬ ಸಾವಿರ ರೂಪಾಯಿ ಅನುದಾನ ನೀಡಲಾಗಿದೆ. ಅದಲ್ಲದೇ ಧಾರ್ಮಿಕ ದತ್ತಿ ಇಲಾಖೆಯ ಸೀ ಗ್ರೇಡ್ ನ ಸಾವಿರಾರು ದೇವಸ್ಥಾನಗಳು ಜೀರ್ಣೋದ್ದಾರ, ಸುಣ್ಣ ಬಣ್ಣ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿವೆ. ಆದರೆ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಯಾವುದೇ ಅನುದಾನವಿಲ್ಲ. 

ಹೀಗೆ ಸರಕಾರವು ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು ಭಾರತದ ಸಂವಿಧಾನದ ಕಲಂ ೧೪, ೧೫ ರ ಉಲ್ಲಂಘನೆಯಾಗಿದೆ. ಹಾಗಾಗಿ ಸರಕಾರದ ಈ ವರ್ಷದ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಬಾರದು ಎಂದು ಈ ಮನವಿಯ ಮೂಲಕ ಆಗ್ರಹಿಸಲಾಯಿತು.

ಅಡ್ವೋಕೇಟ್ ಸುರೇಶ ಕುಮಾರ್
ಸಂಯೋಜಕರು,
ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
ಸಂಪರ್ಕ :9611006100

Post a Comment

0Comments

Post a Comment (0)