ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲಾ 317 ಏಫ್ ನ 12ನೇ ವಾರ್ಷಿಕ ಜಿಲ್ಲಾ ಸಮ್ಮೇಳನದಲ್ಲಿ ಮೂರು ಕೋಟಿಗೂ ಹೆಚ್ಚಿನ ಸೇವಾ ಕಾರ್ಯ.
ಬೆಂಗಳೂರು -20. ನಾಳೆ (20-04-2025) ಬೆಳಗ್ಗೆ 10 ಗಂಟೆಗೆ ಇಲ್ಲಿನ ನಿಮಾನ್ಸ್ ಕನ್ವೆನ್ಷನ್ ಸಭಾಂಗದದಲ್ಲಿ ಲಯನ್ಸ್ 317ಏಫ್ ನ 12ನೆ ಜಿಲ್ಲಾ ಸಮ್ಮೇಳನ ಏರ್ಪಡಿಸಲಾಗಿದ್ದು, ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ಮತನ್ ಗೋಪಾಲ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಈ ಸಂದರ್ಭದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಮಕ್ಕಳ ಕ್ಯಾನ್ಸರ್ ನಿವಾರಣ ಆಸ್ಪತ್ರೆಯಲ್ಲಿ ಜಿಲ್ಲಾ 317f ನ ಲಯನ್ಸ್ ಸಂಸ್ಥೆ ಹಾಗೂ ಲಯನ್ ಜಿಲ್ಲಾ ಸರ್ವಿಸ್ ಫೌಂಡೇಶನ್ (LDSF) ಇವರ ಸಂಯುಕ್ತ ಆಶಯದಲ್ಲಿ ,2 ಕೋಟಿ 50 ಲಕ್ಷ ರೂಗಳಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಲೋಕಕ್ಕೆ ಸಮರ್ಪಣೆ ಮಾಡಲಾಗುವುದು, ಹಾಗೂ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಆಸ್ಪತ್ರೆಗೆ 35 ಲಕ್ಷ ರೂಗಳ ಅಡುಗೆ ತಯಾರಿಕಾ ಸಾಮಗ್ರಿಗಳು ಹಾಗೂ ಅದನ್ನು ಸಾಗಿಸಲು 15 ಲಕ್ಷದಲ್ಲಿ ಡೆಲಿವರಿ ವ್ಯಾನ್ ನೀಡಲಾಗುವುದು.





ಜಿಲ್ಲಾ ಗವರ್ನರ್ ಸಿ.ಎಂ. ನಾರಾಯಣಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ಕೆ.ವಂಶಿಧರ್ ಬಾಬು, ವಿ.ವಿ. ಕೃಷ್ಣಾರೆಡ್ಡಿ, ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಬಿ.ಎಸ್. ರಾಜಶೇಖರಯ್ಯ, ಜಿಲ್ಲಾ ಉಪ ರಾಜ್ಯಪಾಲರಾದ ಆಕಾಶ್ ಸುವರ್ಣ, ರಾಜು ಚಂದ್ರಶೇಖರ್, ಮುಂತಾದವರು ಉಪಸ್ಥಿತರಿರುವರು.
ಲಯನ್ ಜಿ.ಎಸ್. ಮಂಜುನಾಥ್ ಜಿಲ್ಲಾ ಪಿ .ಆರ್. ಓ.