ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಹೀನಾಯವಾಗಿ ಸೋತಿದೆ. ಚೆನ್ನೈ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ನಿರಾಶದಾಯಕ ಪ್ರದರ್ಶನ ನೀಡಿದ್ದರು.
ಅದರಲ್ಲೂ 20 ಓವರ್ಗಳನ್ನು ಆಡಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳು ಈ ಇನಿಂಗ್ಸ್ನಲ್ಲಿ ಬಾರಿಸಿದ್ದು ಕೇವಲ 8 ಫೋರ್ಗಳು ಮಾತ್ರ. ಇನ್ನು ಸಿಕ್ಸ್ ಪರ ಏಕೈಕ ಸಿಕ್ಸ್ ಸಿಡಿಸಿದ್ದು ವಿಜಯ್ ಶಂಕರ್. ಅಂದರೆ ಇಡೀ ಇನಿಂಗ್ಸ್ಗಳಲ್ಲಿ ಸಿಎಸ್ಕೆ ಬ್ಯಾಟ
ರ್ಗಳಿಂದ ಮೂಡಿಬಂದ ಬೌಂಡರಿಗಳ ಸಂಖ್ಯೆ ಕೇವಲ 9 ಮಾತ್ರ.
ಇತ್ತ ಸಿಎಸ್ಕೆ ಬ್ಯಾಟರ್ಗಳು ಸಿಕ್ಸ್-ಫೋರ್ ಬಾರಿಸಿದಾಗ, ಕುಣಿದು ಹುರಿದುಂಬಿಸಲು ಸಜ್ಜಾಗಿದ್ದ ಚಿಯರ್ಲೀಡರ್ಸ್ ಇಡೀ ಪಂದ್ಯದ ವೇಳೆ ಕೂತಲ್ಲೇ ಕೂರಬೇಕಾಯಿತು. ಏಕೆಂದರೆ ಬ್ಯಾಟಿಂಗ್ ವೇಳೆ ಕೇವಲ 9 ಬಾರಿ ಮಾತ್ರ ಕುಣಿಯಲು ಅವಕಾಶ ದೊರೆತಿತ್ತು. ಇನ್ನು ಬೌಲಿಂಗ್ ವೇಳೆ ಸಿಎಸ್ಕೆ ಪಡೆದಿದ್ದು ಕೇವಲ 2 ವಿಕೆಟ್ ಮಾತ್ರ.
ಹೀಗಾಗಿ ಇಡೀ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಿಯರ್ಲೀಡರ್ಸ್ ಕುಣಿದಿರುವುದಕ್ಕಿಂತ ಕೂತಿದ್ದೇ ಹೆಚ್ಚು. ಇದೀಗ ನಿರಾಸೆಯೊಂದಿಗೆ ಕೂತಿರುವ ಸಿಎಸ್ಕೆ ಫ್ರಾಂಚೈಸಿಯ ಚಿಯರ್ಲೀಡರ್ಸ್ಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.