ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ, ಡಾಲರ್ ಮೌಲ್ಯದ ಬದಲಾವಣೆ, ಇಂಧನ ದರದ ಏರಿಕೆ ಮತ್ತು ಬಾಂಡ್ ಮಾರುಕಟ್ಟೆಯಲ್ಲಿ ಬಂಡವಾಳದ ಚಲನೆಗಳು ಇವೆ. ಮದುವೆ ಸೀಸನ್ ಆರಂಭವಾಗುತ್ತಿರುವುದರಿಂದ ಚಿನ್ನದ ಬೇಡಿಕೆ ತಗ್ಗಿಲ್ಲ. ಈ ಎಲ್ಲಾ ಅಂಶಗಳು ಬೆಲೆ ಏರಿಕೆಗೆ ಕಾರಣವಾಗಿವೆ.
ನಿನ್ನೆ ಹೋಲಿಸಿದರೆ ಪ್ರತಿ ಗ್ರಾಂಗೆ ಸುಮಾರು ₹25 ಏರಿಕೆಯಾಗಿದೆ. ಇದು ಕೆಲವೊಮ್ಮೆ ಗಣನೀಯವಾಗಿ ಕಂಡುಬರದಿದ್ದರೂ, ಹೆಚ್ಚು ಪ್ರಮಾಣದಲ್ಲಿ ಖರೀದಿಸುವ ಗ್ರಾಹಕರಿಗೆ ಇದು ದೊಡ್ಡ ಹೊಡೆತ ಉಂಟುಮಾಡುತ್ತದೆ.
ಚಿನ್ನದ ಬೆಲೆ ಏರಿಕೆಯಾಗುತ್ತಿರುವಾಗ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಚಿನ್ನದ ದರದಲ್ಲಿ ಆಗುತ್ತಿರುವ ನಿರಂತರ ಏರಿಕೆ, ಸಾಮಾನ್ಯ ಮಧ್ಯಮವರ್ಗದ ಗ್ರಾಹಕರಿಗೆ ದೊಡ್ಡ ಹೊರೆ ಆಗಿದೆ. ಚಿನ್ನದಲ್ಲಿ ಹೂಡಿಕೆ ಮಾಡುವವರ ಆರ್ಥಿಕ ಯೋಜನೆಗಳು ಹದಗೆಡಲಾರಂಭಿಸಿದೆ. ಕೆಲವರು EMI ಅಥವಾ ಉಳಿತಾಯದ ಮೊತ್ತವನ್ನು ಬಳಸಿ ಚಿನ್ನ ಖರೀದಿಸುತ್ತಿದ್ದರು. ಆದರೆ ಈಗಿನ ದರದಲ್ಲಿ ಅವರು ಮುಂದೆ ಕಾಲಿಡುವುದು ಕಷ್ಟಕರವಾಗಿದೆ.
ಬೆಂಗಳೂರು ನಗರದ ಏಪ್ರಿಲ್ 19, 2025ರ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ: ₹8,946 (ಪ್ರತಿ ಗ್ರಾಂಗೆ)
24 ಕ್ಯಾರೆಟ್ ಚಿನ್ನದ ದರ: ₹9,759 (ಪ್ರತಿ ಗ್ರಾಂಗೆ)
18 ಕ್ಯಾರೆಟ್ ಚಿನ್ನದ ದರ: ₹7,320 (ಪ್ರತಿ ಗ್ರಾಂಗೆ)