ಶಿಕ್ಷಣ ಇಲಾಖೆಯ 2025-26ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

varthajala
0

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಅವಧಿಗಳು, ರಜೆಗಳು ಮತ್ತು ಶಾಲಾ ಕರ್ತವ್ಯದ ದಿನಗಳ ಕುರಿತ ಸ್ಪಷ್ಟತೆ ಒದಗಿಸಲಾಗಿದೆ.


ಶೈಕ್ಷಣಿಕ ವರ್ಷವು ಈ ಬಾರಿ ಶೈಕ್ಷಣಿಕ ವರ್ಷವು 2025ರ ಮೇ 29 ರಂದು ಪ್ರಾರಂಭ. ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಎರಡನೇ ಅವಧಿ ಅಕ್ಟೋಬರ್ 8ರಿಂದ ಆರಂಭಗೊಂಡು 2026ರ ಏಪ್ರಿಲ್ 10ರವರೆಗೆ ನಡೆಯಲಿದೆ. ನಂತರ ಏಪ್ರಿಲ್ 11ರಿಂದ ಮೇ 5ರವರೆಗೆ ಬೇಸಿಗೆ ರಜೆಯು ಇರುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 365 ದಿನಗಳಲ್ಲಿ 123 ರಜಾ ದಿನಗಳನ್ನು ಮೀಸಲಿಡಲಾಗಿದೆ. ಉಳಿದ 242 ದಿನಗಳಲ್ಲಿ ಶಾಲಾ ಕಾರ್ಯಚಟುವಟಿಕೆಗಳು ನಡೆಯಲಿವೆ.

2025-26ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 242 ಶಾಲಾ ಕಾರ್ಯದ ದಿನಗಳಲ್ಲಿ, ವಿವಿಧ ಚಟುವಟಿಕೆಗಳಿಗೆ ದಿನಗಳ ಹಂಚಿಕೆ ಈ ರೀತಿ ಇದೆ.

ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ: 26 ದಿನಗಳು, ಪಠ್ಯೇತರ ಚಟುವಟಿಕೆಗಳು ಹಾಗೂ ಸ್ಪರ್ಧೆಗಳಿಗಾಗಿ: 22 ದಿನಗಳು, ಮೌಲ್ಯಮಾಪನ ಹಾಗೂ ಫಲಿತಾಂಶ ವಿಶ್ಲೇಷಣೆಗಾಗಿ: 10 ದಿನಗಳು, ಶಾಲಾ ಸ್ಥಳೀಯ ರಜೆಗಳು: 4 ದಿನಗಳು, ಬೋಧನಾ ಕಲಿಕಾ ಚಟುವಟಿಕೆಗಾಗಿ: 178 ದಿನಗಳು. ರಾಜ್ಯ ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ರೂಪಿಸಿ, ಸಮಯಪಾಲನೆಯೊಂದಿಗೆ ಪಠ್ಯಕ್ರಮ ಪೂರ್ಣಗೊಳಿಸಲು ಸೂಕ್ತ ವ್ಯವಸ್ಥೆ ಮಾಡಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದೇ ರೀತಿಯ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತೆ ಈ ವೇಳಾಪಟ್ಟಿಯನ್ನು ತಯಾರಿಸಲಾಗಿದೆ. 

ವಿದ್ಯಾರ್ಥಿಗಳಿಗೆ ದಸರಾ ಹಾಗೂ ಬೇಸಿಗೆ ರಜೆಯಾಗಿ ಒಟ್ಟು 33 ದಿನಗಳ ವಿಶ್ರಾಂತಿ ಸಮಯ ದೊರೆಯಲಿದೆ. ಸೆ.20ರಿಂದ ಅಕ್ಟೋಬರ್ 7ರವರೆಗೆ 18 ದಿನಗಳ ದಸರಾ ರಜೆ ಹಾಗೂ ಏಪ್ರಿಲ್ 11ರಿಂದ ಮೇ 5ರವರೆಗೆ 25 ದಿನಗಳ ಬೇಸಿಗೆ ರಜೆ ನೀಡಲಾಗಿದೆ.  

Post a Comment

0Comments

Post a Comment (0)