ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹಳ ಸಮಯದಿಂದ ಸ್ಥಿರವಾಗಿವೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದು ಪ್ರತಿ ಬ್ಯಾರೆಲ್‌ಗೆ $60 ಡಾಲರ್ ತಲುಪಿವೆ. ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುವುದರಿಂದ ದೇಶದಲ್ಲಿ ಸರಾಸರಿ ಇಂಧನ ಬೆಲೆ ಲೀಟರ್‌ಗೆ 100 ರೂ.ಗಳಷ್ಟಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಉತ್ಪಾದನಾ ಅಬಕಾರಿ ಸುಂಕವನ್ನು 2 ರೂ. ಹೆಚ್ಚಿಸಿದೆ. ಹಾಗಾದ್ರೆ ಸರ್ಕಾರ ಪ್ರತಿ 1 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಎಷ್ಟು ಗಳಿಸುತ್ತದೆ ಗೊತ್ತಾ? ಇಲ್ಲಿ ತಿಳಿದುಕೊಳ್ಳಿ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಭಾರಿ ತೆರಿಗೆ ವಿಧಿಸುತ್ತವೆ. ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳನ್ನು ತೆರಿಗೆ ಮತ್ತು ಇತರ ಶುಲ್ಕಗಳನ್ನು ಸೇರಿಸಿ ಪ್ರಕಟಿಸುತ್ತವೆ.
1 ಲೀಟರ್ ಪೆಟ್ರೋಲ್ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ದೆಹಲಿಯ ಲೆಕ್ಕಾಚಾರದ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಮೇಲೆ 15.40 ರೂ. ವ್ಯಾಟ್ ವಿಧಿಸಲಾಗುತ್ತದೆ, ಅದು ರಾಜ್ಯ ಸರ್ಕಾರದ ಖಾತೆಗೆ ಹೋಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕದ ಹೆಸರಿನಲ್ಲಿ 21.90 ರೂ. ಸಂಗ್ರಹಿಸುತ್ತದೆ. ಸರಾಸರಿ 4.39 ರೂ.ಗಳನ್ನು ಡೀಲರ್ ಕಮಿಷನ್ ಆಗಿ ವಿಧಿಸಲಾಗುತ್ತದೆ. ಆದ್ದರಿಂದ ಪೆಟ್ರೋಲ್‌ನ ಸರಾಸರಿ ಮೂಲ ಬೆಲೆ ಲೀಟರ್‌ಗೆ 52.84 ರೂ. ಇದರ ಜೊತೆಗೆ, 1 ಲೀಟರ್ ಪೆಟ್ರೋಲ್ ಬೆಲೆಯನ್ನು ಇತರ ಕೆಲವು ಸಣ್ಣ ಮತ್ತು ದೊಡ್ಡ ಶುಲ್ಕಗಳನ್ನು ಸೇರಿಸಿ ನಿರ್ಧರಿಸಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸರಿ ಸುಮಾರು ಲೀಟರ್‌ಗೆ 103 ಇದೆ.