ಬೆಂಗಳೂರು: ಇವತ್ತು ಚಂದನವನದ ಧೀಮಂತ ನಟ, ಅಭಿಮಾನಿಗಳ ಆರಾಧ್ಯದೈವ ಡಾ.ರಾಜಕುಮಾರ್ ಅವರ 19ನೇ ಪುಣ್ಯಸ್ಮರಣೆ, ಅಣ್ಣಾವ್ರು ನಮ್ಮನ್ನಗಲಿ ಬರೋಬ್ಬರಿ 19 ವರ್ಷ ಪೂರೈಸಿದ್ದು, ಇವತ್ತಿಗೂ ನಮ್ಮೆಲ್ಲರ ಮಧ್ಯೆ ಅಜರಾಮರರಾಗಿದ್ದಾರೆ,
ಇಂದು ಅಭಿಮಾನಿಗಳು, ಕುಟುಂಬ ವರ್ಗ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ, ಅಂತೆಯೇ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಿದ್ದಾರೆ,2006 ಎಪ್ರಿಲ್ 12 ರಂದು ಡಾ.ರಾಜ್ ಹೃದಯಾಘಾತದಿಂದ ನಿಧನರಾರಿದ್ದರು, ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳಗಿತ್ತು. ಡಾ.ರಾಜ್ ಪ್ರಾಣಬಿಟ್ಟಿದ್ದರೂ ಇವತ್ತಿಗೆ ಅಭಿಮಾನಿಗಳ ಜನಮಾನಸದಲ್ಲಿ ಜೀವಂತವಾಗಿ ಉಳಿದಿದ್ದಾರೆ,
ಸುಮಾರು 45-50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಾ.ರಾಜ್ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ, ತಮ್ಮ ವೃತ್ತಿ ಬದುಕಲ್ಲಿ ಶೇಕಡ 90 ರಷ್ಟು ಹಿಟ್ ಸಿನಿಮಾಗಳನ್ನೇ ಕೊಟ್ಟ ಹೆಗ್ಗಳಿಕೆ ಡಾ.ರಾಜ್ ಗೆ ಸಲ್ಲುತ್ತದೆ, ಅಣ್ಣಾವ್ರ ನಟನೆ ಬಗ್ಗೆ ಇತರೆ ಚಿತ್ರರಂಗದ ಗಣ್ಯರು ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದು, ದಾದಾ ಸಾಹೇಬ್ ಪಾಲ್ಕೆ, ಪದ್ಮವಿಭೂಷಣ ಸೇರಿ ಅನೇಕ ಪ್ರಶಸ್ತಿಗಳು ಅವರನ್ನು ಆರಿಸಿ ಬಂದಿವೆ,