ಬೆಂಗಳೂರು : ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನವನ್ನು ನವೀಕರಿಸಿ ಪುನಃ ಪ್ರತಿಷ್ಠಾಪನೆಯ ಅಂಗವಾಗಿ ಏ. 18ರಂದು ಬೆಳಗ್ಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಿದವು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಕೆಂಪೇಗೌಡ ಪ್ರಶಸ್ತಿ' ಪುರಸ್ಕೃತೆ ಭರತನಾಟ್ಯ ಯುವ ಕಲಾವಿದೆ ಕು|| ದಿಯಾ ಉದಯ್ ಶೃಂಗೇರಿ ಇವರು "ಶೃಂಗಪುರಾಧೀಶ್ವರಿ ಶಾರದೆ" "ಚಂದ್ರಚೂಡ ಶಿವಶಂಕರ", "ದುರ್ಗಾ ಕೌತ್ವಂ" ಮುಂತಾದ ಕೃತಿಗಳಿಗೆ ನರ್ತನ ಮಾಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡರು.