ನೀರಿನ ದರ ಏರಿಕೆ, ಜನರಿಗೆ ಮತ್ತೊಂದು ಹೊರೆ... ಲೀಟರ್​ಗೆ ಗರಿಷ್ಠ 1 ಪೈಸೆ ಹೆಚ್ಚಳ

varthajala
0

ಬೆಂಗಳೂರು, ಏಪ್ರಿಲ್ 9: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿ, ಡೊಮೆಸ್ಟಿಕ್ ಕನೆಕ್ಷನ್​ಗೆ ಗರಿಷ್ಠ ಲೀಟರ್​ಗೆ ಒಂದು ಪೈಸೆ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ. ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್​​ಗಳನ್ನು ನಿಗದಿಪಡಿಸಲಾಗಿದ್ದು, ಎಷ್ಟು ಬಳಕೆಗೆ ಎಷ್ಟು ದರ ಏರಿಕೆಯಾಲಿದೆ.


ಡೊಮೆಸ್ಟಿಕ್ ಕನೆಕ್ಷನ್​ಗೆ ಗರಿಷ್ಠ ಲೀಟರ್​ಗೆ ಒಂದು ಪೈಸೆ ಹೆಚ್ಚಳವಾಗಲಿದೆ.

0-8 ಸಾವಿರದೊಳಗೆ ಸ್ಲ್ಯಾಬ್​ಗೆ ಲೀಟರ್​ಗೆ 0.15 ಪೈಸೆ ಹೆಚ್ಚಳವಾಗಲಿದೆ.

8-25 ಸಾವಿರದೊಳಗಿನ ಸ್ಲ್ಯಾಬ್​ಗೆ ಲೀಟರ್​ಗೆ 0.40 ಪೈಸೆ ಹೆಚ್ಚಳವಾಗಲಿದೆ.

25 ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.

50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.ಏಪ್ರಿಲ್ 1ರಿಂದ ಶೇಕಡಾ 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದೀಗ ಸದ್ಯದ ತೀರ್ಮಾನದಿಂದಾಗಿ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಜಲಮಂಡಳಿ 2014 ರಿಂದ ಈವರೆಗೆ ನಗರದಲ್ಲಿ ನೀರು ಪೂರೈಕೆ ದರ ಹೆಚ್ಚಳ ಮಾಡಿಲ್ಲ. ಮಂಡಳಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಲೀಟರಿಗೆ ಒಂದು ಪೈಸೆಯಷ್ಟಾದರೂ ದರ ಏರಿಕೆ ಮಾಡಲೇಬೇಕಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಸದ್ಯ ವಸತಿ ಕಟ್ಟಡಗಳಿಗೆ ಪೂರೈಕೆ ಮಾಡುವ ನೀರಿಗೆ ಒಟ್ಟು ನಾಲ್ಕು ಸ್ಲ್ಯಾಬ್​ಗಳಲ್ಲಿ ದರ ನಿಗದಿಪಡಿಸಲಾಗಿದೆ. ಇದೀಗ ಗೃಹಗಳಕೆಯ ನೀರಿನ ದರ ಹೆಚ್ಚಳದ ಬಗ್ಗೆಯೂ ನೆಲಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಹಾಲು, ಮೊಸರು, ಕಾಫಿ ಇನ್ನಿತರ ಅಗತ್ಯ ವಸ್ತುಗಳ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಸಾರ್ವಜನಿಕರಿಗೆ ಮತ್ತೊಂದು ಹೊರೆ ಬೀಳಲಿದೆ.


Tags

Post a Comment

0Comments

Post a Comment (0)