ಶ್ರೀವ್ಯಾಸತೀರ್ಥವಿದ್ಯಾಪೀಠದ vyasatheertha vidyapedetha ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

varthajala
0

 ಪರಮಪೂಜ್ಯ ಶ್ರೀವಿದ್ಯಾಶ್ರೀಶತೀರ್ಥಶ್ರೀಪಾದರು ಸ್ಥಾಪಿಸಿದ ಮೈಸೂರಿನ ಶ್ರೀವ್ಯಾಸತೀರ್ಥವಿದ್ಯಾಪೀಠವು ಅನೇಕಶಾಸ್ತ್ರಗಳನ್ನು ಪಾಠಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ.  ಈ ವ್ಯಾಸತೀರ್ಥವಿದ್ಯಾಪೀಠವು ವಿದ್ಯಾಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿದ್ದು ಈಗ ಮತ್ತೊಂದು ಸಾಧನೆಯನ್ನು ಮಾಡಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾಪೀಠದ ಮೂವರು ಬಹುಮಾನವನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ರಾಷ್ಟ್ರಾದ್ಯಂತ ಬರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಖ್ಯಾತನಾಮವಿದ್ವಾಂಸರು ಸ್ವತಃ ಪರೀಕ್ಷೆಯನ್ನು ಮಾಡಿ ನಿರ್ಣಯವನ್ನು ನೀಡಿರುತ್ತಾರೆ. 

 ಈ ಹಿಂದೆಯೂ ಅನೇಕ ಬಾರಿ ರಾಜ್ಯಮಟ್ಟದ ಹಾಗು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಸ್ವರ್ಣ-ರಜತ -ಕಂಚಿನ ಪದಕಗಳನ್ನು ತಂದಿರುವುದನ್ನು ಇಲ್ಲಿ ಸ್ಮರಿಸಬಹುದು. 

 ಖ್ಯಾತ ಯೋಗ ಗುರು ಬಾಬಾ ರಾಮದೇವ್, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ ಶ್ರೀನಿವಾಸ ವರಖೇಡಿ ಮೊದಲಾದವರು ಉಪಸ್ಥಿತರಿದ್ದರು.





* ಡಿ. ಪ್ರಣವಾಚಾರ್ಯ – ನ್ಯಾಯಭಾಷಣ – ರಜತಪದಕ.
* ಶ್ರೀಶಾಚಾರ್ಯ ಅಯಾಚಿತ – ಬೌದ್ಧಭಾಷಣ – ರಜತಪದಕ. 
* ಚಿ. ವಲ್ಲಭ – ಸಾಹಿತ್ಯಶಲಾಕಾ-ಕಂಚಿನ ಪದಕ.

ಬಹುಮಾನ ವಿಜೇತರೆಲ್ಲರನ್ನೂ ಶ್ರೀವ್ಯಾಸತೀರ್ಥವಿದ್ಯಾಪೀಠವು ಅಭಿನಂದಿಸುತ್ತದೆ.

ಗೌರವಕಾರ್ಯದರ್ಶಿಗಳು
ಪ್ರಾಂಶುಪಾಲರು
ಅಧ್ಯಾಪಕ ಮತ್ತು ವಿದ್ಯಾರ್ಥಿವೃಂದ
ಶ್ರೀವ್ಯಾಸತೀರ್ಥವಿದ್ಯಾಪೀಠ, ಮೈಸೂರು

Post a Comment

0Comments

Post a Comment (0)