ಮಾತು ಮಾತಿಗೆ ಈ ಸಂಪ್ರದಾಯ ವಾದಿಗಳು,ಸನಾತನಿಗಳು,ಪಂಚಾಂಗದವರು ರಾಮಾಯಣ ಮಹಾಭಾರತಗಳಿಗೆ 3000 ದಿಂದ 5000 BC, ಹಿಂದೂ ಧರ್ಮಕ್ಕೆ ಸಾವಿರ ಲಕ್ಷ ಕೋಟಿ ವರ್ಷ ಅಂತೆಲ್ಲ ಬಾಯಿಗೆ ಬಂದ ನಂಬರ್ ಬೊಗಳುವ ಹೆಡ್ಡ ಮುಂಡೆವಕ್ಕೆ ಅರ್ಪಣೆ.ಈ ಅಡಗೂಲಜ್ಜಿ ಅಂತೇ ಕಂತೆ ಬಿಟ್ಟು ಸ್ವಲ್ಪ ಇತಿಹಾಸ ಓದಿ.ವೈಜ್ಞಾನಿಕವಾಗಿ ಮನುಷ್ಯ ಬೆಳೆದು ಬಂದ ಹಾದಿ,ಜೀವ ವಿಕಾಸ ಸಿದ್ಧಾಂತದ ಬಗ್ಗೆ ಅರಿಯಿರಿ.
.ಯಾಕಂದ್ರೆ ಭಾರತದ ಪುರಾಣೇತಿಸಿಕಾರರ ಪ್ರಕಾರ ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ನಾಲ್ಕು ಯುಗಗಳು ವೃತ್ತಾಕಾರದಲ್ಲಿ ಸುತ್ತುತ್ತಾ ಧರ್ಮ ಶಾಂತಿ ಮತ್ತು ಸಮೃದ್ಧಿ ಗಳ ಅಂದ ಪತನಕ್ಕೆ ಒಂದೊಂದು ದಾರಿ ಕಲ್ಪಿಸಿ ಕೊಡುತ್ತಾ ಮುಂದುವರೆಯುತ್ತವೆ ಎಂಬದು ಭಾರತೀಯ ಸಂಪ್ರದಾಯ ನಿಷ್ಠರ ಭಾರತದ ಇತಿಹಾಸ ಪೂರ್ವ ಕಾಲಾನುಕ್ರಮ ಏಣಿಕೆ... 1899 ನೇ ಇಸವಿಗೆ ಕಲಿಯುಗವು ಪ್ರಾರಂಭವಾಗಿ 5000 ವರ್ಷಗಳ ಪೂರ್ಣಗೊಂಡಿವೆ ಎಂಬ ಸಾಮಾನ್ಯ ನಂಬಿಕೆಯು ಭಾರತದಲ್ಲಿ ಪ್ರಚಲಿತದಲ್ಲಿದೆ. ಆ ಆಧಾರದ ಮೇಲೆ ಲೆಕ್ಕ ಹಾಕಿ ಕುರುಕ್ಷೇತ್ರ ಯುದ್ಧವು ಕ್ರಿಸ್ತಪೂರ್ವ 3101 ರಲ್ಲಿ ಜರುಗಿತು ಎನ್ನುವುದೇ ಸಂಪ್ರದಾಯ ನಿಷ್ಠರ ಅಭಿಪ್ರಾಯವಾಗಿದೆ.ಐತಿಹಾಸಿಕವಾಗಿ ಆ ಟೈಮ್ನಲ್ಲಿ ಭಾರತದಲ್ಲಿ ಹರಪ್ಪ ಸಿಂಧೂ ನಾಗರೀಕತೆಗಳ ಉಗಮವಾಗಿತ್ತು.ಮನುಷ್ಯ ಭೇಟೆ ಜೀವನದಿಂದ ಒಂದು ಕಡೆ ನೆಲೆ ನಿಂತು ಸಂಘ ಜೀವನ ಕಟ್ಟಿಕೊಂಡಿದ್ದನು. ಈ ಬೃಹತ್ ಸಾಮ್ರಾಜ್ಯಗಳಿರದೆ ಬುಡಕಟ್ಟುಗಳು, ಮಹಾಜನ ಪದಗಳು ಆಗತಾನೆ ಶುರುವಾಗುತ್ತಿದ್ದವು..
ಆಯ್ತು ಮತ್ತೆ ಮುಖ್ಯ ವಿಚಾರಕ್ಕೆ ಬರುವ,ಇವರ ಪ್ರಕಾರ ಭಗವಂತನು ತನಗೆ ಅತ್ಯಂತ ಪ್ರಿಯರಾದ ಹಿಂದೂಗಳ ದೇಶವಾದ ಹಿಂದುಸ್ತಾನವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ಕೃತ-ಕಲಿ ಕಾಲಚಕ್ರವನ್ನು ವಿನ್ಯಾಸ ಗೊಳಿಸಿದ ಎಂಬ ಪ್ರಚಾರದಲ್ಲಿ ತೊಡಗಿರುವುದು ಈ ಮನೋಭೋಮಿಕೆಯ ಭಾಗವೇ ಆಗಿದೆ.ವಿಶ್ವದ ಇತರ ದೇಶಗಳ ಬಗ್ಗೆ ಭಗವಂತನಿಗೆ ಪ್ರೀತಿ ಇಲ್ಲ.ಆದ್ದರಿಂದಲೇ ಈ ನಿಯಮಗಳು ವಿದೇಶಗಳಿಗೆ ಅನ್ವಯವಾಗುವುದಿಲ್ಲ ಎಂಬುದಾಗಿ ಹಿಂದೆ ಕರ್ಮಠ ಬ್ರಾಹ್ಮಣರು ಘೋಷಿಸಿಕೊಳ್ಳುತ್ತಿದ್ದರು.ಪರಿಣಾಮವಾಗಿ ಬೇರೆ ದೇಶಗಳಿಗೂ ಅಲ್ಲಿನ ನಿವಾಸಿಗಳಿಗೂ ಅವರ ಜೀವನ ವಿಧಾನಗಳಿಗೂ ನಮಗೂ ಸುತರಾಮ್ ಸಂಬಂಧವಿಲ್ಲ ಎನ್ನುವಂತಹ ಪರಿಸ್ಥಿತಿ ಉಂಟಾಯಿತು.ಹಿಂದೂ ಧರ್ಮವೂ ವಿದೇಶ ಪ್ರಯಾಣದ ಮೇಲೆ ಸಾವಿರ ವರ್ಷಗಳಿಗೂ ಹೆಚ್ಚು ಕಾಲ ನಿಷೇಧ ಏರಿದ್ದಾದರೂ ಏಕೆ? ತಾವು ನಂಬಿರುವ ಮೌಢ್ಯವನ್ನೇ ಧ್ವನಿ ಏರಿಸಿ ಮಾತನಾಡಿದರೆ ವ್ಯಾಪಕವಾಗಿ ಪ್ರಚಾರ ಮಾಡಿದರೆ ಅದೇ ಸತ್ಯವಾಗುತ್ತದೆ ಎಂಬುದು ಸಂಪ್ರದಾಯ ನಿಷ್ಠರ ನಂಬಿಕೆಯಾಗಿತ್ತು. ಬ್ರಿಟಿಷರು ಬರುವವರೆಗೂ ಭಾರತದಲ್ಲಿ ಪಂಚಾಂಗಗಳು ಮತ್ತು ಪುರಾಣಗಳೆ ಇತಿಹಾಸದ ಘಟನೆಗಳಾಗಿದ್ದವು.ಆದರೆ ಇ ನಂಬಿಕೆಗೆ ಬಲವಾದ ಪೆಟ್ಟು ಕೊಟ್ಟವರು ಈ ಬ್ರಿಟಿಷರು.
ಸರ್ ವಿಲಿಯಂ ಜೋನ್ಸ್ ಮೊದಲ ಬಾರಿಗೆ ಭಾರತೀಯ ಇತಿಹಾಸದ ಕಾಲಾನುಕ್ರಮಣಿಕೆಯನ್ನು ಸಿದ್ಧಪಡಿಸಿದ.ಚಂದ್ರಗುಪ್ತನು ಅಲೆಕ್ಸಾಂಡರಿನ ಸಮಕಾಲಿನ ಎಂಬುದನ್ನು ದೃಢೀಕರಿಸಿದವನು ಇದೇ ಜೋನ್ಸ್. ಬ್ರಾಹ್ಮೀ ಮತ್ತು ಖರೋಷ್ಠಿ ಭಾಷೆಗಳಲ್ಲಿ ಲಿಪಿ ರೂಪ ರಹಸ್ಯಗಳನ್ನು ಭೇದಿಸುವ ಮೂಲಕ ಅಶೋಕನ ಶಾಸನಗಳನ್ನು ನಾವು ಓದಲು ಸಾಧ್ಯವಾಗುವಂತೆ ಮಾಡಿದವನು ಜೇಮ್ಸ್ ಪ್ರಿನ್ಸೆಪ್. ಭಾರತವೆಂಬ ದೇಶದ ಭೌಗೋಳಿಕ ಚೂರುಪಾರುಗಳನ್ನು ಒಂದುಗೂಡಿಸಿ ನಮಗೆ ಸಮಗ್ರವಾದ ಭೂಗೋಳ ಒಂದನ್ನು ರಚಿಸಿ ಕೊಟ್ಟವನು ಭಾರತದ ಪ್ರಾಕ್ತನ ಶಾಸ್ತ್ರದ ಪಿತಾಮಹ ಎಂದು ಪ್ರಖ್ಯಾತನಾಗಿರುವ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್. ಇವರುಗಳು ಬರುವವರೆಗೂ ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಇವರುಗಳ ಹೆಸರೇ ಭಾರತದವರಿಗೆ ಗೊತ್ತಿರಲಿಲ್ಲ..ನಮ್ಮದೇನಿದ್ದರೂ ರಾಮಾಯಣ,ಮಹಾಭಾರತ,18 ಪುರಾಣಗಳು ಅವನಿಗೆ ಸಾವಿರ ಕೈ ಇವನಿಗೆ ನೂರು ಕೈ,ವರ-ಮಂತ್ರಕ್ಕೆ ಮಕ್ಕಳು ಹುಟ್ಟಿದರು,ತುಪ್ಪದ ಗಡಿಗೆಯಲ್ಲಿ101 ಮಕ್ಕಳು ಹುಟ್ಟಿದರು ಎನ್ನುವುದೇ ಇತಿಹಾಸ ಆಗಿತ್ತು..ಪ್ರಸ್ತುತ ಭಾರತದ ಇಂದಿನ ಜನಾಂಗ ನಾವು ಬದುಕುತ್ತಿರುವ ವರ್ತಮಾನವನ್ನು ಕಡೆಗಣಿಸಿ ಗತಕಾಲದ ಆತ್ಮಹತ್ಯೆಯಲ್ಲಿ ಮುಳುಗಿ ಹೋಗಿದ್ದೇವೆ.
ಅಯೋಧ್ಯೆಯ ವೈಭವ ಮತ್ತು ಹಸ್ತಿನಾಪುರದ ಕೀರ್ತಿ ಹಾಡುವುದೇನು ಹೊಗಳುವುದೇನು.ಪ್ರಾಚೀನ ಕಾಲದ ವರ್ಣರಂಜಿತ ಲೋಕವೆಂದು ಇಂದ್ರಪ್ರಸ್ಥದ ಸಭೆಯನ್ನು ಪ್ರಶಂಶೆ ಮಾಡುವುದೇನು?ಭಾರತೀಯರಾದ ನಾವು ಪೌರಾಣಿಕ ಕಥೆಗಳ ಮತ್ತು ಪುರಾಣ ಗ್ರಂಥಗಳ ಕಲ್ಪನಾ ವಿಲಾಸದ ಸಾಹಿತ್ಯ ಪ್ರಪಂಚಕ್ಕೆ ಕೊಡುವಷ್ಟು ಮಹತ್ವವನ್ನು ಇತಿಹಾಸ ಮತ್ತು ವಾಸ್ತವ ಸಂಗತಿಗಳಿಗೆ ಕೊಡುವುದಿಲ್ಲ..
ಇದಕ್ಕೆಲ್ಲ ಮುಖ್ಯ ಕಾರಣ ಸನಾತನಿಗಳು ತಮ್ಮ ಪಂಚಾಂಗಗಳು ಮತ್ತು ಪುರಾಣಗಳ ಬೆಟ್ಟ ಗುಡ್ಡಗಳನ್ನೇ ನಮ್ಮೆದರು ತಂದು ಸುರಿದಿರುವುದು..1960ರಲ್ಲಿ ಯಾವಾಗ ಕಾರ್ಬನ್ 14 ರ ಕಾಲನಿರ್ಣಯ ಎಂಬ ಹೊಸ ತಂತ್ರಜ್ಞಾನವು ಜಗತ್ತಿಗೆ ಬಳಕೆಗೆ ಬಂದಿತೊ ಅಂದಿನಿಂದ ಭಾರತೀಯ ಇತಿಹಾಸದ ಘಟನೆಗಳ ಕಾಲ ನಿರ್ಣಯ ಮಾಡಲು ನಮ್ಮ ಪಂಚಾಂಗಗಳು ಮತ್ತು ಪುರಾಣಗಳು ನಿರಪಯುಕ್ತ ಕಂತೆಗಳಾಗಿ ಬಿಟ್ಟವು.ಅದುವರೆಗೂ ಪುರಾಣಗಳೇ ನಮ್ಮ ದೇಶದ ಇತಿಹಾಸಗಳಾಗಿ ಬಿಟ್ಟಿದ್ದವು.ಒಮ್ಮೆ ಯೋಚಿಸಿ ನೋಡಿ ಬಿಲಿಯನ್ ವರ್ಷಗಳ ಹಿಂದೆ ಸತ್ತಿರೋ ಡೈನೋಸರ್ ಗಳ ಪಳೆಯುಳಿಕೆ ಮನುಷ್ಯನಿಗೆ ಸಿಗುತ್ತದೆ,ಹರಪ್ಪ, ಸಿಂಧೂ ನಾಗರೀಕತೆಯ ಕುರುಹುಗಳು ಸಿಗುತ್ತವೆ ಆದರೆ ಈ ಪುರಾಣಗಳು,ರಾಮಾಯಣ,ಮಹಾಭಾರತಗಳಲ್ಲಿ ಬರುವ ರಾಕ್ಷಸರು,ಮನುಷ್ಯರು,ಇತರೆ ಪಾತ್ರಗಳ ಕುರುಹು ಸಿಗುವುದಿಲ್ಲ.ಸ್ಥಳ ನಾಮಗಳ ಮೇಲೆ ಪುರಾಣವನ್ನು ಇತಿಹಾಸಕ್ಕೆ ಸಮೀಕರಿಸಲು ಹೋಗುತ್ತಾರೆ...
ವಿಶ್ವ ಮಾನವ ಕುವೆಂಪು.