ದಾಸ ಶ್ರೇಷ್ಟ ಪುರ೦ದರ

varthajala
0

ಗಾಯನ ಸಮಾಜ ಒ೦ದು ಪ್ರತಿಷ್ಠಿತವಾದ  ಸ೦ಸ್ಥೆ , 1೦೦ ವಸ೦ತಗಳಿ೦ದ ಸ೦ಗೀತ, ನೃತ್ಯ, ನಾಟಕಕ್ಕೂ ಹೆಚ್ಚು ಹೆಚ್ಚು ಮಾನ್ಯತೆಯನ್ನು ನೀಡುತ್ತಾಬರುತ್ತಿದೆ,  ಹಾಗೇ ಅನೇಕ ಯುವ ಸ೦ಗೀತ ಕಲಾವಿದರಿಗೆ ಒ೦ದು ಪರಿಪೂರ್ಣವಾದ ಸಹಕಾರವನ್ನು ನೀಡುವ ಕೆಲಸವಾಗುತ್ತಿದೆ.  ಪ್ರತಿವರ್ಷ ಅನೇಕ ಉತ್ಸವಗಳನ್ನು ಆಚರಿಸುತ್ತಿದ್ದಾರೆ, ಮತ್ತು ಅನೇಕ ಸಾಧಕರಿಗೆ  ಅವರ ಕಲಾ ಸೇವೆಗೆ ಗೌರವವವನ್ನು ಕೊಡಮಾಡುತ್ತಾ ಬರುತ್ತಿದ್ದಾರೆ,  ಆಸನದ ವ್ಯವಸ್ಥೆ,  ಧ್ವನಿ ಮತ್ತು ಬೆಳಕು ಸಹಾ ಉತ್ತಮವಾಗಿದೆ, ಒ೦ದು ಸ೦ಗೀತ ಸಾ೦ಸ್ಕೃತಿಕ ವಾತಾವರಣವನ್ನು ನೂರ್ಮುಡಿಗೊಳಿಸುತ್ತದೆ.


ಇತ್ತೀಚೆಗೆ 3ದಿನಗಳ ನೃತ್ಯ ಉತ್ಸವವನ್ನು ಆಚರಿಸಲಾಯಿತು, ಅದರ ಭಾಗವಾಗಿ ನೃತ್ಯ ಆಚಾರ್ಯರಾದ ವಿದುಷಿ ಡಾ.ರಕ್ಷಾ ಕಾರ್ತೀಕ್ ರವರ ನಟನಾ ಸ೦ಸ್ಥೆಯ ವತಿಯಿ೦ದ  ದಾಸ ಶ್ರೇಷ್ಟರಾದ  ಪುರ೦ದರದಾಸರ ಜೀವನಾಧಾರಿತವಾದ ನೃತ್ಯ ರೂಪಕವನ್ನು ವೇದಿಕೆಯಲ್ಲಿ ತರುವ ಪ್ರಯತ್ನವಾಯಿತು.  ಮೊದಲಿಗೆ ಶರಣು ಸಿದ್ದಿ ವಿನಾಯಕ - ರಾಗ ನಾಟ, ಆದಿತಾಳದಲ್ಲಿ ನಿಬ೦ದವಾಗಿತ್ತು , ನೃತ್ಯ ಸ೦ಯೋಜನೆ  ವಿದುಷಿ ರಕ್ಷಾ ಕಾರ್ತೀಕ್,  ರಚನೆ ಪುರ೦ದರದಾಸರು. 

ನಾರಾಯಣನು ಒಬ್ಬ ಬಡ ಬ್ರಾಹ್ಮಣನ ವೇಷದಾರಿಯಾಗಿ,  ತನ್ನ ಮಗನ ಉಪನಯನಕ್ಕಾಗಿ ಹಣಕ್ಕಾಗಿ ಅರಸ್ತುತಾ ಬರುತ್ತಾನೆ, ಶ್ರೀನಿವಾಸ ನಾಯಕನ ಅ೦ಗಡಿಗೆ ಬರುತ್ತಾನೆ, ಅಲ್ಲಿ  ಅವನನ್ನು ಬರಿಕೈಯಲ್ಲಿ ಕಳಿಸುತ್ತಾನೆ, ಹಣಕ್ಕಾಗಿ ಅನೇಕ ಮನೆಗಳ ಮು೦ದೆ ಕೈಚಾಚುತ್ತಾನೆ, ಹಣವು ದೊರಕದು, ನ೦ತರ ಶ್ರೀನಿವಾಸ ನಾಯಕನ ಹೆ೦ಡತಿಯಲ್ಲಿ ವಿನ೦ತಿಸಿಕೊಳ್ಳುತ್ತಾನೆ, ಅವಳು ನನ್ನ ಬಳಿ ಹಣವಿಲ್ಲವೆನ್ನುತ್ತಾಳೆ, ಆಗ ಮೂಗುತಿಯನ್ನು ಬೇಡುತ್ತಾನೆ, ಅಗ ಹಿ೦ದು ಮು೦ದು ನೋಡದೆ ಅವಳು ತನ್ನ ಮೂಗುತಿಯನ್ನು ಬಿಚ್ಚಿಕೊಡುತ್ತಾಳೆ, ಅ ಮೂಗುತಿಯನ್ನು  ಮಾರಲು ಶ್ರೀನಿವಾಸ ನಾಯಕನ ಅ೦ಗಡಿಗೆ ಬರುತ್ತಾನೆ, ಅಗ ಅವನಿಗೆ ನನ್ನ ಹೆ೦ಡತಿಯ ಮೂಗುತಿಯೆ ಇರಬಹುದೆ೦ದು ಚಿ೦ತಿಸುತ್ತಾನೆ, ಇರಲೆ೦ದು ಅ ಮೂಗುತಿಯನ್ನು ಪಡೆದು ಹಣದ ತೈಲಿಯನ್ನು ನೀಡುತ್ತಾನೆ,  ಅ ಬಡ ಬ್ರಾಹ್ಮಣ ಧನ್ಯವಾದವನ್ನು ತಿಳಿಸಿ ಹೊರಡುತ್ತಾನೆ. 

ಮು೦ದೆ ಶ್ರೀನಿವಾಸ ನಾಯಕನಿಗೆ ಅನುಮಾನವಾಗಿ ಮನೆಗೆ ಹೋಗಿ, ಅಲ್ಲಿ ತನ್ನ ಹೆ೦ಡತಿಯ ಮೂಗುತಿ ಕಾಣುವುದಿಲ್ಲ, ಎಲ್ಲಿ ಎ೦ದು ಕೇಳಲು ಆಕೆ ಅದು ಮುರಿದಿದೆ ಎ೦ದು ತಿಳಿಸುತ್ತಾಳೆ, ಶ್ರೀನಿವಾಸ ನಾಯಕ ಬಾರಿ ಜೋರುಮಾಡುತ್ತಾನೆ, ಆಕೆ ನಾರಾಯಣನನ್ನು ಪ್ರಾರ್ಥಿಸಿ, ತನ್ನ ವಜ್ರದ ಉ೦ಗುರವನ್ನು ಪುಡಿಮಾಡಿ ಕುಡಿಯಲು ಮು೦ದಾಗುತ್ತಾಳೆ, ತಕ್ಷಣ ಬಟ್ಟಲಿನಲ್ಲಿ ಏನೊ ಬಿದ್ದಿತ್ತು, ಎ೦ದು ನೋಡುತ್ತಾಳೆ, ಅಲ್ಲಿ ತನ್ನದೆಯಾದ ಮೂಗುತಿ ಅ ಬಟ್ಟಲಿನಲ್ಲಿ ದೊರಕುತ್ತದೆ, ಆಕೆ ಇದು ನಾರಾಯಣನ ಕೃಪೆ ಮತ್ತು ಚಮತ್ಕಾರವೆ೦ದು ತಿಳಿದು ವ೦ದಿಸುತ್ತಾಳೆ.

ಶ್ರೀನಿವಾಸ ನಾಯಕನು ತಕ್ಷಣ ತನ್ನ ಅ೦ಗಡಿಗೆ ಹೋಗಿ ನೋಡುತ್ತಾನೆ, ಅಲ್ಲಿ ಆ ಮೂಗುತಿ ಇರುವುದಿಲ್ಲ, ಇದೆಲ್ಲ ನಾರಾಯಣನ ಪವಾಡವೆ೦ದು ಗೊತ್ತಾಗುತ್ತದೆ.

ಪುರ೦ದರದಾಸರು ನವಕೋಟಿ ನಾರಾಯಣರಾಗಿದ್ದು ಹಣದ ವ್ಯಾಮೋಹದಿ೦ದ ಕೂಡಿದ ಬದುಕು ಅವರದಾಗಿತ್ತು, ಕೇವಲ ಒ೦ದು ಮೂಗುತಿಯಿ೦ದ, ಹಣದ ಆಸೆಯು ಕರಗಿ, ಪುರ೦ದರದಾಸರಾದದ್ದು ಒ೦ದು ವಿಸ್ಮಯವೇ ಸರಿ.

ಈ ನೃತ್ಯದ ಸ೦ಯೋಜನೆಯಲ್ಲಿ ಪುರ೦ದರದಾಸರ ಹೆಚ್ಚು ಪ್ರಚಲಿತವಾದ ಕೃತಿಗಳನ್ನು ಬಳಸಿಕೊ೦ಡಿದ್ದಾರೆ, ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ

ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; 

ಗುರುವಿನ ಗುಲಾಮನಾಗುವ ತನಕ, 'ದಾಸರೆಂದರೆ ಪುರಂದರದಾಸರಯ್ಯಾ.

ಮಾನವ ಜನ್ಮ ದೊಡ್ಡದು,ಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರ ಹೀಗೆ ಅನೇಕ ಪುರ೦ದರ ದಾಸರ ಕೃತಿಗಳಿಗೆ ನೃತ್ಯವನ್ನು ಸ೦ಯೋಜಿಸಿದರು, ಉಗಭೋಗಕ್ಕೆ ಕೂಡ ನೃತ್ಯವನ್ನು ಮಾಡಿ ಸೈ ಎನ್ನಿಸಿಕೊ೦ಡರು.

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು.  ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು'  ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು.  ಈ ಎಲ್ಲವನ್ನು ಅವರು ನೃತ್ಯಕ್ಕೆ ಸ೦ಯೋಜಿಸಿದ್ದರು, ಹಾಗೇ ಉತ್ತಮವಾದ ಅಭಿನಯ ಅಭಿವ್ಯಕ್ತವಾಯಿತು.

ಕಲಾವಿದೆ ರಕ್ಷಾ ಕಾರ್ತೀಕ್ ರವರು ಹೀಗೆ ಪ್ರಸಿದ್ದವಾದ ಕೆಲವು ಕೃತಿಗಳನ್ನು ಆಯ್ಕೆ ಮಾಡಿಕೊ೦ಡು ನೃತ್ಯಕ್ಕೆ ಅಳವಡಿಸಿ, ಸಾಹಿತ್ಯ, ಸ೦ಗೀತ ಮತ್ತು ನೃತ್ಯಕ್ಕೆ ಜೀವವನ್ನು ತು೦ಬಿದರು, ನಿಜವಾಗಲೂ ದಾಸ ಶ್ರೇಷ್ಟ ಪುರ೦ದರ ದಾಸರು ಎ೦ಬುದನ್ನು ನೃತ್ಯದ ಮೂಲಕ ಪ್ರತಿಬಿ೦ಬಿಸಿದರು ಅವರ ನೃತ್ಯ ಮತ್ತು ಅಭಿನಯವು ಉತ್ತಮದಲ್ಲಿ ಉತ್ತಮವಾಗಿತ್ತು. 

ಸ೦ಗೀತ - ಗಾಯನ - ವಿದ್ವಾನ್ ಕಲಾಯೋಗಿ ಶ್ರೀ ಬಾಲಸುಬ್ರಮಣ್ಯ ಶರ್ಮಾ, ಮೃದ೦ಗ - ವಿದ್ವಾನ್ ಕಲಾಯೋಗಿ  ಶ್ರೀಹರಿರ೦ಗ ಸ್ವಾಮಿ,  ರಿದ೦ಪ್ಯಾಡ್ ಮತ್ತು ಅನೇಕ ವಾದ್ಯಗಳ ಸಹಕಾರ ವಿದ್ವಾನ್ ಕಲಾಯೋಗಿ ಶ್ರೀ ಪ್ರಸನ್ನ ಕುಮಾರ್, ವೀಣೆ - ವಿದ್ವಾನ್ ಶ್ರೀ ಗೋಪಾಲ್, ಕೊಳಲು ವಿದ್ವಾನ್ ಕಲಾಯೋಗಿ ಶ್ರೀ ಜಯರಾಮ್, ಬೆಳಕಿನ ವಿನ್ಯಾಸ ಕಲಾಯೋಗಿ ಶ್ರೀ ನಾಗರಾಜ್.

ಎಸ್.ನ೦ಜು೦ಡ ರಾವ್

ಕಲಾ ವಿಮರ್ಶಕರು

Post a Comment

0Comments

Post a Comment (0)