ಫೆಬ್ರವರಿ ಮುಗಿಯುತ್ತಿದ್ದ ಹಾಗೇ ಬಿಸಿಲಿನ ಧಗೆ ಏರುಗತಿಯಲ್ಲಿ ಸಾಗುತ್ತಿದೆ. ಎಲ್ಲೆಡೆಯು ತಾಪಮಾನ ಹೆಚ್ಚಾಗುತ್ತಲೇ ಇದೇ. ಇಂಥ ವೇಳೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇನ್ನಿಲ್ಲದ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮಧುಮೇಹಿಗಳು ಯಾವ ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂಬುದು ಅನೇಕರಲ್ಲಿ ಕಾಡುವ ಪ್ರಶ್ನೆ? ಈ ಕುರಿತು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಡಾ. ಟಿ ರಮಾಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ಬಿಸಿಲಿನ ತಾಪ ಹೆಚ್ಚಾದಂತೆಲ್ಲಾ ಆಗ್ಗಾಗ್ಗೆ ನೀರು ಕುಡಿಯಬೇಕು. ಧಗೆಗೆ ದಣಿವು ಆಯಾಸ ಹೆಚ್ಚಾಗುತ್ತದೆ, ಎಷ್ಟೇ ನೀರು ಕುಡಿದರೂ ಸಮಾಧಾನವಾಗುವುದಿಲ್ಲ. ಹೀಗಾಗಿ ಅನೇಕರು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಆದ್ರೆ ಎಲ್ಲರಂತೆ ಈ ತಂಪು ಪಾನೀಯಗಳ ಸೇವನೆ ಮಧುಮೇಹಿಗಳಿಗೆ ಸಲ್ಲದು. ಇದರಿಂದಾಗಿ ಅವರ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಮಧುಮೇಹಿಗಳು ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ.
ದೇಹ ಎಷ್ಟೇ ದಣಿದರೂ ದಾಹ ಎನಿಸಿದರೂ ಸಹ ಮಧುಮೇಹಿಗಳು ಆಲೋಚಿಸಿ ಪಾನೀಯಗಳನ್ನು ಸೇವಿಸಬೇಕು. ಏಕೆಂದ್ರೆ ನೀರು ಹೊರತು ಇತರೆ ಪಾನೀಯಗಳು ಹೆಚ್ಚಿನ ಸಕ್ಕರೆ ಅಂಶದಿಂದ ಕೂಡಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಿಗೆ ಕಾರಣವಾಗುತ್ತದೆ. ಬೇಸಿಗೆ ವೇಳೆ ನೀರು ಕಡಿಮೆ ಕುಡಿಯುವುದರಿಂದ ದೇಹ ಡಿಹೈಡ್ರೇಟ್ ಆಗುತ್ತದೆ. ಇದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ ಪ್ರಮಾಣ ಕಡಿಮೆಯಾಗುವುದು. ಆ ಮೂಲಕ ಜಠರದ ಉರಿತ, ಸಡಿಲವಾದ ಮಲ ಮತ್ತು ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲ್ಲದೆ ಮಧುಮೇಹಿಗಳು ಪಾಲಿಯುರಿಯಾ ಲಕ್ಷಣದಿಂದಾಗಿ ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆಯನ್ನು ಅನುಭವಿಸುತ್ತಾರೆ.
ವಾತಾವರಣವು ಅತಿಯಾದ ಬಿಸಿಲಿನಿಂದ ಕೂಡಿರುವಾಗ ಹೃದಯ ಸಂಬಂಧಿ ರೋಗಿಗಳನ್ನು ಹೊರತುಪಡಿಸಿ ಮಧುಮೇಹಿಗಳು ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನು ಸೇವಿಸಬೇಸಬೇಕು. ಅಲ್ಲದೆ ಮಧುಮೇಹ ಹೊಂದಿದವರು ಮಜ್ಜಿಗೆ, ಉಪ್ಪಿನಿಂದ ಕೂಡಿದ ನಿಂಬೆ ನೀರು ಮತ್ತು ಸೌತೆಕಾಯಿ ಚೂರುಗಳನ್ನು ಸೇವಿಸುವ ಮೂಲಕ ನೀರಿನ ದಾಹವನ್ನು ನೀಗಿಸಿಕೊಳ್ಳಬಹುದು. ನಿಯಮಿತವಾಗಿ ಕಲ್ಲಂಗಡಿ (ದಿನಕ್ಕೆ 100 ರಿಂದ 150 ಗ್ರಾಂ) ಸೇವನೆ, ಕಿತ್ತಳೆ ಮತ್ತು ಮೋಸಂಬಿ ಹಣ್ಣಿನ ಸೇವನೆ ಮಾಡಬಹುದು. ಈ ಹಣ್ಣುಗಳು ಹೆಚ್ಚಿನ ನೀರಿನಾಂಶದಿಂದ ಕೂಡಿರುತ್ತದೆ. ಹಾಗೆಯೇ ಸೂಪ್ ಕುಡಿಯಬಹುದು ಮತ್ತು ಗಂಜಿ ಸೇವಿಸಬಹುದು.
ಇವುಗಳನ್ನು ಸೇವಿಸಿದ್ರೆ ಆಪತ್ತು:
ಹಣ್ಣಿನ ರಸ, ಎಳನೀರು ಮತ್ತು ಬೆಲ್ಲ ಆಧಾರಿತ ಪಾನೀಯಗಳು ಹೆಚ್ಚಿನ ಸಕ್ಕರೆ ಅಂಶದಿಂದ ಕೂಡಿರುತ್ತದೆ. ಕಾಫಿ ಮತ್ತು ಚಹಾ ಹೆಚ್ಚಿನ ಸೇವನೆ ಹಾಗೂ ಗಿಡಮೂಲಿಕೆಗಳಿಂದ ಮಾಡಲಾದ ಕಷಾಯ ಸೇವಿಸುವುದರಿಂದ ದೇಹದಲ್ಲಿ ಅಸಿಡಿಟಿ/ಆಮ್ಲೀಯತೆ ಹೆಚ್ಚಾಗುತ್ತದೆ. ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಒಳಿತಲ್ಲ. ಬದಲಾಗಿ ಸಾಮಾನ್ಯವಾದ ನೀರಿಗೆ ನಿಂಬೆ ರಸ ಸೇರಿಸಿ ಕುಡಿದರೆ ದೇಹಕ್ಕೆ ಉಪಕಾರಿ.
ಯಾವ ಆಹಾರ ಪದಾರ್ಥಗಳು ಉತ್ತಮ ?
ಮಧುಮೇಹಿಗಳು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವಲ್ಲಿ ರಾತ್ರಿಯಿಡೀ ನೆನೆಸಿದ ಮೆಂತ್ಯೆ ನೀರು ಸಹ ಪ್ರಯೋಜನಕಾರಿ. ಜೊತೆಗೆ ಮೆಂತ್ಯೆ ಬೀಜವನ್ನು ಜಗಿದು ತಿಂದರೆ ಆರೋಗ್ಯಕ್ಕೆ ಇನ್ನಷ್ಟು ಲಾಭ ಸಿಗಲಿದೆ. ಏಕೆಂದ್ರೆ ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಅಲ್ಲದೆ ಜೀರಿಗೆ ನೀರಿನ ಸೇವನೆಗಿಂತ ಇದು ಹೆಚ್ಚು ಪ್ರಯೋಜನಕಾರಿ ಎಂದರೆ ತಪ್ಪಿಲ್ಲ. ಜೊತೆಗೆ ರಾಗಿ ಅಂಬಲಿ ಮತ್ತು ಮಜ್ಜಿಗೆ ಕುಡಿಯುವ ಮೂಲಕವೂ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬಹುದು.
ಅಪಾಯವೇನು ?
ಮಧುಮೇಹ ಹೊಂದಿರುವವರ ದೇಹವು ಸದಾ ಹೈಡ್ರೇಟ್ ಆಗಿರಬೇಕು, ಇಲ್ಲವಾದಲ್ಲಿ ಆಯಾಸ ಕಾಣಿಸಿಕೊಳ್ಳುತ್ತದೆ ಮತ್ತು ಇದು ಮೂತ್ರಪಿಂಡದಲ್ಲಿ ಗಾಯವನ್ನುಂಟು ಮಾಡುತ್ತದೆ. ಅದನ್ನು ರಕ್ತಪರೀಕ್ಷೆ ನಡೆಸುವ ಮೂಲಕ ಪತ್ತೆ ಹಚ್ಚಬಹುದು.
ಹೀಗಾಗಿ ಮಧುಮೇಹ ಸಮಸ್ಯೆ ಹೊಂದಿರುವವರು ಬೇಸಿಗೆ ಹೆಚ್ಚಾದಾಗ ದೇಹವು ಸದಾ ಹೈಡ್ರೇಟ್ ಆಗಿಟ್ಟುಕೊಳ್ಳುವುದರ ಜೊತೆಗೆ ಸದಾ ಆರೋಗ್ಯಯುತವಾಗಿಟ್ಟುಕೊಳ್ಳುವುದರತ್ತ ಕಾಳಜಿವಹಿಸಿ ಎಂದು ತಜ್ಞೆ ಡಾ. ರಮಾಲಕ್ಷ್ಮಿ ಸಲಹೆ ನೀಡಿದ್ದಾರೆ.
ಈ ಪತ್ರಿಕಾ ಪ್ರಕಟಣೆಯನ್ನು ನಿಮ್ಮ ಗೌರವಾನ್ವಿತ ಮಾಧ್ಯಮದಲ್ಲಿ ಪ್ರಕಟಿಸಲು ಮನವಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6364466240, 636440965
*Diabetics should avoid tender coconut and carbonated drinks during summer*
As Bengalureans are already feeling the heat of summer, hydration is key. While normal people can consume liquids to keep hydrated, the biggest challenge is for diabetics as they cannot drink all the liquids like normal people. Renowned dietician Dr T Ramalakshmi from Vasavi Hospitals stressed the importance of proper hydration for diabetics. She said, "As dehydration can lead to electrolyte imbalances, acute gastroenteritis, loose stools, and even kidney issues. Moreover, diabetic patients experience excessive thirst and frequent urination due to polyuria symptoms."
She said that diabetics except cardiac patients need to consume two to three liters of water daily. "Diabetics can consume buttermilk, lime water with salt, and cucumber slices can help maintain hydration. While most fruits should be avoided, watermelon in controlled portions (100-150 grams once a day), oranges, and mosambi are permissible as they have high water content.The other options could be soups or ganji can also be beneficial."
What to Avoid:
She said, "Fruit juices, tender coconut water, and jaggery-based drinks due to high sugar content. There is also a need to avoid excessive coffee, tea, and herbal decoctions (kashaya) as they can increase acidity. Lime juice in hot water should be avoided; it is best consumed in normal water."
She said that fenugreek water is recommended, but the seeds should be chewed after soaking overnight, as it contains mucilage and antioxidants, making it more beneficial than cumin (jeera) water.
She said that people, especially diabetics should ensure that there is no dehydration as it can cause fatigue and kidney injury, which can be detected through blood tests. "Diabetics must stay well-hydrated to prevent complications and ensure overall well-being during the summer months. Diabetics can also consume ragi malt mixed with plain water or butter milk can be consumed", she added.
Request you to publish this in your esteemed media.
For more details, Contact: 6364409651, 6364466240