, ದೇಶದ ಮಹಾನಗರಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಗೆ ಕಡಿತ ಘೋಷಿಸಲಾಗಿದೆ. ಏಪ್ರಿಲ್ 1, 2025ರಿಂದ ಪ್ರಾರಂಭವಾಗುವ ಹೊಸ ದರಗಳ ಪ್ರಕಾರ, ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿ ಪ್ರತಿ ವಾಣಿಜ್ಯ ಸಿಲಿಂಡರ್ ಬೆಲೆಗೆ ಸರಾಸರಿ 40 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಆದರೆ, ಗೃಹಬಳಕೆದಾರರಿಗೆ ಸಂಬಂಧಿಸಿದ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಭಾರತೀಯ ತೈಲ ಸಂಸ್ಥೆಗಳ (ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ) ಪ್ರಕಾರ, ನೂತನ ದರ ಪಟ್ಟಿಯಲ್ಲಿ ಪ್ರಮುಖ ನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಈ ಬದಲಾವಣೆಗಳಾಗಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಪ್ರಕಾರ, ಈ ಬೆಲೆ ಕಡಿತವು ವಾಣಿಜ್ಯ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚಿನ ಸಹಾಯವಾಗಲಿದೆ. ಇದರಿಂದಾಗಿ ಅವರ ಕಾರ್ಯಾಚರಣೆ ವೆಚ್ಚಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾರ್ಚ್ 2024 ನಂತರ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ 11 ತಿಂಗಳಿಂದ ಈ ಬೆಲೆ ಸ್ಥಿರವಾಗಿದೆ.
ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ವಾರದಲ್ಲಿ ಸಿಲಿಂಡರ್ ದರಗಳ ಪರಿಶೀಲನೆ ನಡೆಸಿ, ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತು ಸಬ್ಸಿಡಿ ಸ್ಥಿತಿಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತವೆ. ಗೃಹಬಳಕೆದಾರರಿಗೆ ಸಹಾಯಧನೆ ನೀಡುವ ನೀತಿಯಿಂದಾಗಿ, ಇತ್ತೀಚಿನ ವರ್ಷಗಳಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿ ಉಳಿದಿದೆ.
LPG ದರಗಳನ್ನು ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳು ಪುನರ್ ವಿಮರ್ಶೆ ನಡೆಯುತ್ತದೆ. ಇದರಲ್ಲಿ ಅಂತರರಾಷ್ಟ್ರೀಯ ಕ್ರೂಡ್ ಆಯಿಲ್ ಬೆಲೆ, ಸಾಗಣೆ ವೆಚ್ಚ, ಮತ್ತು ಸರ್ಕಾರದ ಸಬ್ಸಿಡಿ ನೀತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ವಾಣಿಜ್ಯ ಸಿಲಿಂಡರ್‌ಗಳಿಗೆ ಸಹಾಯಧನ ಕಡಿಮೆ ಇರುವುದರಿಂದ, ಅವುಗಳ ಬೆಲೆಗಳು ಹೆಚ್ಚು ಏರಿಳಿತಕ್ಕೊಳಗಾಗುತ್ತವೆ. ರೆಸ್ಟೋರೆಂಟ್, ಬೇಕರಿ, ಮತ್ತು ಉತ್ಪಾದನಾ ಘಟಕಗಳಂತಹ ಸಣ್ಣ-ದೊಡ್ಡ ವಾಣಿಜ್ಯ ಸಂಸ್ಥೆಗಳು LPG ಅನ್ನು ಉರುವಲಾಗಿ ಅವಲಂಬಿಸಿವೆ. 40 ರೂ. ರಿಯಾಯಿತಿಯಿಂದ ಅವರ ಮಾಸಿಕ ವೆಚ್ಚದಲ್ಲಿ ಸಾವಿರಾರು ರೂಪಾಯಿ ಉಳಿತಾಯವಾಗಲಿದೆ.