ತದಿಗೆ ಗೌರಿ ಪೂಜೆ

varthajala
0



ಚೈತ್ರ ಮಾಸದ ತದಿಗೆ ಗೌರಿ ಪೂಜೆ ಮಾಡುತ್ತಾರೆ. ಈ ಮಾಸದ 2 ತದಿಗೆ ಗೌರಿ ಪೂಜೆ ಮಾಡುವರು.ಅಕ್ಷಯ ತದಿಗೆ ಪೂಜೆ ಹಾಗು ಬಂಗಾರ ಖರೀದಿ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧವಾಗಿದೆ. ತದಿಗೆ ಹಿಂದಿನ ದಿನ ಸ್ನಾನ ಮಾಡಿ ಹೆಂಗಸರು ಮಡಿಯಲ್ಲಿ ಮಡಿಸೀರೆ,ಕುಪ್ಪಸ ಹರವುತ್ತಾರೆ.ಮಡಿನೀರು ಬಿಂದಿಗೆಯಲ್ಲಿ ಹಿಡಿದಿರುತ್ತಾರೆ.

ಮರುದಿನ ಎಣ್ಣೆ ಸ್ನಾನ ಅಥವಾ ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿಕೊಂಡು ಮಡಿ ವಸ್ತ್ರ ಧರಿಸಿ ಅಂಬಿನಕಂಧಿಲಿಗೆ ಪೂಜೆ ಮಾಡುವರು.ಇದು ಗೌರಿ ಪೂಜೆ.ಅಂಬಿನಕಂಧಿಲು ಪೂಜಾ ಪದ್ಧತಿ ಇಲ್ಲದವರು ಗೌರಿ ಅಥವಾ ಅನ್ನಪೂರ್ಣೇಶ್ವರಿ ವಿಗ್ರಹಕ್ಕೆ ಷೋಡಶೋಪಚಾರ ಪೂಜೆ ಮಾಡುವರು.ನೈವೇದ್ಯಕ್ಕೆ ಏನಾದರೂ ಸಿಹಿ, ಅನ್ನ, ಹಣ್ಣುಗಳು ಇಡುವರು.ನಂತರ ಮುತ್ತೈದೆಯರನ್ನು ಕರೆದು ಉಪ್ಪಕ್ಕಿ ಬಾಗಿನ ನೀಡುವರು.ಯುಪ್ಪಕ್ಕಿ ಬಾಗಿನ ಎಂದರೆ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಜೊತೆ ಅರಿಸಿನ ಕುಂಕುಮ ಬಳೆಗಳು ಹಣ್ಣು, ರವಿಕೆ ಕಣ ಇತ್ಯಾದಿ ನೀಡುವರು.ಬೇಕಾದರೆ ಕುಡಿಯಲು ಪಾನಕ ಅಥವಾ ಹಾಲು ನೀಡಬಹುದು.

ಈ ಪೂಜೆ ಎಂದಿನಂತೆ ಗೌರಿಯನ್ನು ಸೌಭಾಗ್ಯಕ್ಕಾಗಿ ಬೇಡುವ ಪೂಜೆ. ಈ ಪೂಜೆ ಎಲ್ಲರಲ್ಲೂ ಇರುವುದಿಲ್ಲ.ಬೇಕಾದರೆ ಹಬ್ಬದಡುಗೆ ಈ ದಿನ ಮಾಡಬಹುದು. ಸಂಜೆ ಆರತಿ ಮಾಡಬಹುದು.

ವೈಚಾರಿಕವಾಗಿ ನೋಡಿದರೆ ಹೊಸ ವರುಷ ಚೈತ್ರದ ಮಾಸದಲ್ಲಿ ಬರುವ ಬೆಳೆ ಹಾಗು ದೇಹ ತಂಪಾಗಿಸಲು ಹಣ್ಣಿನ ಪಾನಕ ಕೋಸಂಬರಿ ಇತ್ಯಾದಿ ಸೇವನೆ ಆರೋಗ್ಯ.

ಮುತ್ತೈದೆಯರ ಮಿಲನದಿಂದ ಸಾಮಾಜಿಕ ಭಾಂದವ್ಯ ಗಟ್ಟಿ ಆಗುತ್ತದೆ. ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ. ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ 


ರಾಧಿಕಾ ಜಿ ಎನ್ 

ಟೀವೀ ಹೋಸ್ಟ್ 

brahmies@gmail.com

Post a Comment

0Comments

Post a Comment (0)