ಶ್ರೀ ಕ್ಷೇತ್ರ ಶಿರಸಂಗಿ ಶ್ರೀ ಕಾಳಿಕಾದೇವಿ ಯುಗಾದಿ ಯಾತ್ರಾ ಮಹೋತ್ಸವ - ಶಿಲ್ಪಿ ಡಾ.ಅರುಣ ಯೋಗಿರಾಜಗೆ ಪ್ರಶಸ್ತಿ ಪ್ರದಾನ

varthajala
0

ಶಿರಸಂಗಿ: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶಿರಸಂಗಿಯಲ್ಲಿ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾದೇವಿಯ ಸಾಂಪ್ರದಾಯಿಕ ಯುಗಾದಿ ಯಾತ್ರಾ ಮಹೋಯತ್ವವವು ಅದ್ದೂರಿಯಾಗಿ ಜರುಗಲಿದ್ದು, ಇಂದು ಧಾರ್ಮಿಕ ಸಾಂಸ್ಕೃತಿಕ ಸಭೆ ಹಾಗೂ ಧಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಯೋದ್ಯ ಬಾಲರಾಮನ ಮೂರ್ತಿ ನಿರ್ಮಾತೃ ಮೈಸೂರಿನ ಶಿಲ್ಪಿ ಡಾ.ಅರುಣ ಯೋಗಿರಾಜ ಆಗಮಿಸುತ್ತಿದ್ದು ಅವರಿಗೆ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯಿAದ ವಿಶ್ವಕರ್ಮ ಶಿಲ್ಪಕಲಾ ರತ್ನ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರೇಮಾದನಹಲ್ಳಿ ಸುಜ್ಞಾನಪೀಠ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು, ಹಾಗೂ ಸಾನಿಧ್ಯವನ್ನು ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮಿಗಲು, ಕಾಳಿಕಾ ದೇವಸ್ಥಾನದ ಅರ್ಚಕರಾದ ತೇಜಪ್ಪಾಚಾರ್ಯ ಮೂಕಿ ವಹಿಸುವರು. 


ಸವದತ್ತಿಯ ಶಾಸಕ ವಿಶ್ವಾಸ ವಸಂತ ವೈದ್ಯರವರು ಕಾರ್ಯಕ್ರಮವನ್ನು ಉಧ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ಸತಿಶ ಜಾರಕಿಹೊಳಿ, ಸಂಸದರಾದ ಜಗದೀಶ ಶೆಟ್ಟರ, ಪ್ರಿಕಾಂಕ ಜಾರಕಿಹೊಳಿ, ಶಾಸಕರಾ ಬಾಲಚಂದ್ರ ಜಾರಕಿಹೊಳಿ, ಹುಬ್ಬಳ್ಳಿ ದಾರವಾಡ ಮಹಾನಗರ ಪಾಲಿಕಯ ಮಹಾ ಪೌರರಾದ ರಾಮಣ್ಣ ಬಡಿಗೇರ, ಅತಿಥಿಗಳಾಗಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ, ಮೈಸೂರಿನ ಸಿದ್ದೊಒಆಜಿ, ಡಾ.ಪವಿತ್ರಾ ಆಚಾರ್ಯ, ಡಾ.ನಾಗರಾಜ ಆಚಾರ್ಯ, ವಿನಾಯಕ ಆಚಾರ್ಯ, ಶ್ರೀರಾಜೇಶ, ಗಜಾನನ ಸುತಾರ,ಸುರೇಶ ಪತ್ತಾರ, ಕಿರಣ ಪತ್ತಾರ ಭಾಗವಹಿಸುವರು. ವಿಶೇಷ ಸಾಧಕರಾದ ವೈಶಾಲಿ ಸುತಾರ, ಹಾಗೂ ಅಶೋಕ ಸುತಾರ ಆಗಮಿಸುವರು.,ಇದೇ ಸಂಧರ್ಭದಲ್ಲಿ ಸಿ.ಪಿ.ಮಾಯಾಚಾರ ಸಂಪಾದಿತ ವಿಶ್ವಕರ್ಮ ವಿಕಾಸ ಚಂದ್ರಿಕೆ, ಮೌನೇಶ ಬಡಿಗೇರ ಸಂಪಾದಿತ ಕಾಳಿಕಾ ಸಂದೇಶ ಪತ್ರಿಕೆಗಳ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಎಂ.ವಾಯ ಮನ್ವಾಚಾರ್ಯರ ಹಿಂದಿ ಪರಿಷ್ಕರಣೆಯ ಕಾಳಿಕಾ ಕ್ಷೇತ್ರ ದರ್ಶನ,  ಹಂಪಿ ವಾಸುದೇವ ಬಡಿಗೇರ, ಡಾ. ಗಂಗಾಧರ ದೈವಜ್ಞರವರ ಸಂಪಾದಿತ ಶಿರಸಂಗಿ ಕಾಳಮ್ಮ (ಚಾರಿತ್ರಿಕ ಅಧ್ಯಯನ ಮತ್ತು ಆರಾಧನಾ ಪರಂಪರೆ) ಗ್ರಂಥ ಬಿಡುಗಡೆ ಮತು ಶಿವಪ್ಪ ಬಡಿಗೇರ ಸಂಪಾದಿತ ವಿಶ್ವಕರ್ಮ ಪ್ರಕಾಶ  ಗ್ರಂಥ ಬಿಡುಗಡೆ ಮಾಡಲಾಗುವುದು. ವಿಶ್ವಕರ್ಮ ಪ್ರತಿಷ್ಠಾನ ಶಿರಂಗಿಯ ಮೌನೇಶ್ವರ ಸುಳ್ಳದ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೋ, ಪಿ.ಬಿ. ಬಡಿಗೇರ ಈ ಎಲ್ಲ ಕಾರ್ಯಕ್ರಮದ ನೇತೃತ್ವದಲ್ಲಿ ನಡೆಯಿಲಿವೆ, 

ಕಾರ್ಯಕ್ರಮಕ್ಕೂ ಮುಂಚೆ  ಪ್ರಾತ;ಕಾಲ ಸಂಸ್ಥೆಯ ವತಿಯಿಂದ ಕಾಳಿಕಾದೇವಿ ಪಂಚಾಮೃತ ಅಭಿಷೇಕ, ೮ಗಂಟೆ ಕಾಲಕಾದೇವಿಗೆ ಹೊಸಗೋದಿ ನೀಧಿ ಹಾಗೂ ಕಾಣಿಕೆ ಸಮರ್ಪಣೆ ಮತ್ತು ದೇವಿ ದರ್ಶನ, ೯ಗಂಟೆಗೆ ಸಂಸ್ಥೆಯ ಅಧ್ಯಕ್ಷರಾದ ಪ್ರೋ.ಪಿ.ಬಿ.ಬಡಿಗೇರ ಅವರಿಂದ ವಿಶ್ವಕರ್ಮ ಧ್ವಜಾರೋಣ, ೧೦ಗಂಟೆ ದೇವಿ ಪಾರಾಯಣ, ಸಂಜೆ ಗಂಗಾ ಪೂಜೆಯೊಂದಿಗೆ ಗಂಗಾ ಆರತಿ ಜರುಗಿದೆ ಆದ ಕಾರಣ ಎಲ್ಲ ಸದ್ಭಕ್ತರು ಭಾಗವಹಿಸಬೇಕೆಂದು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


Post a Comment

0Comments

Post a Comment (0)