ಕಸಕ್ಕೂ ಕಾಸು ಕಟ್ಬೇಕಿದೆ ನಾಳೆಯಿಂದ...?!!!

varthajala
0

ಬೆಂಗಳೂರು: ರಾಜ್ಯದ ಜನತೆಗೆ ಬಸ್, ಮೆಟ್ರೋ ಬಳಿಕ ಹಾಲು, ಮೊಸರು, ವಿದ್ಯುತ್‌ ದರ ದುಬಾರಿಯಾಗಲಿದೆ. ಅಷ್ಟೇ ಅಲ್ಲದೇ ಏಪ್ರಿಲ್‌ 1ರಿಂದ ಕಸಕ್ಕೂ ಸೆಸ್.....

ಇಂಧನ ಇಲಾಖೆ ನೌಕರರ ಪಿಂಚಣಿ ಗ್ರಾಚ್ಯೂಟಿಗಾಗಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದ್ದ ಸರ್ಕಾರ ಅದೇ ಮಾದರಿಯಲ್ಲಿ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡಲು ಹೊರಟಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು-ಮೊಸರಿನ ಬೆಲೆಯನ್ನು ನಾಲ್ಕು ರೂಪಾಯಿ ಹೆಚ್ಚಿಸಿದೆ. ಹೀಗಾಗಿ ಪ್ರಸಕ್ತ ವರ್ಷ ಏಪ್ರಿಲ್‌ 1ರಿಂದ ದುನಿಯಾ ಮತ್ತಷ್ಟು ದುಬಾರಿಯಾಗಲಿದೆ.

ಮೊಸರು: ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್‌ನಲ್ಲಿ ಕಾಫಿ, ಟೀ ಸದ್ಯದಲ್ಲೇ ಏರಿಕೆ ಸಾಧ್ಯತೆಯಿದೆ.



ವಿದ್ಯುತ್‌: ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ, ಅಲ್ಲದೇ ಮಾಸಿಕ ಶುಲ್ಕ 20 ರೂ. ಹೆಚ್ಚಳ, ಇದರಿಂದ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಏರಿಕೆಯಾಗಿದೆ.

ಕಸ ಸಂಗ್ರಹ ಸೆಸ್ (ಮಾಸಿಕ)

ವಸತಿ ಕಟ್ಟಡ:

600 ಚದರಡಿವರೆಗೆ – 10 ರೂ., 601-1000 ಚದರಡಿ – 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000 ಚದರಡಿ ಮೇಲ್ಪಟ್ಟು – 400 ರೂ.

ವಾಣಿಜ್ಯ ಕಟ್ಟಡ:

ನಿತ್ಯ 5ಕೆಜಿವರೆಗೆ – 500 ರೂ. 

ನಿತ್ಯ 10 ಕೆಜಿವರೆಗೆ – 1400 ರೂ. 

ನಿತ್ಯ 25 ಕೆಜಿವರೆಗೆ – 3500 ರೂ. 

ನಿತ್ಯ 50 ಕೆಜಿವರೆಗೆ – 7000 ರೂ., 

ನಿತ್ಯ 100 ಕೆಜಿವರೆಗೆ – 14000 ರೂ.


ಹೊಸ ವಾಹನ ಖರೀದಿಗೆ ಹೆಚ್ಚುವರಿ ಸೆಸ್: ಉಕ್ಕು, ಬಿಡಿಭಾಗ ದುಬಾರಿ, ಇದರ ಜೊತೆಗೆ ಬಿಡಿ ಭಾಗ, ಉಕ್ಕುಗಳ ಆಮದು ದರ ಕೂಡ ಏಪ್ರಿಲ್‌ನಿಂದ ಏರಿಕೆಯಾಗುತ್ತಿದೆ. ಇದರ ಪರಿಣಾಮ ಏಪ್ರಿಲ್ 1 ರಿಂದ ವಾಹನ ಬೆಲೆ ದುಬಾರಿಯಾಗುತ್ತಿದೆ.

ಮುದ್ರಾಂಕ ಶುಲ್ಕ: 50ರೂ.ನಿಂದ 500ರೂ.ಗೆ ಹೆಚ್ಚಳ

ಅಫಿಡವಿಟ್ ಶುಲ್ಕ: 20 ರೂ.ನಿಂದ 100 ರೂ. ಏರಿಕೆ

ಶೀಘ್ರ ನೀರಿನ ದರ ಏರಿಕೆ:

ಲೀಟರ್‌ಗೆ ಒಂದು ಪೈಸೆ ಏರಿಕೆ. ಏ.1ರಿಂದ ಜಾರಿ ಆಗುವ ಸಾಧ್ಯತೆಯಿದೆ.


Post a Comment

0Comments

Post a Comment (0)