ಗಾಂಧಿಬಜಾರಿನ ಶ್ರೀ ವ್ಯಾಸರಾಜ ಮಠದಲ್ಲಿ ಅನುಷಾ ಗಾಯನ

varthajala
0


ಬೆಂಗಳೂರು : ಗಾಂಧಿಬಜಾರಿನಲ್ಲಿರುವ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀವ್ಯಾಸರಾಜ ಗುರುಸಾರ್ವಭೌಮರ ಪೂರ್ವಾರಾಧನೆ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಅನುಷಾ ರಾಘವೇಂದ್ರ ಅವರು ತಾರತಮ್ಯೋಕ್ತವಾಗಿ  "ಗುರುಮಧ್ವರಾಯರಿಗೆ ನಮೋ ನಮೋ" ಎಂಬ ಗುರುಸ್ತುತಿಯೊಂದಿಗೆ  ಕಾರ್ಯಕ್ರಮವನ್ನು ಆರಂಭಿಸಿ, "ಗಜಮುಖನೇ ಸಿದ್ಧಿದಾಯಕನೇ", "ಮಂತ್ರಾಲಯ ನಿವಾಸ ಉತ್ತಮ ಹಂಸ", "ವಾದಿರಾಜ ಮುನಿಪ" "ಜಯ ಜಯ ವೈಷ್ಣವ", "ಶಿವನೇ ನಾ ನಿನ್ನ ಸೇವಕನಯ್ಯ ", "ಜಯವಾಯು ಹನುಮಂತ", "ಬಾರೇ ನಮ್ಮನೀತನಕ", "ರಂಗ ಮನೆಗೆ ಬಾರೋ", "ಲೋಕಭರಿತನೋ ರಂಗ ಅನೇಕ ಚರಿತನೋ", "ಮನ್ನಿಸೋ ಶ್ರೀ ವೆಂಕಟೇಶ", "ತೊರೆದು ಜೀವಿಸಬಹುದೇ", "ನಾನೇನ ಮಾಡಿದೆನೋ ", "ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೇ" ಹೀಗೆ ಇನ್ನೂ ಹಲವಾರು ಅಪರೂಪದ ಹರಿದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಶ್ರೀ ಶ್ರೀಪಾದದಾಸ್ ಮತ್ತು ತಬಲಾ ವಾದನದಲ್ಲಿ ಶ್ರೀ ಗೋಪಾಲ ಗುಡಿಬಂಡೆ ಸಾಥ್ ನೀಡಿದರು.

Post a Comment

0Comments

Post a Comment (0)