ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88ನೇ ಜಯಂತೋತ್ಸವದ ಅಂಗವಾಗಿ ನಾಡಿನ ಖ್ಯಾತ ಧಾರ್ಮಿಕ ಚಿಂತಕ ಶ್ರೀರಂಗಪಟ್ಟಣದ ಡಾ. ವಿ.ಭಾನುಪ್ರಕಾಶ್ ಶರ್ಮ ಮತ್ತು ಕರುಣಾಮಯಿ ವಿಶೇಷ ಚೇತನರ ಸಂಸ್ಥೆಯ ಗೌರವಾಧ್ಯಕ್ಷ ಎನ್.ಶ್ರೀಧರ ದೀಕ್ಷಿತ್ ರವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ನೆರವೇರಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಿಇಒ ಕೆ.ಆರ್.ಯೋಗ ನರಸಿಂಹನ್ ಭಾಗವಹಿಸಿದ್ದರು.
ಹಿರಿಯ ಸಮಾಜ ಸೇವಕ ಡಾ. ಕೆ.ರಘು ರಾಮ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ಅಧ್ಯಕ್ಷ ಸಂಸ್ಕೃತಿ ಚಿಂತಕ ಅಂಕಣಕಾರ ಬೆಂಗಳೂರಿನ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಸ್ತಾವಿಕ ನುಡಿಯಲ್ಲಿ ನಶಿಸಿಸುತ್ತಿರುವ ಸನಾತನ ಪರಂಪರೆ ಪುನಾರುತ್ತಾನ ದಲ್ಲಿ ಫೌಂಡೇಶನ್ ವತಿಯಿಂದ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ವಿದ್ಯಾರಣ್ಯಪುರಂ ನಲ್ಲಿರುವ ವಾಸುದೇವ ಮಹಾರಾಜರ ಪೂರ್ವಾಶ್ರಮದ ಮನೆಯಲ್ಲಿ ಅವರ ಪುತ್ರ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದ ಎಂ.ವಿ ನಾಗೇಂದ್ರ ಬಾಬು ರವರು 75 ಕೆಜಿ ತೂಕದ ಶಿಲಾವಿಗ್ರಹವನ್ನು ಸ್ಥಾಪಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಶೀಘ್ರದಲ್ಲಿ ಆಶ್ರಮ ಸ್ಥಾಪಿಸಿ ಬೃಹತ್ ಪ್ರಮಾಣದಲ್ಲಿ ಅಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸುವ ಒಂದು ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಸಂಚಾಲಕ ಎನ್ ಅನಂತ ಅವರು ಕಾರ್ಯಕ್ರಮ ನಿರೂಪಿಸಿದರು. ಜೈಸಿಂಹ, ಮ.ನ.ಲತಾ ಮೋಹನ್, ಕಡಕೋಳ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.