ಬಸವನಗುಡಿ: ಡೊಡ್ಡಗಣಪತಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ ಮತ್ತು ನಗರ ಜಿಲ್ಲಾ ಪ್ರತಿನಿಧಿಗಳ ಚುನಾವಣೆ ಪ್ರಯುಕ್ತ ಚುನಾವಣೆ ಪ್ರಚಾರ ಶುಭಾರಂಭಿಸಲು ವಿಶೇಷ ಪೂಜೆ ಸಮಾರಂಭ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಅಭ್ಯರ್ಥಿ ಎಸ್.ರಘುನಾಥ್ ರವರು ಮತ್ತು ನಿಕಟಪೂರ್ವ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು, ವಿಪ್ರ ಮುಖಂಡರಾದ ಅರುಳು ಮಲ್ಲಿಗೆ ಪಾರ್ಥಸಾರಥಿ, ನರಸಿಂಹನ್, ವಿಶೇಷ ಪೂಜೆ ಸಲ್ಲಿಸಿದರು.
ನಗರ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಾಜಶೇಖರ್ ಜಿ.ರಾವ್, ಸತೀಶ್ ಉರಾಳ್ ,ಜಿ ಎಸ್ ನಾಗೇಶ್, ಕೆ.ಎನ್. ರವಿಕುಮಾರ್, ಎ ದಿಲೀಪ್ ಕುಮಾರ್,ಶ್ರೀನಿವಾಸ ಪಿ ರಾಘವನ್,ಎಸ್. ಎಸ್.ಪ್ರಸಾದ್ ಶ್ರೀಮತಿ ಅಂಬಿಕಾ ರಾಮಚಂದ್ರ ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್.ರಘುನಾಥ್ ರವರು ಮಾತನಾಡಿ ವಿಪ್ರ ಸಮುದಾಯದ ಆರ್ಥಿಕವಾಗಿ, ಶೈಕ್ಷಣಿಕ, ರಾಜಕೀಯವಾಗಿ ಸಬಲರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸಾಧನೆ, ಯೋಜನೆಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಮತಯಾಚನೆ ಮಾಡುತ್ತಿದ್ದೇವೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಪ್ರಯುಕ್ತ ರಾಜ್ಯಾದ್ಯಂತ ಚುನಾವಣೆ ಪ್ರವಾಸದಲ್ಲಿ ವಿಪ್ರ ಸಮುದಾಯ ಮತ್ತು ಮುಖಂಡರುಗಳಿಂದ ಉತ್ತಮ ಬೆಂಬಲ, ಸಹಕಾರ ನೀಡುತ್ತಿದ್ದಾರೆ. ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹೊಸ ಚೈತನ್ಯ, ನವಶಕ್ತಿ ಹೊಸ ದಿಕ್ಕಿನತ್ತ ಸಾಗಲಿದೆ ಎಂದು ಹೇಳಿದರು.
ಆರ್.ಲಕ್ಷ್ಮಿಕಾಂತ್ ರವರು ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ಹೋದ ಕಡೆಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ಬಾರಿ ಎಸ್.ರಘುನಾಥ್ ರವರ ತಂಡ ಅತ್ಯಧಿಕ ಮತಗಳಿಂದ ಜಯಭೇರಿ ಬಾರಿಸಲಿದೆ.
ವಿಪ್ರ ಸಮುದಾಯ ಏಳಿಗೆಗಾಗಿ ನಮ್ಮ ಯೋಜನೆಗಳನ್ನು ರೂಪಿಸಲಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯದ ಪ್ರತಿ ಮನೆಯ ವಿಪ್ರರ ಕುಟುಂಬಗಳಿಗೆ ತಲುಪವಂತೆ ಮಾಡಲಾಗುವುದು ಎಂದು ಹೇಳಿದರು. ವಿಪ್ರ ಸಮುದಾಯದ ಮುಖಂಡರುಗಳು, ಸಿ.ವಿ.ಎಲ್.ಶಾಸ್ತ್ರೀ ಮತ್ತು ಬಿ.ಎನ್.ವಿ.ಸುಬ್ರಮಣ್ಯರವರ ಅಭಿಮಾನಿಗಳು ಉಪಸ್ಥಿತರಿದ್ದರು.