ಸಮಾರೋಪ ಕಾರ್ಯಕ್ರಮ

varthajala
0

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಿದ್ಯಾರಣ್ಯಪುರದ ಅಲಸೂರಮ್ಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಪದಾಧಿಕಾರಿಗಳ ಸಹಕಾರದೊಂದಿಗೆ ಮಾರ್ಚ್ 18 ರಿಂದ 21ರ ವರೆಗೆ ನಾಲ್ಕು ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೊದಲ ಮೂರು ದಿನಗಳು ವಿವಿಧ ಭಜನಾ ಮಂಡಳಿಗಳಿಂದ ಭಜನೆ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರಿಂದ "ಮಹಾಭಾರತದ ಮಹಾನ್ ಸ್ತ್ರೀಯರು" ವಿಷಯವಾಗಿ ಪ್ರವಚನ ನಡೆಯಿತು.

ನಾಲ್ಕನೇ ದಿನದಂದು   "ಹರಿನಾಮ ಸಂಕೀರ್ತನೆ"  ಕಾರ್ಯಕ್ರಮದಲ್ಲಿ ಕು|| ಪ್ರಣೀತಾ ಟಿ. ಮಣೂರ್ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಹಾಡಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಅಖಿಲಾ ಮತ್ತು ಮೃದಂಗ ವಾದನದಲ್ಲಿ ಅಜಯ್ ಆದಿತ್ಯ ಸಾಥ್ ನೀಡಿದರು. ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಎಲ್ಲಾ ದಿನಗಳಂದೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.

Post a Comment

0Comments

Post a Comment (0)