ರೈತರಿಗೆ ಸೇರಬೇಕಾದ 600 ಕೋಟಿ ಪೆÇ್ರೀತ್ಸಾಹಧನ ಬಾಕಿ- ಹಾಲಿನ ದರ ಏರಿಕೆ ವಿರುದ್ಧ ಹೋರಾಟ: ಬೇಳೂರು ರಾಘವೇಂದ್ರ ಶೆಟ್ಟಿ

varthajala
0

ಬೆಂಗಳೂರು: ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ರೈತರ, ಗ್ರಾಹಕರ ಪರವಾಗಿ ಮತ್ತು ಸರ್ಕಾರದ ಈ ನಿರ್ಣಯದ ವಿರುದ್ಧ ರಾಜ್ಯ ಬಿಜೆಪಿ ಹಾಲು ಪ್ರಕೋಷ್ಠವು ಉಗ್ರ ಹೋರಾಟ ಮಾಡಲಿದೆ. ಅಲ್ಲದೆ, ಗ್ರಾಹಕರಿಗೆ ಮತ್ತು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬೇರೆ ಸಂಸ್ಥೆಗಳ ಹಾಲು ಉತ್ಪಾದಕರಿಗೆ ಲಾಭ ಮಾಡಿ ಕೊಟ್ಟು ಕಿಕ್ ಬ್ಯಾಕ್ ತೆಗೆದುಕೊಂಡು ನಮ್ಮ ರಾಜ್ಯದ ಸಂಸ್ಥೆಯೇ ಕತ್ತು ಹಿಸುಕುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಬೆಲೆ ಏರಿಕೆ ಭಾಗ್ಯ ನೀಡುತ್ತಿದ್ದು, ಅದು ದಿನದಿಂದ ದಿನಕ್ಕೆ ಜನರ ಜೇಬಿಗೆ ಬೆಂಕಿ ಇಡುತ್ತಿದೆ. ಬೆಳಗ್ಗೆ ಜನರು ಖರೀದಿಸುವ ಹಾಲಿನಿಂದ ಹಿಡಿದು ಆಲ್ಕೊಹಾಲ್ ವರೆಗೆ, ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರದ ವರೆಗೆ ಎಲ್ಲಾ ಬೆಲೆ ಏರಿಸಿ ಜನರ ಜೀವನ ಹೈರಾಣಾಗಿಸಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಹಾಲಿನ ಬೆಲೆ ಏರಿಸಿ ಮಾಡಿರುವ ಇವತ್ತಿನ ಕ್ಯಾಬಿನೆಟ್ ನಿರ್ಣಯ ಇದಕ್ಕೆ ಜ್ವಲಂತ ಉದಾಹರಣೆ. ಆಗಸ್ಟ್ 1, 2023, ಜೂನ್ 25, 2024 ಮತ್ತು ಮಾರ್ಚ್ 27, 2025 ಹೀಗೆ ಕ್ರಮವಾಗಿ 3, 2, 4 ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ಏರಿಸಿದೆ. ಈ ಮೂಲಕ ಸಾರ್ವಜನಿಕರ ಮೇಲೆ ಬರೆ ಎಳೆದಿದೆ. ಒಂದು ಕಡೆ ಒಟ್ಟು 9 ರೂಪಾಯಿಗಳನ್ನು ಏರಿಸಿದ್ದಲ್ಲದೆ ಇನ್ನೊಂದು ಕಡೆ ರೈತರಿಗೆ ಸೇರಬೇಕಾದ ಪೆÇ್ರೀತ್ಸಾಹ ಧನ ಸುಮಾರು 600 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

 ಹಾಗಾದರೆ ಇವರು ಸುಲಿಗೆ ಮಾಡುತ್ತಿರುವ ಹಣ ಎಲ್ಲಿ ಹೋಗುತ್ತಿದೆ? ಸರ್ಕಾರ ಹನಿ ಟ್ರ್ಯಾಪ್ ನಲ್ಲಿ ಬ್ಯುಸಿ ಇದ್ದು ಜನರನ್ನು ಬೆಲೆ ಏರಿಕೆಯ ಟ್ರ್ಯಾಪ್ ಗೆ ಬೀಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.


Post a Comment

0Comments

Post a Comment (0)