ನಾಳೆ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಇದರ ಜೊತೆಗೆ 30ರಿಂದ 50 ವರ್ಷಗಳ ಬಳಿಕ ಷಡ್ ಗ್ರಹಯೋಗ ಕೂಡ ಸಂಭವಿಸಲಿದೆ. ಯುಗಾದಿ (Ugadi) ಮುನ್ನ ದಿನವೇ ವರ್ಷದ ಮೊದಲ ಸೂರ್ಯಗ್ರಹಣವಿರಲಿದ್ದು, ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ. ಅಮೆರಿಕದಲ್ಲಿ ಗೋಚರವಾಗಲಿದೆ. ಆದರೆ ಯುಗಾದಿಗೂ ಮೊದಲು ಸೂರ್ಯ ಗ್ರಹಣವಿರುವುದರಿಂದ ಧಾರ್ಮಿಕವಾಗಿ ಮಹತ್ವ ಪಡೆದುಕೊಳ್ಳಲಿದೆ. ಈ ಗ್ರಹಣದೊಂದಿಗೆ 30-50 ವರ್ಷಗಳ ಬಳಿಕ ಸಂಭವಿಸಲಿರುವ ಅಪರೂಪದ ಷಡ್ ಗ್ರಹಯೋಗವೂ ಜೊತೆಯಾಗಲಿದೆ.
ಈ ಗ್ರಹಯೋಗದಲ್ಲಿ ಆರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗುತ್ತವೆ. ಸಾಮಾನ್ಯವಾಗಿ ಈ ರೀತಿಯ ಷಡ್ ಗ್ರಹಯೋಗದಿಂದ ಕೆಡುಕು ಉಂಟಾಗುವುದು ಹೆಚ್ಚು. ಧಾರ್ಮಿಕವಾಗಿ ಈ ಪ್ರಕ್ರಿಯೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, 12 ರಾಶಿಗಳ ಮೇಲೆಯೂ ಇದರ ಪ್ರಭಾವ ಬೀರಲಿದೆ.
ಪರಿಹಾರ...?
ಹೋಮ ಹವನ, ವಿಷ್ಣು ಸಹಸ್ರನಾಮ, ರುದ್ರಪಾರಾಯಣ, ರುದ್ರಾಭಿಷೇಕ, ಮೃತ್ಯುಂಜಯ ಜಪ, ಆಂಜನೇಯ ದೇವರ ಆರಾಧನೆ, ನವಧಾನ್ಯಗಳ ದಾನ ಮಾಡಬೇಕು
ಯಾವ ರಾಶಿಗೆ ಆಪತ್ತು?
– ಕುಂಭರಾಶಿಯಿಂದ ಮೀನ ರಾಶಿಗೆ ಶನಿ ಪ್ರವೇಶ
– ಷಡ್ ಗ್ರಹಯೋಗದಿಂದ 12 ರಾಶಿಯ ಮೇಲೂ ಪರಿಣಾಮ
– ಅದರಲ್ಲಿ ಮೀನ, ಮೇಷ, ಸಿಂಹ, ಧನು ರಾಶಿಯ ಅಧಿಕ ಪರಿಣಾಮ, ಈ ರಾಶಿಯವರು ತೀರಾ ಎಚ್ಚರಿಕೆಯಿಂದ ಇರಬೇಕು.