ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮಹಾರಾಣಿ ಲಕ್ಷ್ಮಿಅಮ್ಮಣ್ಣಿ ಮಹಿಳಾ ಕಾಲೇಜು, ಸ್ವಾಯತ್ತ. ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಬಹು ನಿರೀಕ್ಷಿತ “ಸಮಾಗತ 2025”ಸಮಾರಂಭವು ಯಶಸ್ವಿಯಾಗಿ ನೆರವೇರಿತು.ದಿನಾಂಕ 25, 26. ಮಂಗಳವಾರ ಮತ್ತು ಬುಧವಾರದಂದು ಮಹಾರಾಣಿ ಲಕ್ಷಿö್ಮ ಅಮ್ಮಣ್ಣಿ ಕಾಲೇಜಿನ ಡಾ.ಕೆ.ಎನ್.ವಿ. ಶಾಸ್ತಿ ಸಭಂಗಣದಲ್ಲಿ ಸಮಯ ಬೆಳಗ್ಗೆ 10:30ಕ್ಕೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನುಮುಖ್ಯ ಅತಿಥಿಗಳಾದ ಕೆ.ಎಸ್.ಸಿ.ಎಸ್.ಟಿ. ಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ.ವಿಜಯ್ ಯು.ಟಿ. ಅವರು ಮತ್ತು ·ಗೌರವ ಅತಿಥಿಗಳಾದ ಹಾಗು ಎಂ,ಲ್ಯಾಕ್‌ನ ಟ್ರಸ್ಟಿಗಳೂ ಆದ ಪ್ರೊ.ಕೆ.ಬಿ.ಆರ್, ವರ್ಮಾ ಅವರುಗಳು ನೆರವೇರಿಸಿಕೊಟ್ಟರು.
ಸಮಾರಂಭದಲ್ಲಿ ಪ್ರಮುಖವಾಗಿ “ಕೃತಕ ಬುದ್ದಿಮತ್ತೆ”ಎಂಬ ಪ್ರಸ್ತುತವಿಶೇಷ ವಿಷಯವನ್ನು ಕೇಂದ್ರಿಕರಿಸಿ ಕಾರ್ಯಕ್ರಮ ನಡೆಯುತಲಿದ್ದು, ಇದರೊಂದಿಗೆ “ಅಂತರ ಕಾಲೇಜು ವಿಜ್ಞಾನ ಹಬ್ಬ”ಮತ್ತು “ರಾಷ್ಟಿಯ ವಿಚಾರ ಸಂಕಿರಣ”ವನ್ನು ಹಮ್ಮಿಕೊಳ್ಳಲಾಗಿದೆ. “ಸುಸ್ಥಿರ ಬದುಕಿಗಾಗಿ ಕೃತಕ ಬುದ್ದಿಮತ್ತೆ ಮತ್ತು ತಂತ್ರಜ್ಞಾನಗಳು ಹೇಗೆ ಪ್ರಸ್ತುತತೆಯನ್ನು ಹೊಂದಿದೆ ಎಂಬುದು ಕಾರ್ಯಕ್ರಮದ ಉದ್ದೇಶವಾಗಿರುತ್ತದೆ.
ಮೊದಲ ದಿನದಂದು ಅಂತರ ಕಾಲೇಜು ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಕಾಲೇಜಿನ ವಿಜ್ಞಾನದ ವಿವಿಧ ವಿಭಾಗದವರು ನಡೆಸಿಕೊಡುವ ಕ್ರಾಸ್ ವರ್ಡ್, ಟ್ರೆಜರ್ ಹಂಟ್, ಕನೆಕ್ಷನ್ಸ್, ಕ್ವಿಜ್, ಡಂಬ್ ಶರದ್, ಪಿಕ್ & ಸ್ಪೀಚ್‌ಅಂತಹ ಆಟಗಳನ್ನು ನಡೆಸಲಾಗುತ್ತದೆ. ಸುಮಾರು 10 ಕ್ಕೂ ಹೆಚ್ಚು ಕಾಲೇಜುಗಳ 40 ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.
ಮಹಾರಾಣಿ ಲಕ್ಷಿö್ಮ ಅಮ್ಮಣ್ಣಿ ಮಹಿಳಾ ಕಾಲೇಜು, ಸ್ವಾಯತ್ತ. ಸಮಾಗತ-2025 ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಮುಖ್ಯ ಅತಿಥಿ ಕೆ.ಎಸ್.ಸಿ.ಎಸ್.ಟಿ. ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ವಿಜಯ್ ಯು.ಟಿ.ಅವರಿಗೆಪ್ರಾಂಶುಪಾಲರಾದ ಡಾ.ನಾಗಲಕ್ಷ್ಮಿ ಬಿ.ಎನ್,ರವರು ಸ್ಮರಣಿಕೆ ನೀಡುತ್ತಿರುವುದು.
26/03/2025 ಗುರುವಾರ ಬೆಳಗ್ಗೆ 10:30 ಕ್ಕೆ ಸಮಾಗತ-2025 ರ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಕೆ.ಎಸ್.ಸಿ.ಎಸ್.ಟಿ. ಯ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ.ವಿಜಯ್ ಯು.ಟಿ.ಅವರು ನೆರವೇರಿಸಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ನಾಗಾಲಕ್ಷಿö್ಮ ಬಿ.ಎನ್, ಉಪಪ್ರಾಂಶುಪಾಲರಾದ ಡಾ.ಶರ್ಮಿಷ್ಠ ದತ್ತ, ಆಡಳಿತಾಧಿಕಾರಿಗಳಾದ ಡಾ.ಅನ್ನದಾನೇಶ ಬಿ.ಎ., ಹಣಕಾಸು ಅಧಿಕಾರಿಗಳಾದಶ್ರೀ ನಾರಾಯಣ ಸುಬ್ರಮಣಿ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಅರುಣಾಎಚ್.ಕೆ.ಹಾಗು ವಿಜ್ಞಾನ ಸಂಯೋಜಕರಾದ ಡಾ.ಬಬಿತಾ ಬಿ. ಹಾಗು ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ವಿಶೇಷವಾಗಿ ಕಾರ್ಯಕ್ರಮದಲ್ಲಿ “ವಿಜ್ಞಾನ ಸಂಶೋಧನಾ ಪ್ರಂಬAಧ” ಪುಸ್ತಕವನ್ನು ಡಾ.ವಿಜಯ್ ಯು.ಟಿ.ಅವರು ಬಿಡುಗಡೆಗೊಳಿಸಿದರು.
·ಸಂಪನ್ಮೂಲ ವ್ಯಕ್ತಿ: ಪ್ರೊ.ಆರ್.ಸೌಧಾಮಿನಿ.
ಎನ್.ಸಿ.ಬಿ.ಎಸ್. ನ ಬಯೊ ಕೆಮಿಸ್ಟಿç ವಿಭಾಗ.
·ತಂತ್ರಜ್ಞಾನ ಸಂಪನ್ಮೂಲ ವ್ಯಕ್ತಿ : ಪ್ರೊ.ಯೋಗೇಶ್ ಸಿಮ್ಮಾ
ಇಂಡಿಯನ್ ಇನ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು (ಐಐಎಸ್‌ಸಿ) ಡೇಟಾ ಸೈನ್ಸ್ ವಿಭಾಗ.
·ತಂತ್ರಜ್ಞಾನ ಸಂಪನ್ಮೂಲ ವ್ಯಕ್ತಿ:ಶ್ರೀ ಸಿವ ತೇಜ ಕಕಿಲೇಟಿ.
ನಿರ್ದೇಶಕರು ಮತ್ತು ಪ್ರಧಾನ ಸಂಶೋಧನಾ ವಿಜ್ಞಾನಿ.ನಿರಮೈ ಹೆಲ್ತ್ ಅನಾಲಿಟಿಕ್ಸ್, ಬೆಂಗಳೂರು.
·ತ0ತ್ರಜ್ಞಾನ ಸಂಪನ್ಮೂಲ ವ್ಯಕ್ತಿ:ಡಾ.ಸೌಜನ್ಯ ವೈ.
ಹಿರಿಯ ವಿಜ್ಞಾನಿಗಳು, ಸಿ.ಎಸ್.ಐ.ಆರ್.-ಐಐಸಿಟಿ, ಹೈದರಾಬಾದ್.
ಮೇಲಿನ ಎಲ್ಲಾ ಹಿರಿಯ ಸಂಶೋಧಕರುಗಳು ಮತ್ತು ವಿಜ್ಞಾನಿಗಳು ತಮ್ಮ ವಿಷಯಗಳನ್ನು ಕುರಿತು ಪ್ರಬಂಧವನ್ನು ಮಂಡಿಸಿದರು.
ಉಳಿದ0ತೆ ವಿವಿಧ ಕಾಲೇಜುಗಳ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದರು.
ಬೆ0ಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು, ಸ್ವಾಯತ್ತ.ಸಮಾಗತ-2025 ಕಾರ್ಯಕ್ರಮದಲ್ಲಿ “ವಿಜ್ಞಾನ ಸಂಶೋಧನಾ ಪ್ರಂಬ0ಧ” ಪುಸ್ತಕವನ್ನು ಡಾ.ವಿಜಯ್ ಯು.ಟಿ.ಅವರು ಬಿಡುಗಡೆಗೊಳಿಸಿದರು. ಪ್ರೊ.ಆರ್.ಸೌಧಾಮಿನಿ, ಪ್ರಾಂಶುಪಾಲರಾದ ಡಾ.ನಾಗಲಕ್ಷ್ಮಿ ಬಿ.ಎನ್.ರವರು, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಅರುಣಾಎಚ್.ಕೆ. ಹಾಗು ವಿಜ್ಞಾನ ಸಂಯೋಜಕರಾದ ಡಾ.ಬಬಿತಾ ಬಿ.ರವರು ಉಪಸ್ಥಿತರಿದ್ದರು.