ಪ್ರಯೋಗಶೀಲತೆಗೆ ಹೆಸರಾದ ಅನೇಕಾ ರಂಗತ೦ಡವು ಕಳೆದ ಎರಡೂವರೆ ದಶಕಗಳಲ್ಲಿ ಹಲವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ತನ್ನ ನಾಟಕಗಳನ್ನು ಪ್ರದರ್ಶಿಸಿ ಪ್ರಶಂಸೆಗಳಿಸಿದೆ. ಪಾಶ್ಚಾತ್ಯ, ಸಂಸ್ಕೃತ, ಆಧುನಿಕ ಭಾರತದ ಹಾಗೂ ಕನ್ನಡದ ಅಭಿಜಾತ ನಾಟಕಗಳನ್ನು ರಂಗಕ್ಕೇರಿಸಿದೆ. ಕನ್ನಡಕ್ಕೆ ಹೊಸತೆನಿಸುವ ಒಪೆರಾ ನಾಟಕಗಳನ್ನೂ ಪ್ರಸ್ತುತ ಪಡಿಸಿದ ಹಿರಿಮೆ ಅನೇಕಾ ತಂಡದ್ದು .
ಪ್ರಸ್ತುತ ಮೂರು ವಿಭಿನ್ನ ವಸ್ತು- ಶೈಲಿಯ ನಾಟಕಗಳ ಉತ್ಸವವೊಂದನ್ನು ಇದೇ ೨೦೨೫ ರ ಮಾರ್ಚ್ ೧೯, ೨೦, ೨೧ ರಂದು ಬೆಂ.ವಿ.ವಿಯ ಆವರಣದಲ್ಲಿರುವ ಕಲಾಗ್ರಾಮ ಸಮುಚ್ಛಯದಲ್ಲಿ ಆಯೋಜಿಸಿದೆ. ಈ ನಾಟಕೋತ್ಸವದ ವಿವರಗಳನ್ನು ದಯವಿಟ್ಟು ತಮ್ಮ ಘನತೆವೆತ್ತ ಪತ್ರಿಕೆಯ ಸಾಂಸ್ಕೃತಿಕ ವಿಭಾಗದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ನಾಟಕೋತ್ಸವದ ಅತಿಥಿಗಳು:
ಶ್ರೀ ಟಿ.ಎಸ್.ನಾಗಾಭರಣ (ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಿರ್ದೇಶಕರು)
ಶ್ರೀ ಜಯಂತ ಕಾಯ್ಕಿಣಿ (ಖ್ಯಾತ ಸಾಹಿತಿ, ಕವಿ, ಹಾಗೂ ನಾಟಕಕಾರರು)
ಡಾ. ವಿಜಯಾ (ರಂಗಭೂಮಿ, ಸಿನೆಮಾ ಹಾಗೂ ಸಾಮಾಜಿಕ ಚಿಂತಕರು)
ಪ್ರೋ. ಎಚ್.ಎಸ್. ಶಿವಪ್ರಕಾಶ್ (ಖ್ಯಾತ ನಾಟಕಕಾರರು ಹಾಗೂ ಕವಿಗಳು)
ಶ್ರೀ ಜಯಂತ ಕಾಯ್ಕಿಣಿ (ಖ್ಯಾತ ಸಾಹಿತಿ, ಕವಿ, ಹಾಗೂ ನಾಟಕಕಾರರು)
ಡಾ. ವಿಜಯಾ (ರಂಗಭೂಮಿ, ಸಿನೆಮಾ ಹಾಗೂ ಸಾಮಾಜಿಕ ಚಿಂತಕರು)
ಪ್ರೋ. ಎಚ್.ಎಸ್. ಶಿವಪ್ರಕಾಶ್ (ಖ್ಯಾತ ನಾಟಕಕಾರರು ಹಾಗೂ ಕವಿಗಳು)