ಬೆಂಗಳೂರು, ಮಾರ್ಚ್ 14 (ಕರ್ನಾಟಕ ವಾರ್ತೆ) :ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2022-23 ನೇ ಸಾಳಿನ ಎನ್.ಎಸ್.ಎಸ್. ಪ್ರಶಸ್ತಿ ಪ್ರದಾನ ಸಮಾರಂಭವನ್ನು ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಘನ ಉಪಸ್ಥಿತಿಯಲ್ಲಿ 2025 ನೇ ಮಾರ್ಚ್ 17 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಶಸ್ತಿ ಪುರಸ್ಕøತರು ಸೇರಿದಂತೆ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾನಿಲಯ, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಲಿಯಾತಾಜ್ ಬೆಂಗಳೂರು ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನ ಕೆ.ಮಹೇಶ್ವರಿ, ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯ ಚೈತ್ರಾ ಸಿ.ಎಸ್., ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ತನುಶ್ರೀ, ಶೇಷಾದ್ರಿ ಪುರಂ ಕಾಲೇಜು, ಬೆಂಗಳೂರು ನಗರ ವಿಶ್ವವಿದ್ಯಾಲಯದ ವರ್ಷ ಕೆ.ಸಿ., ಶೇಷಾದ್ರಿ ಪುರಂ ಪದವಿ ಕಾಲೇಜು ಮೈಸೂರು, ಮೈಸೂರು ವಿಶ್ವವಿದ್ಯಾಲಯದ ಲತಾ ಸಿಂಗ್, ಯೆನೊಪೋಯ ಇನ್ಸಿಟ್ಯೂಟ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಮಂಗಳೂರು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರಿನ ಧನ್ಯಶ್ರೀ ಡಿ. ಭಟ್, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಸಿಂಚನಾ .ಕೆ. ಗೋಗಟಿ ವಾಣಿಜ್ಯ ಮಹಾವಿದ್ಯಾಲಯ ಬೆಳಕವಾಡಿ, ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಧನ್ಯಶ್ರೀ ಉತ್ತಮ ಶಿಂಧೆ ಮತ್ತು ಕೆಎಲ್‍ಇ ಔಷಧೀಯ ಮಹಾವಿದ್ಯಾಲಯ ಬೆಳಗಾವಿ, ಕೆಎಲ್‍ಇ ಅಕಾಡೆಮಿ ಆಫ್ ಹೈರ್ ಎಜುಕೇಶನ್ ಅಂಡ್ ರೀಸರ್ಚ್ ಬೆಳಗಾವಿಯ ಸ್ಫೂರ್ತಿ ಕೊಂಕಣಿ ಅವರುಗಳು ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.
ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್ ಸ್ನಾತಕೋತ್ತರ ವಿಭಾಗ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಆಕಾಶ ಪೂಜಾರ, ಕೃಷಿ ಮಹಾವಿದ್ಯಾಲಯ ಕಲಬುರಗಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರಿನ ಆಕಾಶ್ ಕೆ., ಶ್ರೀ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಬೈಪಾಸ್ ರಸ್ತೆ, ಹುಣಸೂರು ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನ ತೇಜಸ್ ವಿ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಜನೆಸ್ ಮ್ಯಾನೇಜ್ ಮೆಂಟ್ ದಕ್ಷಿನ ಕನ್ನಡ ಮಂಗಳೂರು, ಮಂಗಳೂರು ವಿಶ್ವವಿದ್ಯಾಲಯ ಮಂಗಳೂರಿನ ಭವಿಶ್ ಕೆ. ಶೆಟ್ಟಿ, ಕೃಷಿ ಮಹಾವಿದ್ಯಾಲಯ ಬೆಂಗಳೂರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನ ಯಶವಂತಗೌಡ ಎಂ.ವಿ., ಅಜ್ಜಪ್ಪಾ ಗಡನಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಳಯ ಬೆಳಗಾವಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಗಂಗಾಧರ ಮ ಕುರಬಗಟ್ಟಿ, ಸಹ್ಯಾದ್ರಿ ವಿಜ್ಞಾನ ಕಾಲೇಜ್ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗದ ಶೋಭಿತ್ ಎನ್.ಜೆ., ಶೇಷಾದ್ರಿ ಪುರಮ ಪ್ರಥಮ ದರ್ಜೆ ಕಾಲೇಜು, ಯಲಹಂಕ ಬೆಂಗಳೂರು, ಬೆಂಗಳೂರು ನಗರ ವಿಶ್ವವಿದ್ಯಾಲಯ ಬೆಂಗಳೂರಿನ ವಿಶಾಲ್ ಎಸ್., ಯೆನೊಪೋಯ ಇನ್ಸಿಟ್ಯೂಟ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಮಂಗಳೂರು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರಿನ ಮಹಮದ್ ನಿಶ್ವಾನ್ ಯು.ಎನ್. ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಿಜಿ ಕೇಂದ್ರ ದಾವಣಗೆರೆ, ದಾವಣಗೆರೆ ವಿಶ್ವವಿದ್ಯಾಲಯ ದಾವಣಗೆರೆಯ ಸೈಯದ್ ನದೀಮ್ ಎಂ.ಡಿ ಅವರು ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.