ಮಾ. 17ರಿಂದ ಶ್ರೀ ವ್ಯಾಸತೀರ್ಥ ಗುರುಸಾರ್ವಭೌಮರ 486ನೇ ಆರಾಧನಾ ಮಹೋತ್ಸವ

varthajala
0

 ಶ್ರೀವಿದ್ಯಾವಿಜಯತೀರ್ಥ ಶ್ರೀಪಾದರ ಶಿಷ್ಯರು ಹಾಗೂ ಶ್ರೀವ್ಯಾಸರಾಜ ಭಕ್ತ ವೃಂದದಿAದ, ಇದೇ 2025ನೇ ಮಾರ್ಚ್ 17, 18 ಮತ್ತು 19 ರಂದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ 486ನೇ ಆರಾಧನೆಯನ್ನು ಬೆಂಗಳೂರು ಮಹಾನಗರದ ಶ್ರೀನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನೇಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಶಿಷ್ಠವಾಗಿ ಆಚರಿಸಲಿದೆ.

 ಸೋಮವಾರ ಮಾ 17 ಪ್ರಾತಃಕಾಲ 7.00ಕ್ಕೆ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ಶ್ರೀ ಹರಿವಾಯುಸ್ತುತಿ ಮತ್ತು ಯಂತ್ರೋದ್ಧಾರಕ ಮುಖ್ಯ ಪ್ರಾಣದೇವರ ಸ್ತೋತ್ರ ಪಾರಾಯಣ ಹಾಗೂ ಶ್ರೀ ವಾದಿರಾಜರ ಮಹಿಮಾ ಚಿಂತನೆ .ಬೆಳಿಗ್ಗೆ 8.30 ಕ್ಕೆ `ಶ್ರೀಮದ್ದಶಪ್ರಮತಿ ದರ್ಶನ ಪ್ರಕಾಶಿನೀ ವಿದ್ವತ್ ಸಭಾ’ ಉದ್ಘಾಟನೆ: ಶ್ರೀ ಶ್ರೀ ಸುಜಯನಿಧಿತೀರ್ಥ ಶ್ರೀಪಾದÀರು, ಪೀಠಾಧಿಪತಿಗಳು, ಶ್ರೀ ಶ್ರೀಪಾದರಾಜ ಮಠ, ಮುಳಬಾಗಿಲು.ಅನೇಕ ಪಂಡಿತರಿAದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ .ಸಂಜೆ 5.00 ಕ್ಕೆ `ಅನಂತ ಅಪರಾಧ ಎನ್ನಲ್ಲಿ ಇರಲಾಗಿ .... ಗೋಷ್ಟಿ, ನಿರ್ವಹಣೆ : ಪಂ .ವಿಷ್ಣುದಾಸ ನಾಗೇಂದ್ರಾಚಾರ್ಯ 

 ಮಂಗಳವಾರ ಮಾ 18 ಪ್ರಾತಃಕಾಲ 7.00ಕ್ಕೆ ಶ್ರೀವ್ಯಾಸರಾಜ ಸ್ತೋತ್ರ ಅಷ್ಟೋತ್ತರ ಶತವಾರ ಪಾರಾಯಣ

ನಂತರ ಶ್ರೀ ಮಾಧವತೀರ್ಥರ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀಪಾದರು, ಉತ್ತರಾಧಿಕಾರಿಗಳು ಮಾಧವತೀರ್ಥ ಸಂಸ್ಥಾನ ಮತ್ತು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀ ಡಾ.ಸುಬುಧೇಂದ್ರ ತರ‍್ಥರ ದಿವ್ಯ ಸಾನ್ನಿಧ್ಯದಲ್ಲಿ ``ಶ್ರೀಮದ್ದಶಪ್ರಮತಿ ದರ್ಶನ ಪ್ರಕಾಶಿನೀ ವಿದ್ವತ್ ಸಭಾ’’ ಮುಂದುವರೆದ ಭಾಗ ಅಧ್ಯಕ್ಷತೆ: ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು, ಸಭಾ ನಿರ್ವಹಣೆ: ಮ.ಶಾ.ಸ. ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರವರಿಂದ ಅನೇಕ ಪಂಡಿತರಿAದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ.ಸಂಜೆ 4.00ಕ್ಕೆ `ಸಭಾ’ ವಿಷಯ `ಅಪರಾಧ ಎನಗಿಲ್ಲ ಅಪರಾಧಿ ನಾನಲ್ಲ ಕುರಿತು 

ಸಾನಿಧ್ಯ: ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದÀರು ಸಭಾ ನಿರ್ವಹಣೆ: ಮ.ಶಾ.ಸಂ. ಶ್ರೀ ಕಂಬಾಲೂರು ಸಮೀರಾಚಾರ್ಯರಿಂದ ಅನೇಕ ಪಂಡಿತರಿ0ದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ, 

 ಬುಧವಾರ ಮಾ 19 ಪ್ರಾತಃಕಾಲ 7.00ಕ್ಕೆ ಶ್ರೀರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ 

ಬಾಳಗಾರು ಮಠದ ಕಿರಿಯ ಪಟ್ಟ ಪೂಜ್ಯ ಶ್ರೀ ಅಕ್ಷೆÆÃಭ್ಯರಾಮ ಪ್ರಿಯ ತೀರ್ಥಶ್ರೀಪಾದ ದಿವ್ಯ ಸಾನ್ನಿಧ್ಯದಲ್ಲಿ

ಸಭಾ ವಿಷಯ ಔಪಾಸನಾಗ್ನಿ (ಪುರೋಹಿತ ಗೋಷ್ಠಿ) ಗೋಷ್ಠಿ ಅಧ್ಯಕ್ಷತೆ : ಡಾ|| ಚತುರ್ವೇದಿ ವೇದವ್ಯಾಸಾಚಾರ್ಯರು 

ಅನೇಕ ಪಂಡಿತರಿAದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ. ಸಂಜೆ 5.00ಕ್ಕೆ ` ಪದವಿ ವಿದ್ಯರ‍್ಥಿಗಳಿಗೆ ರ‍್ಚಾ ಸ್ರ‍್ಧೆ ವಿಷಯ: *ಅಪರಾಧಿ ನಾನಲ್ಲ ಅಪರಾಧ ಏನಗಿಲ್ಲ*  *ಅನಂತ ಅಪರಾಧ ಎನ್ನಲಿ ಇರಲಾಗಿ ಬಿನ್ನಹಕ್ಕೆ ಬಾಯಿಲ್ಲವಯ್ಯ* 

ಪುರಂದರ ದಾಸರ ಕರ‍್ತನೆಯನ್ನು ಆಧಾರವಾಗಿ ಇಟ್ಟುಕೊಂಡು ವಿದ್ಯರ‍್ಥಿಗಳು ತಮ್ಮ ರ‍್ಚೆಯನ್ನು ಮಂಡಿಸುವರು. ತರ‍್ಪುಗಾರರು: ಶ್ರೀ ಮುತ್ತಗಿ ಶ್ರೀನಿವಾಸ ಆಚರ‍್ಯ,ಕನ್ನಡ ಪ್ರಾಧ್ಯಾಪಕರು, ಜೈನ್ ಪದವಿ ಪರ‍್ವ ಕಾಲೇಜ್ ,ಇಂದಿರಾನಗರ ಮತ್ತು ಡಾ. ಗುರುರಾಜ್ ಪೋಶೆಟ್ಟಿಹಳ್ಳಿ ,ಸಂಸ್ಕೃತಿ ಚಿಂತಕರು, ಬೆಂಗಳೂರು ಭಾಗವಹಿಸಿಲಿದ್ದಾರೆ ಎಂದು ಶ್ರೀ ವಿದ್ಯಾವಿಜಯ ತೀರ್ಥ ಶಿಷ್ಯ ವೃಂದ ಪ್ರಕಟನೆಯಲ್ಲಿ ತಿಳಿಸಿದೆ. ವಿವರಗಳಿಗೆ 8904776177/9148596146 / 9663015544

 *ಪ್ರಥಮ ಬಹುಮಾನ ಪಾರಿತೋಷಕ ಮತ್ತು 2000/- ರೂ ನಗದು * ದ್ವಿತೀಯ ಬಹುಮಾನ ಪಾರಿತೋಷಕ ಮತ್ತು 1500/- ರೂ ನಗದು* ತೃತೀಯ ಬಹುಮಾನ ಪಾರಿತೋಷಕ ಮತ್ತು 1000/- ರೂ ನಗದು* ಹೆಚ್ಚಿನ ವಿವರ ಹಾಗು ಹೆಸರು ನೋಂದಣಿ ಮಾಡಿಕೊಳ್ಳಲು ಸಂರ‍್ಕಿಸಿ ಭರತ್ ಎಂ. ಎ. – 91485 96146 ಪೋಶೆಟ್ಟಿಹಳ್ಳಿ ಗುರುರಾಜ್ – 97393 69621 ನೋಂದಣಿ ಮಾಡಿಕೊಳ್ಳಲು ಕಡೆಯ ದಿನಾಂಕ 17.3.2025.

***

ವಿದ್ವತ್ತಿನ ಖನಿ ಶ್ರೀ ವಿದ್ಯಾವಿಜಯ ತೀರ್ಥರು


ಶ್ರೀ ಶ್ರೀ ವಿದ್ಯಾವಿಜಯತೀರ್ಥರು





ಶ್ರೀ ಶ್ರೀ ವ್ಯಾಸರಾಜಮಠಾಧೀಶರಾಗಿದ್ದ ಶ್ರೀ ಶ್ರೀ ವಿದ್ಯಾಮನೋಹರತೀರ್ಥ ಶ್ರೀಪಾದರಿಂದ 2016 ರಲ್ಲಿ ಸನ್ಯಾಸ ಆಶ್ರಮ ಸ್ವೀಕರಿಸಿದ ಶ್ರೀ ಶ್ರೀ ವಿದ್ಯಾವಿಜಯತೀರ್ಥರ ಪೂರ್ವಾಶ್ರಮದ ಹೆಸರು ವಿದ್ವಾನ್ ಕೆ.ಎಲ್.ಪುಷ್ಕರಪ್ರಸಾದ ಆಚಾರ್ಯರು. ಸನಾತನ ಸಂಸ್ಕೃತಿ, ಪರಂಪರೆ, ದ್ವೈತವೇದಾಂತ, ಕನ್ನಡದ ಹರಿದಾಸಸಾಹಿತ್ಯ ಇವುಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಪುಷ್ಕರಪ್ರಸಾದ ಆಚಾರ್ಯರೂ ಒಬ್ಬರು. 

ಧಾರ್ಮಿಕ ವಿಷಯಗಳನ್ನು ಕುರಿತ ಪ್ರವಚನ, ಸಂಶೋಧನೆ, ಶಾಸ್ತ್ರಪಾಠ ಇವುಗಳನ್ನೇ ತಮ್ಮ ವೃತ್ತಿಯಾಗಿಸಿಕೊಂಡು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಶಾಸ್ತ್ರಕೋವಿದರೆಂದು ಗುರುತಿಸಿಕೊಂಡಿದ್ದಾರೆ. ಅನೇಕ ಮಂದಿ ವಿದ್ವಾಂಸ ಶಿಷ್ಯರನ್ನು ತಯಾರು ಮಾಡಿ ಭಾರತೀಯ ಸನಾತನ ಸಂಸ್ಕೃತಿಯ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶ್ರೀವಿದ್ಯಾವಿಜಯ ತೀರ್ಥರು ಪೂರ್ವಾಶ್ರಮದಲ್ಲಿ ಸುಪ್ರಸಿದ್ಧ ಅರವತ್ತೊಕ್ಕಲು ಮನೆತನದ ಋಗ್ವೇದ ಶಾಖೆಯ ಹರಿತ್ಸ ಗೋತ್ರದವರು. ಇವರ ಹಿರಿಯರಾದ ಕಾಶಿಬಿಂದೂಮಾಧವಾಚಾರ್ಯರು, ಅಹೋಬಲಾಚಾರ್ಯರು ಮೊದಲಾದವರು ತಪಸ್ಸಿದ್ಧರು, ಅಗಾಧ ಪಂಡಿತರು. ನಂತರದ ತಲೆಮಾರಿನವರು ಕರ್ನಾಟಕಾಂಧ್ರ ಗಡಿಯ ಚೆಂಡೂರು ಪರಿಸರದ ಚಿತ್ರವತೀ ನದೀ ತೀರದಲ್ಲಿ ಶ್ರೀನಿವಾಸದೇವರ ಸನ್ನಿಧಾನದಲ್ಲಿ ನೆಲೆಸಿದ್ದರು. ಲಕ್ಷ್ಮೀನರಸಿಂಹಯ್ಯ (ಧ್ಯಾನಯೋಗಿ ಶ್ಯಾಮಣ್ಣನವರು, ಮೈಸೂರು ಅರಮನೆಯ ಧರ್ಮಾಧಿಕಾರಿಗಳಾಗಿ, ತಮ್ಮ ಯೋಗಶಕ್ತಿಯಿಂದ ಅನೇಕರ ದುಃಖಗಳನ್ನು ಪರಿಹರಿಸಿದವರು. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀಅನಿರುದ್ಧ ತೀರ್ಥರ ವೃಂದಾವನವನ್ನು ಸ್ವಪ್ನ ಸೂಚನೆಯಂತೆ ನಿರ್ಮಿಸಿ ಪ್ರತಿಷ್ಠಾಪಿಸಿ, ಶ್ರೀವಿಶ್ವಜ್ಞತೀರ್ಥರ, ಅನುಗ್ರಹಕ್ಕೆ ಪಾತ್ರರಾದವರು) ಹಾಗೂ ವೆಂಕಟಲಕ್ಷ್ಮಮ್ಮನವರ ಕಿರಿಯ ಪುತ್ರರಾಗಿ 1950ರಲ್ಲಿ ಜನಿಸಿದರು. ಮುಂದೆ ಬಾಗೇಪಲ್ಲಿಯಲ್ಲಿ ಉಪನಯನ. ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಪ್ರೌಢಶಾಲೆ, ಬನುಮಯ್ಯ ಕಾಲೇಜಿನಲ್ಲಿ ಪಿ.ಯು.ಸಿ ಮುಗಿಸಿ ಮೈಸೂರಿನ ಮಾನಸಗಂಗೋತ್ರಿಯ ದೂರಶಿಕ್ಷಣ ಸಂಸ್ಥೆಯಲ್ಲಿ ತತ್ವಶಾಸ್ತ್ರದ ಉನ್ನತಶಿಕ್ಷಣ ಪಡೆದರು. ರಿತ್ತಿವೆಂಕಣ್ಣಾಚಾರ್ಯರಲ್ಲಿ ಸಾಹಿತ್ಯ ಜೊತೆಜೊತೆಗೆ ಮೈಸೂರಿನ ಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ ಚತುರ್ವೇದಿ ರಾಮಚಂದ್ರಾಚಾರ್ಯರಲ್ಲಿ ಋಗ್ವೇದ ಅಧ್ಯಯನ, ಹುಲಿಕುಂಟೆ ಶ್ರೀನಿವಾಸಾಚಾರ್ಯರಲ್ಲಿ ವೇದಾಂತ, ಹಾಗೂ ದೇವೇಂದ್ರತೀರ್ಥರಲ್ಲಿ ತಾತ್ಪರ್ಯ ನಿರ್ಣಯ ಹಾಗೂ ದ್ವೈತವೇದಾಂತದ ರಹಸ್ಯಪ್ರಮೇಯಗಳ ಅಧ್ಯಯನ ನಡೆಸಿದರು. ಪೂರ್ಣಪ್ರಜ್ಞವಿದ್ಯಾಪೀಠದ ವಿದ್ವಾನ್ ಬಾಳೇಬೈಲು ಪದ್ಮನಾಭಾಚಾರ್ಯರಲ್ಲಿ ಶ್ರೀಮನ್ಯಾಯಸುಧಾ ಅಧ್ಯಯನ. 

ಗೂಳೂರು, ಕ್ಯಾತಸಂದ್ರ, ತುಮಕೂರುಗಳಲ್ಲಿ ವಾಸ. ಬೆಂಗಳೂರಿನ ಸ್ವಿಮ್ಮಿಂಗ್ ಪೂಲ್ ರಾಯರ ಮಠದಲ್ಲಿ ವೆಂಕಟರಾಯರ ಕಾಲದಲ್ಲಿ ಹೆಚ್ಚಾಗಿ ವಾಸ್ತವ್ಯ. ತುಂಬು ಸಂಸಾರವನ್ನು ನಿಭಾಯಿಸುವ ಹೊಣೆಗಾರಿಕೆ ಇದ್ದರೂ ಲೌಕಿಕ ವೃತ್ತಿಗೆ ಮನಸೋಲದೆ, ಯಾರಿಗೂ ಕೈಚಾಚದೆ, ಜೀವನಪರ್ಯಂತ ‘ಸಾರ್ವಜನಿಕ ವಂತಿಕೆಯನ್ನು ಬೇಡುವ ಒಂದೂ ಯೋಜನೆಯನ್ನು ಹಮ್ಮಿಕೊಳ್ಳದೆ’ ಶುದ್ಧ ವೈದಿಕ ವೃತ್ತಿಯಲ್ಲಿ ಬಾಳಿ, ಕೇವಲ ಪಾರಾಯಣ, ಪ್ರವಚನಗಳ ಮೂಲಕ ಸೇವೆ ಸಲ್ಲಿಸುತ್ತಾ, ದೇವರು ವೇದವ್ಯಾಸ ಪೀಠದಲ್ಲಿ ಕೊಟ್ಟಷ್ಟರಲ್ಲೇ ತೃಪ್ತಿಯಿಂದ ಬಾಳಿದವರು. ಅಮೂಲ್ಯ ಗ್ರಂಥಗಳ ಹಾಗೂ ವೇದಾಂತ ಪ್ರಮೇಯಗಳ ಸಂಗ್ರಹವನ್ನು ಹೊಂದಿದ್ದಾರೆ   

ವೇದ, ವೇದಾಂತ, ಧರ್ಮಶಾಸ್ತ್ರಗಳ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದು ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡಿನಾದ್ಯಂತ ಹಳೆದ 40 ವರ್ಷಗಳಿಂದ ತತ್ತ್ವಜ್ಞಾನಗರ್ಭಿತವಾದ 5000ಕ್ಕೂ ಹೆಚ್ಚು ಪ್ರವಚನಗಳನ್ನು ಮಾಡುವ ಮೂಲಕ ಭಕ್ತಿ ಮತ್ತು ನೈತಿಕ ಮೌಲ್ಯಗಳ ಪ್ರಸಾರ ಕೈಗೊಂಡು ಎರಡು ತಲೆಮಾರಿನ ಹತ್ತುಸಾವಿರಕ್ಕೂ ಹೆಚ್ಚು ಶ್ರೋತೃಗಳ ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯಪಾತ್ರ ವಹಿಸಿರುವ ಇವರ ಕೊಡುಗೆ ಗಮನಾರ್ಹವಾದುದು.

ಎಂತಹ ನಾಸ್ತಿಕ ಪ್ರಶ್ನೆ ಬಂದರೂ ಅದಕ್ಕೆ ತಕ್ಷಣದಲ್ಲೇ ಸರಳ ಸುಲಭ ಉತ್ತರ ನೀಡುವ ಮೂಲಕ ಸಾವಿರಾರು ಯುವಕ ಯುವತಿಯರಲ್ಲಿ ಆಸ್ತಿಕತೆ ಮತ್ತು ದೈವಭಕ್ತಿಯನ್ನು ಪ್ರೇರಿಸಿದ್ದಾರೆ. ಆ ಅಪಾರ ದೈವಶ್ರದ್ಧೆಯಿಂದಾಗಿ ಎಂತಹ ಕಷ್ಟ ನಿಷ್ಠುರಗಳು ಬಂದರೂ ಜಗ್ಗದೆ ಕುಗ್ಗದೆ ಅವನ್ನು ಧೈರ್ಯದಿಂದ ಎದುರಿಸುವ ಸಕಾರಾತ್ಮಕ ಆಲೋಚನೆಯನ್ನು ಮೂಡಿಸಿದ್ದಾರೆ.

ತತ್ವಪ್ರತಿಪಾದನೆಯಲ್ಲಿ ಪುರಾಣಗಳ ಸ್ಥಾನವು ಮಹತ್ವದ್ದಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಅವಗಣನೆಗೆ ಒಳಗಾಗುತ್ತಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿ, ಪುರಾಣಗಳ ಮಹತ್ವವನ್ನು ಮನವರಿಕೆ ಮಾಡಿಸಿದ್ದಾರೆ.ಇವರು ಹರಿದಾಸರ ಕನ್ನಡ ಕೀರ್ತನೆಗಳಲ್ಲಿ ಹುದುಗಿರುವ ತತ್ತ್ವವಿಚಾರವನ್ನು ವಿಸ್ತಾರವಾಗಿ ಬಹುಶಾಸ್ತ್ರೀಯ ಅಧ್ಯಯನದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವ ನೂತನ ವಿಧಾನಗಳನ್ನು ರೂಪಿಸಿರುವ ಅಪೂರ್ವ (ಇತರರಲ್ಲಿ ಕಾಣದ) ಕೌಶಲ್ಯದಿಂದ ಖ್ಯಾತರಾಗಿದ್ದಾರೆ.

.ಒಂದೊಂದು ಪ್ರಮೇಯಕ್ಕೂ ವೇದ, ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಪುರಾಣ, ಸರ್ವಮೂಲ, ಸ್ತೋತ್ರ ಸಾಹಿತ್ಯ, ಹರಿದಾಸರ ಕೀರ್ತನೆಯ ಸಾಲು, ಅವರ ವಿದ್ಯಾಗುರುಗಳಾದ ಮೈಸೂರಿನ ಶ್ರೀಶ್ರೀದೇವೇಂದ್ರತೀರ್ಥರು ಹೇಳುತ್ತಿದ್ದ ಅನುಭವದ ಮಾತು ಮತ್ತು ಲೌಕಿಕ ಉದಾಹರಣೆಗಳ ಸಮನ್ವಯ ಮಾಡಿ ಅಪರೋಕ್ಷಜ್ಞಾನಿಗಳ ಜೀವನದ ಘಟನೆಗಳಲ್ಲಿ ಈ ತತ್ತ್ವದ ಅನುಷ್ಠಾನ ಹೇಗೆ ಕಂಡುಬರುತ್ತದೆ ಎಂಬುದನ್ನು ವಿವರಿಸುವ ವಿಶಿಷ್ಟ ಶೈಲಿ ಇವರದು. 

ಶ್ರೀಗಳವರು ಅನೇಕ ಗ್ರಂಥಗಳನ್ನು ಸಂಪಾದಿಸಿದ್ದಾರೆ:

1. ಋಗ್ವೇದೀಯ ಸಂಧ್ಯಾವಂದನಮ್

2. ಋಗ್ವೇದೀಯ ಆಹ್ನಿಕ ಮಂಜರೀ

3. ವೈಷ್ಣವೀಯ ಸ್ತ್ರೀಧರ್ಮಗಳು

4. ಹರಿದಾಸ ಭಜನ ಮಂಜರೀ

5. ಶ್ರೀಕರಿಗಿರಿ ವೈಭವಮ್

6. ಶ್ರೀಸೋದಾಕ್ಷೇತ್ರ ಮಹಿಮೆ

7. ಭಾವಿಸಮೀರ ಶ್ರೀಮದ್ವಾದಿರಾಜ ವಿರಚಿತ ಗುಂಡಕ್ರಿಯೆ

8. ವೈಕುಂಠ ವರ್ಣನೆ

9. ಹರಿಸರ್ವೋತ್ತಮಸಾರ

10. ಸ್ವಪ್ನಪದ

ಅದರಲ್ಲೂ ಇವರ ಸಹ ಸಂಪಾದಕತ್ವದಲ್ಲಿ ಪ್ರಕಟವಾದ 

11. ಶ್ರೀಜಯತೀರ್ಥರ ಮೂಲವೃಂದಾವನಸ್ಥಳ : ಗಜಗಹ್ವರ

12. ಸತ್ಯಂ ವದಿಷ್ಯಾಮಿ

ಎಂಬ ಎರಡು ಗ್ರಂಥಗಳು ಇವರ ಸಂಶೋಧನ ಸಾಮಥ್ರ್ಯ ಹಾಗೂ ವಿಮರ್ಶನ ಪ್ರಜ್ಞೆಯ ಮೇರುಕೃತಿಗಳಾಗಿವೆ. ಇಲ್ಲಿಯ ಅನುಬಂಧದಲ್ಲಿ ಈ ಗ್ರಂಥಗಳ ಬಗ್ಗೆ ವಿವಿಧ ತಜ್ಞರು ನೀಡಿರುವ ಅಭಿಪ್ರಾಯಗಳನ್ನು ಓದಿದಾಗ ಶ್ರೀಗಳವರ ವಿದ್ವತ್ತಿನ ಮಹತ್ವವನ್ನು ತಿಳಿಯಬಹುದು.

ಸೂಕ್ಷ್ಮಗ್ರ್ರಹಣ ಮತ್ತು ಅಪಾರ ಸ್ಮರಣಶಕ್ತಿಯನ್ನು ಹೊಂದಿದ ಇವರು ಒಂದು ದಿನದಲ್ಲಿ 18 ಗಂಟೆಗಿಂತಲೂ ಹೆಚ್ಚು ಸಮಯವನ್ನು ಗ್ರಂಥಾವಲೋಕನ, ಪ್ರವಚನ, ಸಂವಾದ ಅಥವಾ ಮನನಗಳಲ್ಲೇ ಕಳೆಯುತ್ತಾ ಆದರ್ಶವನ್ನು ಪಾಲಿಸುತ್ತಿರುವ ಋಷಿಸದೃಶ ವ್ಯಕ್ತಿತ್ವ ಇವರದು.ಯಾವುದೇ ವಿಶ್ವವಿದ್ಯಾಲಯದ ಒಂದು ವಿಭಾಗದ ಅನೇಕ ವಿಷಯತಜ್ಞರಿಂದಲೂ ಏಕತ್ರ (ಒಂದೇಕಡೆ) ದೊರೆಯದಷ್ಟು ಅಂತರ್ ಶಿಸ್ತೀಯ () ತೌಲನಿಕ ವಿಮರ್ಶಾತ್ಮಕ ಸಂಶೋಧನೆಯ ವಿಧಾನಗಳನ್ನು ಮೈಗೂಡಿಸಿಕೊಂಡಿರುವ ಇವರು ಪುರಾಣ ಹಾಗೂ ಹರಿದಾಸರ ಕೀರ್ತನೆಗಳಿಗೆ ಅನ್ವಯಿಸಿ ವಿವರಿಸುವ ಅನುಸಂಧಾನದ ಆಧುನಿಕ ಮಾದರಿಗಳನ್ನು ಅನೇಕ ಸಂಶೋಧಕರು ಉಪಯೋಗಿಸಿಕೊಂಡಿದ್ದಾರೆ. ಉದಾ: 

1.‘ಹರಿದಾಸ ಸಾಹಿತ್ಯ-ಶ್ರೀಮದ್ಭಾಗವತ, ಋಣ ಮತ್ತು ವೃದ್ಧಿ’ ಎಂಬ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪಿಎಚ್.ಡಿ. ಪ್ರಬಂಧದಲ್ಲಿ,

2.‘ಶ್ರೀವಾದಿರಾಜರ ಕೃತಿಗಳಲ್ಲಿ ಕೌಟುಂಬಿಕ ಸಾಮರಸ್ಯ’ ಎಂಬ ನೂತನ ಗ್ರಂಥದಲ್ಲಿ,

3.ಮುತ್ತಿಗಿ ಶ್ರೀನಿವಾಸಾಚಾರ್ಯರು ರಚಿಸಿರುವ ‘ಶ್ರೀವ್ಯಾಸರಾಯರು: ವ್ಯಕ್ತಿತ್ವ ಮತ್ತು ಪ್ರಭಾವ’ ಎಂಬ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎಂ.ಫಿಲ್. ಪ್ರಬಂಧದಲ್ಲಿ,

4.ಡಾ.ಬಿ.ಎಸ್.ಅನಿಲಕುಮಾರ ಇವರ ‘ಹರಿದಾಸರ ಲೋಕನೀತಿ, ಅನುಸಂಧಾನದ ಆಧುನಿಕ ಮಾದರಿಗಳು’ ಎಂಬ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್.ಡಿ. ಪ್ರಬಂಧದಲ್ಲಿ.

ಶ್ರೀಗಳವರು ಕೈಗೊಂಡಿರುವ ‘ಶ್ರೀವ್ಯಾಸರಾಜ ಗುರುಸಾರ್ವಭೌಮರ ಸಮಗ್ರ ಚರಿತ್ರೆ’ ಎಂಬ ವಿಮರ್ಶಾತ್ಮಕ ಸಂಶೋಧನ ಮಹಾಸಂಪುಟದ ಸಂಪಾದನೆಯ ಕಾರ್ಯವು ಪ್ರಗತಿಯಲ್ಲಿದೆ.

ಭಾಗವತ, ರಾಮಾಯಣ, ತಾತ್ಪರ್ಯನಿರ್ಣಯ, ಸುಮಧ್ವವಿಜಯ, ತೀರ್ಥಪ್ರಬಂಧ, ಸರಸಭಾರತೀ ವಿಲಾಸ, ಭಾಗವತ ಸಾರೋದ್ಧಾರ, ದ್ವಾದಶ ಪುರಾಣಾಂತರ್ಗತ ವೇಂಕಟೇಶ ಮಾಹಾತ್ಮ್ಯ, ವಿಶೇಷವಾಗಿ ಭವಿಷ್ಯೋತ್ತರ ಪುರಾಣಾಂತರ್ಗತ ವೇಂಕಟೇಶ ಮಾಹಾತ್ಮ್ಯ, ನಾರದೀಯ ಭಕ್ತಿಸೂತ್ರಗಳು, ಶಾಂಡಿಲ್ಯ ಭಕ್ತಿಸೂತ್ರಗಳು, ಶ್ರೀವ್ಯಾಸರಾಜಸ್ತ್ರೋತ್ರ, ಸ್ವಾಪ್ನವೃಂದಾವನಾಖ್ಯಾನ, ಶ್ರೀರಾಘವೇಂದ್ರಸ್ತೋತ್ರ ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರು ಮಾಡಿರುವ ಪ್ರವಚನಗಳು ಇಂದಿಗೂ ಮನೆಮಾತಾಗಿವೆ. ಪಕ್ಷ ಮಾಸದಲ್ಲಿ ಹಾಗೂ ತುಲಾ ಮಾಸದಲ್ಲಿ ಗರುಡ ಪುರಾಣ ಪ್ರವಚನದ ಮೂಲಕ ವಿಶ್ವದಾದ್ಯಂತ ಆಸ್ತಿಕರ ಜೀವನದಲ್ಲಿ ಪಶ್ಚಾತ್ತಾಪ ಹಾಗೂ ಸದಾಚಾರ ಸದ್ವಿಚಾರಗಳಲ್ಲಿ ಆಸಕ್ತಿ ಮೂಡಿಸಿ ಅಗಾಧ ಪರಿವರ್ತನೆಯನ್ನು ತಂದಿದ್ದಾರೆ.

  ಹರಿದಾಸರ ಕೀರ್ತನೆಗಳನ್ನು ಹೆಣ್ಣುಮಕ್ಕಳು, ಸಂಸ್ಕøತದ ಗಂಧವಿಲ್ಲದವರು, ಪಾಮರರು ಹಾಡಲು ಮಾತ್ರ ಯೋಗ್ಯವೆಂದು ಅನೇಕ ಪಂಡಿತರು ಭಾವಿಸಿದ್ದ ಕಾಲದಲ್ಲಿ, ಅವನ್ನು ವ್ಯಾಸಪೀಠದ ಮೇಲೆ ಇಡುವ ಮೂಲಕ ಶ್ರೀವ್ಯಾಸರಾಯರು ಹಾಕಿಕೊಟ್ಟ ಸಂಪ್ರದಾಯವನ್ನು ಪುನರುಜ್ಜೀವಿಸಿ, ಹರಿದಾಸರ ಕೃತಿಗಳ ಮೂಲಕವೇ ಸರ್ವಮೂಲಗಳ ಸಾರವನ್ನು ಸಮನ್ವಯ ಮಾಡುವ; ಹರಿದಾಸರ ಕೃತಿಗಳನ್ನೇ ವಾರಗಟ್ಟಲೆ ಪ್ರವಚನ ಮಾಡುವ ಹೊಸ ಪದ್ಧತಿಯನ್ನು ಹಾಕಿದವರು ಇಂದಿನ ಶ್ರೀಶ್ರೀವಿದ್ಯಾವಿಜಯತೀರ್ಥರು. ಅದುವರೆಗೆ ಲಕ್ಷ್ಮೀ ಶೋಭಾನೆ, ವೈಕುಂಠ ವರ್ಣನೆ, ಮಧ್ವನಾಮ, ಶ್ರೀಕೃಷ್ಣಬಾಲಲೀಲೆ, ಹರಿಕಥಾಮೃತಸಾರ, ವಿಜಯರಾಯರ ಕವಚ, ಮೊದಲಾದ ಉತ್ತಮ ಕೃತಿಗಳಿದ್ದರೂ ಯಾವುದೇ ಪಂಡಿತರಾಗಲಿ, ಯತಿಗಳಾಗಲಿ, ಅವುಗಳ ಪ್ರವಚನ ಮಾಡುತ್ತಿರಲಿಲ್ಲ. ಇವರು ಆರಂಭಿಸಿ ಮುಂದುವರೆಸಿದ ನಂತರ ಇಂದು ಕೆಲವು ಪೀಠಾಧಿಪತಿಗಳು ಹಾಗೂ ಪಂಡಿತರು ಸಹ ಇವನ್ನು ಪ್ರವಚನ ಮಾಡುತ್ತಿದ್ದಾರೆ.  ಯಾವುದೇ ಸಣ್ಣ ವಿಚಾರವನ್ನು ಎತ್ತಿಕೊಂಡರೂ ಅದಕ್ಕೆ ಒಂದು ವೇದವಾಕ್ಯ, ಉಪನಿಷತ್ತು, ಪುರಾಣ, ನಿರ್ಣಯ, ಸ್ತೋತ್ರ, ಕನ್ನಡ ಕೀರ್ತನೆ, ಗುರುಗಳು ಹೇಳುತ್ತಿದ್ದ ಮಾತು, ಲೋಕದ ಅನುಭವ ಹಾಗೂ ಅದನ್ನು ಮತ್ತೆ ಅಪರೋಕ್ಷ ಜ್ಞಾನಿಗಳ ಜೀವನದ ಘಟನೆಗೆ ಅನ್ವಯಿಸುವ ವಿಶಿಷ್ಟ ಶೈಲಿ ಇವರದು. ಸಾಕಷ್ಟು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಉಪನ್ಯಾಸದ ಮಹತ್ವವನ್ನು ಹೆಚ್ಚಿಸಿದ್ದಾರೆ. 

      ಲೌಕಿಕ ಉದಾಹರಣೆಯನ್ನು, ಹಾಸ್ಯವನ್ನು, ಅಲ್ಲಲ್ಲಿ ಬಳಸಿದರೂ ಅವುಗಳನ್ನು ಹರಿವಾಯು ಗುರು ಮಹಿಮೆಯಲ್ಲೇ ಅನ್ವಯವಾಗುವಂತೆ ಅಳವಡಿಸುವ ಇವರ ಶೈಲಿ ಮನೋಹರ. ನೇರ ನಿಷ್ಠುರ ಮಾತುಗಾರರಾದ ಇವರನ್ನು ಮೊದಲ ಬಾರಿಗೆ ಕೇಳುವವರು ಆಶ್ಚರ್ಯಗೊಂಡರೂ ಅವರ ಸಾತ್ವಿಕತೆ, ಮೃದು ಹೃದಯ, ಸತ್ಯಪರತೆ, ಕಾಳಜಿ, ಎಲ್ಲ ಪರಂಪರೆಯ ಜ್ಞಾನಿಗಳನ್ನೂ ಗೌರವಿಸಬೇಕೆಂಬ ದೀಕ್ಷೆ ಇವುಗಳನ್ನು ಗುರುತಿಸುವುದು ಕಷ್ಟವೇನಲ್ಲ. ಇವರಲ್ಲಿ ಮಾಧವ ಮಧ್ವರ, ಸರ್ವಗುರುಗಳ ಕೃಪೆ ನೆಲೆಗೊಂಡಿರುವುದರಿಂದ 75ನೆಯ ವಯಸ್ಸಿನಲ್ಲೂ ಸತತ ಮೂರು - ಮೂರೂವರೆ ಗಂಟೆಗಳ ಕಾಲ ಏಕಪ್ರಕಾರವಾಗಿ ಸ್ಫೂರ್ತಿಗುಂದದೆ ಉಪನ್ಯಾಸ ನೀಡುತ್ತಿದ್ದಾರೆ.

ರಾಮಾಯಣ, ಭಾರತ, ಭಾಗವತ ದ್ವೈತ ಸಿದ್ಧಾಂತ ಗ್ರಂಥಗಳು, ವೈಕುಂಠವರ್ಣನೆ, ಸ್ವಪ್ನಪದ, ಹರಿಸರ್ವೋತ್ತಮಸಾರ ಮೊದಲಾದ ಕೃತಿಗಳ ಬಗ್ಗೆ ಈವರೆಗೆ ಸುಮಾರು 35000 ಗಂಟೆಗಳ ಉಪನ್ಯಾಸವನ್ನು ನೀಡಿದ್ದಾರೆ. ಕನ್ನಡದ ಹರಿದಾಸ ಸಾಹಿತ್ಯದ ಒಳನೋಟಗಳನ್ನು ಪರಿಚಯಿಸಿದ್ದಾರೆ. ಶಾಸ್ತ್ರ ವಿಷಯಗಳ ಜೊತೆಗೆ ನೂರಾರು ಹರಿದಾಸರ ಪದಗಳು ಕಂಠಸ್ಥವಾಗಿವೆ.

ಪೂಜ್ಯರ ವಿದ್ವತ್ತನ್ನು ಗುರುತಿಸಿ ಅವರಿಗೆ ದೊರೆತಿರುವ ಪ್ರಶಸ್ತಿಗಳು ಹಲವಾರು. “ವೇದವಾರಿದಿ”, “ಪ್ರವಚನ ಸುಧಾಕರ”, “ವ್ಯಾಸ-ದಾಸ ದರ್ಶನ ವಾಚಸ್ಪತಿ”, “ಶಾಸ್ತ್ರನಿಧಿ ಶಾಶ್ತ್ರಪವಚನ ರತ್ನ”, “ಶಾಸ್ತ್ರೋಪನ್ಯಾಸವಿಚಕ್ಷಣ”, “ಪುರಾಣಭಾಸ್ಕರ”, “ಸಂಶೋಧನ ಲೇಖನ ಚತುರ”, “ವೇದಾಂತ ರತ್ನ” ಇವು ಅವರಿಗೆ ದೊರೆತಿರುವ ಕೆಲವು ಪ್ರಶಸ್ತಿಗಳು. ಶ್ರೀಪಾದರಾಜಮಠ, ವ್ಯಾಸರಾಜ ಮಠ, ಪುತ್ತಿಗೆ ಮಠ, ಸೋದೆ ಮಠ, ಕಾಣಿಯೂರು ಮಠ, ಶ್ರೀ ರಾಘವೇಂದ್ರ ಮಠ ಮೊದಲಾದ ಮಠಗಳು ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ತಿರುಪತಿ ತಿರುಮಲ ದಾಸಸಾಹಿತ್ಯ ವಿಭಾಗದ “ಪುರಂದರ ಪ್ರಶಸ್ತಿ” ದಾಸ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.

ಇತಿಹಾಸ ಸಂಶೋಧನೆಗೆ ಸಂಬಂಧಿಸಿದಂತೆ ‘ಶ್ರೀ ಜಯತೀರ್ಥ ಮೂಲ ಬೃಂದಾವನ’ ಮತ್ತು ‘ಸತ್ಸಂವದಿಷ್ಯಾಮಿ’ ಗ್ರಂಥಗಳು ಅವರ ಅಪಾರ ವಿದ್ವತ್ತಿಗೆ ಸಾಕ್ಷಿಯಾಗಿವೆ.ನಿರಂತರ ಅಧ್ಯಯನ, ಶಾಸ್ತ್ರ ಚಿಂತನೆ, ಧಾರ್ಮಿಕ ಅನುಸಂಧಾನ ಮತ್ತು ಆಚಾರ್ಯ ಪರಂಪರೆಯ ಬಗ್ಗೆ ಗೌರವ - ಇವುಗಳಿಂದಾಗಿ ವಿದ್ವಾನ್ ಪುಷ್ಕರಪ್ರಸಾದ ಆಚಾರ್ಯರು 2016 ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದರು. ತಮ್ಮ ಶಾಸ್ತ್ರಾಧ್ಯಯನಕ್ಕೆ ಇನ್ನೂ ವಿಶಾಲವಾದ ವೇದಿಕೆಯನ್ನು ನಿರ್ಮಿಸಿಕೊಂಡರು.

ಗುರುಮುಖದಿಂದ ಗಳಿಸಿದ ಸಾಂಪ್ರದಾಯಿಕ ವಿದ್ಯೆಯನ್ನು ಜೀವನ ಪರ್ಯಂತ ಸ್ವಯಂ ಕಲಿಕೆಯ ಮೂಲಕ ರಕ್ಷಿಸಿ, ಬೆಳೆಸಿ, ಆ ಪರಿಶ್ರಮದ ಫಲಿತಗಳನ್ನು ಸಮಾಜಕ್ಕೆ ಧಾರೆ ಎರೆಯುತ್ತಿರುವ ಅಪೂರ್ವ ಸಾಧಕರಾದ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದಂಗಳವರಿಗೆ ಅವರ ವೇದ-ಶಾಸ್ತ್ರ ವಿದ್ಯಾಪರಿಣತಿಗಾಗಿ ಮತ್ತು ಸಾಧನೆಗಳನ್ನು ಗುರುತಿಸಿ  ಭಾರತ ಸರ್ಕಾರದ ನೀತಿ ಆಯೋಗದಿಂದ ಮಾನ್ಯತೆ ಪಡೆದ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ & ಎಜುಕೇಷನ್ ನವರು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿರುವುದು ನಿಜಕ್ಕೂ ವಿದ್ವತ್ ವಲಯದಲ್ಲಿ ಹೆಮ್ಮೆ ಮತ್ತು ಸಂಭ್ರಮ ಮೂಡಿಸಿದೆ.

ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಉತ್ತರದ ವಿದ್ವಾಂಸ ಮಠಗಳು, ಸಂಘ ಸಂಸ್ಥೆಗಳು ಆಚಾರ್ಯರ ವಿದ್ವತ್ತನ್ನು ಗುರುತಿಸಿವೆ. ಶ್ರೀ ಶ್ರೀ ವಿದ್ಯಾವಿಜಯತೀರ್ಥರೆಂಬ ನಾಮಧೇಯದಿಂದ ಸನ್ಯಾಸಾಶ್ರಮ ಸ್ವೀಕರಿಸಿರುವ ವಿದ್ವಾನ್ ಪುಷ್ಕರಪ್ರಸಾದ ಆಚಾರ್ಯರ ವಿದ್ವತ್ತಿನಂತೆಯೇ ಅವರ ತ್ಯಾಗಮನೋಭಾವವೂ ಗಮನಾರ್ಹವಾದದ್ದು. 


Post a Comment

0Comments

Post a Comment (0)