ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ವಿಶೇಷ ಅವರು ಮಹಿಮೆ.-100

varthajala
0

17-3-2025ರಂದು ಶ್ರೀವಾದಿರಾಜರ ಆರಾಧನಾ ಮಹೋತ್ಸವ 

ಹಸುವಿನ ಹಾಲು ಹೆಚ್ಚಾಯಿತು.

ಶ್ರೀ ವಾದಿರಾಜ ಗುರು ಸಾರ್ವಭೌಮರು ಸಂಚಾರದಲ್ಲಿ ಇರುವಾಗ ಒಂದೂರಿಗೆ ದಿಗ್ವಿಜಯ ಮಾಡಿದಾಗ ಅಲ್ಲಿ ಶ್ರೀ  ಹಯಗ್ರೀವ ದೇವರ ಅಭಿಷೇಕ ಕ್ಕೋಸ್ಕರ ಮಠದ ಜನರು ಆಕಳ ಹಾಲನ್ನು ತರಲು ಹೊರಟರು. ಅವರೆಷ್ಟು ಕಡೆಯಲ್ಲಿ ವಿಚಾರಿಸಿದರೂ ಹಾಲು ದೊರೆಯಲಿಲ್ಲ. ಅಲ್ಲಿ ಎಲ್ಲಿಯೂ ಕರುವಿದ್ದ ದನವೇ ಇರಲಿಲ್ಲ. ಕೊನೆಗೆ ಒಂದು ಮನೆಯಲ್ಲಿ , ಕರು ಉಳ್ಳ  ದನವು  ಇವರ ಕಣ್ಣಿಗೆ ಗೋಚರವಾಯಿತು. ಅಲ್ಲಿಗೆ ಹೋಗಿ  ಹಯಗ್ರೀವ ದೇವರ ಅಭಿಷೇಕಕ್ಕೆ, ಹಾಲನ್ನು ಕೊಡಿರೆಂದು ಕೇಳಿದರು. 

ಆಗ ಆ ದನದ  ಯಜಮಾನನು ಪಶ್ಚಾತಾಪಗೊಂಡು, ದೇವರ ಅಭಿಷೇಕಕ್ಕೆಂದು ನೀವು ಕೇಳುತ್ತಿರುವಾಗ ನಾನು ಅಗತ್ಯವಾಗಿ  ಕೊಡಬೇಕಾದುದೇನೋ ನಿಜ. ಆದರೇನು ಮಾಡಲಿ. ಆ ದನದ ಕೆಚ್ಚಲ್ಲಲ್ಲೀಗ ಸರಿಯಾಗಿ  ಹಾಲೆ ಇಲ್ಲ. ಪ್ರಯತ್ನದಿಂದ ಕರೆದರೂ, ಸ್ವಲ್ಪವೂ ಹಾಲು ದೊರಕದು. ನಾನೇನು ಮಾಡಲಿ ಎಲ್ಲಿಂದ ಕೊಡಲಿ ಎಂದನು. ಮಠದ ಜನರು ಶ್ರೀಗಳು ಇದ್ದ ಕಡೆಗೆ ಬಂದು ಹಾಲಿಗಾಗಿ ತಾವು ಪಟ್ಟ ಪ್ರಯತ್ನವನ್ನು ಮತ್ತು ದನದ ಯಜಮಾನನ ಪಶ್ಚಾತಾಪವನ್ನು ಅರಿಕೆ ಮಾಡಿಕೊಂಡರು. ಆ ಯಜಮಾನನು ನಿಜವಾದ ದೈವ ಭಕ್ತನಾಗಿದ್ದನು. 

ಇದನ್ನರಿತ ಸರ್ವಜ್ಞರಾದ, ಶ್ರೀ ಗುರುಗಳು ಮೃತ್ತಿಕೆಯನ್ನು  ಕೊಟ್ಟು ಆ ದನದ ಕೆಚ್ಚಲಿಗೆ ಹಚ್ಚುವಂತೆ ಹೇಳಿ ಕಳುಹಿಸಿದರು. ಆ ಮನೆಯ ಯಜಮಾನನು ಭಕ್ತಿಯಿಂದ ಆ ದನದ ಕೆಚ್ಚಲಿಗೆ ಮೃತ್ತಿಕೆಯನ್ನು ಹಚ್ಚಿದನು.

ಶ್ರೀ ಗುರುವರ್ಯರ   ಮೃತ್ತಿಕೆಯ  ಲೇಪ ಮಾತ್ರದಿಂದ ಕೂಡಲೇ ,ಆ ದನದ ಕೆಚ್ಚಲಲ್ಲಿ. ಹಾಲು ಉಕ್ಕಿ ಹರಿಯ ತೊಡಗಿತ್ತು. ಆಗೊಂದು  ಪಾತ್ರೆಯನ್ನು ಹಿಡಿದನು. ಅದು ತುಂಬಿತು. ಅನಂತರ ಇನ್ನೊಂದು ಪಾತ್ರೆಯನ್ನು ಹಿಡಿದನು. ಅದು ತುಂಬಿತು. ಹೀಗೆ ಬಹಳ ಪಾತ್ರೆಗಳು ತುಂಬಿ ಹೋದವು. ಕೊನೆಗೆ ಪಾತ್ರೆಗಳಿಲ್ಲದೆ  ಹಾಗೆಯೇ ಬಿಡಬೇಕಾಯಿತು.  ಆಗಲೂ  ಹಾಲು ಕೆಚ್ಚಲಿನಿಂದ ಸುರಿಯುತ್ತಲೇ  ಇದ್ದಿತ್ತು. ಅದು ನಿಲ್ಲಲೇ ಇಲ್ಲ. ಆಗ ಆ ದನದ ಸ್ವಾಮಿಯು ತನ್ನ ದನಕ್ಕೆ ಜನರ ದೃಷ್ಟಿಯಾಗುವುದೆಂದು ಹೆದರಿದ. ಹಾಗೆಯೇ ಶ್ರೀ ಗುರುಗಳಲ್ಲಿ ವಿಜ್ಞಾಪಿಸಿಕೊಂಡ. ಆಗ ಅವರು ಪುನ: ಮೃತ್ತಿಕೆಯನ್ನು  ಹಚ್ಚಲು ಹೇಳಿದರು.

 ಆ ಗುರುವರ್ಯರ .ಅಪ್ಪಣೆಯಂತೆ ಪುನ:. ಮೃತ್ತಿಕೆಯನ್ನು ಹಚ್ಚಲು, ಹಾಲಿನ ಧಾರೆಯೂ . ನಿಂತಿತು.  ಅಂದಿನಿಂದ ಆ ದನವು ಬೇಕಾದಂತೆ  ಹಾಲನ್ನೀಯಲು ಆರಂಬಿಸಿತು .ಆ ಮನೆಯಲ್ಲಿ ಜನರ ಜೀವನಕ್ಕೆ ಬೇಕಾದಷ್ಟು ಹಾಲು ದೊರಕಿತು .ಆ ಗೃಹಸ್ಥನು ಈ ಗುರುಗಳ ಪರಮಾನುಗ್ರಹದಿಂದ ಅಂದಿನಿಂದ ಸುಖವಾಗಿ ಬಾಳಿದನು .

ಶ್ರೀ ಕೃಷ್ಣಾರ್ಪಣಮಸ್ತು

Post a Comment

0Comments

Post a Comment (0)