ಬೆಂಗಳೂರು :ಅಖಿಲ ಕರ್ನಾಟಕ ಮಧ್ವ ಮಹಾಸಭಾ ವತಿಯಿಂದ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಶ್ರೀಸುಜಯನಿಧಿ ತೀರ್ಥರಿಗೆ ಗುರುವಂದನೆಯನ್ನು ಮಾಡಲಾಯಿತು,
ನಗರದ ರಾಘವೇಂದ್ರ ಕಾಲೋನಿ, ಚಾಮರಾಜಪೇಟೆಯಲ್ಲಿರುವ ಶ್ರೀಶ್ರೀಪಾದರಾಜ ಮಠದಲ್ಲಿ ಮಹಾಸಭಾದ ಸಂಘಟನಾ ಕಾರ್ಯದರ್ಶಿ ನ. ಶ್ರೀ. ಸುಧೀಂದ್ರ ರಾವ್, ಕೋಶಾಧ್ಯಕ್ಷ ಕೆ ವಿ ರಾಮಚಂದ್ರ, ಉಪಾಧ್ಯಕ್ಷ ಅಶ್ವತನಾರಾಯಣ ಸೇರಿದಂತೆ ಮತ್ತಿತರರು ಇದ್ದಾರೆ.
ಶ್ರೀಗಳ ಪೀಠಾರೋಹಣ ನಂತರ ಹಲವಾರು ಉತ್ತಮ ಯೋಜನೆಗಳನ್ನು ಮಾಡಿ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದು ಅದರ ಜತೆಗೆ ಇತ್ತೀಚಿಗೆ ನೆಡೆದ ಎಕೆಬಿಎಂಎಸ್ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಂಡು ಜ್ಞಾನರ್ಜನೆ ನಿಧಿಯನ್ನು ಆರಂಭಿಸಲು ಶ್ರೀಮಠದ ವತಿಯಿಂದ ಒಂದು ಲಕ್ಷ ರೂಪಾಯಿ ನಿಧಿಯನ್ನು ನೀಡಿದ್ದು ಮಾದರಿಯಾಗಿದೆ ತತ್ಸಾಬಂಧ ನಮ್ಮ ಮಹಾಸಭಾದ ವತಿಯಿಂದ ಗುರುಗಳಿಗೆ ಗುರುವಂದನೆಯನ್ನು ಸಲ್ಲಿಸಿದ್ದು
ಅಖಿಲ ಕರ್ನಾಟಕ ಮಧ್ವ ಮಹಾಸಭಾವು ಇಂತಹ ಉತ್ತಮ ಕಾರ್ಯವನ್ನು ಮಾಡುವುದಕ್ಕೆ ಸದಾ ಬೆಂಬಲವಾಗಿ ಅವರುಗಳ ಜತೆ ಇರುತ್ತೆ ಎಂದು ಸುಧೀಂದ್ರ ರಾವ್ ಹೇಳಿದರು.