ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ‌ ಬೆಳ್ಳಿ ಮಹೋತ್ಸವ - ಗಣ್ಯರಿಗೆ ಗೌರವ ಸಮರ್ಪಣೆ

varthajala
0

ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ‌ ಬೆಳ್ಳಿ ಮಹೋತ್ಸವ ಹಾಗೂ ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಹಲವಾರು ಗಣ್ಯರಿಗೆ "ಗೌರವ ಪ್ರಶಸ್ತಿ-ಸನ್ಮಾನ" 

ಬೆಂಗಳೂರು : ಬನಶಂಕರಿಯ ಶ್ರೀ ದೇವಗಿರಿ ಶ್ರೀ ವೆಂಕಟರಮಣನ ಸನ್ನಿಧಿಯಲ್ಲಿ ಫೆಬ್ರವರಿ 12 ರಿಂದ 16ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಂಬಿಹಳ್ಳಿ ಮಾಧವತೀರ್ಥ ಮಠದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀಮತಿ ಗೌರಿ ನಾಗರಾಜ್ ಅವರ ನೇತೃತ್ವದಲ್ಲಿ ಗಣ್ಯರಿಗೆ  ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. ನಂತರ ಶ್ರೀಗಳು ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.

'ಗಾನಕಲಾನಿಧಿ' ವಿದ್ವಾನ್ ಡಾ|| ಆರ್. ಕೆ. ಪದ್ಮನಾಭರವರಿಗೆ "ಜೀವಮಾನದ ಸಂಗೀತ ಸಾಧನಾ ಪ್ರಶಸ್ತಿ", ದಿ|| ಪಿ. ಅನಂತ ಪದ್ಮನಾಭಾಚಾರ್ ಮತ್ತು ವಿದ್ವಾನ್ ಜಿ. ಶಿವರಾಮ ಅಗ್ನಿಹೋತ್ರಿ ಇವರಿಗೆ "ವ್ಯಾಸ ಪ್ರಶಸ್ತಿ",  ಡಾ|| ವಿದುಷಿ ಅರ್ಚನಾ ಕುಲಕರ್ಣಿ ಅವರಿಗೆ "ಗುರು ರಾಘವೇಂದ್ರ ಸಂಸ್ಕರಣ ಪ್ರಶಸ್ತಿ", ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರದಲ್ಲಿ ಅಭಿನಯಿಸಿದ ಉದಯೋನ್ಮುಖ ಪ್ರತಿಭೆ ಚಿರಂಜೀವಿ ದೇವರಾತ ಜೋಷಿ ಇವರಿಗೆ "ಧ್ರುವ ಪ್ರಶಸ್ತಿ" ಹಾಗೂ ಕು|| ವೇದಾ ವಿ.ಎಸ್. ಇವರಿಗೆ "ಪ್ರತಿಭಾ ಪುರಸ್ಕಾರ"ವನ್ನು ನೀಡಿ    ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಗುರುಗಳಿಗೆ  ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಎನ್. ಸಂತೋಷ್ ಹೆಗಡೆ, ಡಾ|| ಎಸ್. ರಂಗನಾಥ್, ಡಾ|| ರಾಯಚೂರು ಶೇಷಗಿರಿದಾಸ್ ಹಾಗೂ ಶ್ರೀ ಜಿ.ಎಚ್. ಮದನ್ ಇವರೆಗೆ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಬೆಳಗೆರೆ ಗೌರಿ ನಾಗರಾಜ್ ರವರು ಫಲ ಪುಷ್ಪಗಳೊಂದಿಗೆ ಗುರುಗಳಿಗೂ ಮತ್ತು ಎಲ್ಲಾ ಗಣ್ಯರಿಗೂ ಗೌರವ ಸಮರ್ಪಿಸಿದರು. ಈ ಕಾರ್ಯಕ್ರಮವು ದೇವಗಿರಿ ವರಪ್ರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸನ್ನಿಧಿಯಲ್ಲಿ ನೆರವೇರಿತು. 
ಇದೇ ಸಂದರ್ಭದಲ್ಲಿ ಗುರುಗಳು ಮತ್ತು ಗಣ್ಯರು ಶ್ರೀಮತಿ ಗೌರಿ ನಾಗರಾಜ್ ಅವರನ್ನು ಆಶೀರ್ವದಿಸಿ ಅಭಿನಂದಿಸಿದರು ಹಾಗೂ ವಿಶೇಷವಾಗಿ 
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ಪ್ರಶಂಸಿಸಿ ಇದಕ್ಕೆ ಕಾರಣಕರ್ತರಾದ ಸಂಸ್ಥೆಯ ಗೌರವ ಅಧ್ಯಕ್ಷೆ ಶ್ರೀಮತಿ ಗೌರಿ ನಾಗರಾಜ್ ರವರನ್ನೂ ಮತ್ತಿತರರನ್ನೂ ಆಶೀರ್ವದಿಸಿ  ಸಂಸ್ಥೆಯು ಇನ್ನೂ ಉತ್ತುಂಗಕ್ಕೆ ಏರಲಿ ಎಂದು ನಾವು ಶ್ರೀಮೂಲರಾಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.

Post a Comment

0Comments

Post a Comment (0)