ಶ್ರೀ ಮಧ್ವರು - 1 - ದಿನಾಂಕ 06-02-2025 ಗುರುವಾರ - ಶ್ರೀಮನ್ಮಧ್ವ ನವಮೀ

varthajala
0

 " ಶ್ರೀ ಮಧ್ವರು - 1 "

" ದಿನಾಂಕ :  0,6.02.2025 ಗುರುವಾರ  - ಶ್ರೀಮನ್ಮಧ್ವ ನವಮೀ "

" ವ್ಯಾಸ -ದಾಸ ಸಾಹಿತ್ಯದಲ್ಲಿ - ವಿಶ್ವಗುರು ಶ್ರೀಮದಾನಂದತೀರ್ಥ ಭಗವತ್ಪಾದರು '

ಶ್ರೀ ಮಧ್ವರ ಅವತಾರ : 

ಕ್ರಿ ಶ 1238

ಶ್ರೀಮದಾಚಾರ್ಯರು ಬದರಿಕಾಶ್ರಮ ಪ್ರವೇಶ : 

ಕ್ರಿ ಶ 1317

ಶ್ರೀಮಧ್ವವಿಜಯ...

ಮುಕುಂದಭಕ್ತೈ 

ಗುರುಭಕ್ತಿಜಾಯೈ

ಸತಾಂ ಪ್ರಸತ್ತೈ ಚ 

ನಿರಂತರಾಯೈ ।

ಗರೀಯಸೀ೦ ವಿಶ್ವ-

ಗುರೋರ್ವಿಶುದ್ಧಾ೦

ವಕ್ಷ್ಯಾಮಿ ವಾಯೋ-

ರವತಾರಲೀಲಾಮ್ ।।

ಶ್ರೀ ವಾಯುದೇವರು ಮೋಕ್ಷ ಯೋಗ ಜೀವರಿಗೆ ಗುರುವಾಗಿರುವುದರಿಂದ " ವಿಶ್ವಗುರು " ಯೆಂದೆನಿಸಿರುವರು. 

ಶ್ರೀ ವಾಯುದೇವರು ಶ್ರೀ ಹನುಮದವತಾರ - ಶ್ರೀ ಭೀಮಸೇನಾವತಾರ - ಶ್ರೀ ಮಧ್ವಾವತಾರಗಳೆಂಬ ಮೂರು ಅವತಾರಗಳನ್ನು ಸ್ವೀಕರಿಸಿರುವರು.

ಆ ಮೂರು ಅವತಾರಗಳಲ್ಲಿಯೂ ನಾನಾ ವಿಧಗಳಾದ ಲೀಲೆಗಳನ್ನು ಮಾಡಿರುವರು. 

ಆ ಲೀಲೆಗಳೆಲ್ಲವೂ ಪರಿಶುದ್ಧವಾದವುಗಳೂ - ಅತಿ ಶ್ರೇಷ್ಠವಾದವುಗಳೂ ಮತ್ತು ಮೋಕ್ಷಕ್ಕೆ ಸಾಧನವಾದವುಗಳು.

ಮೋಕ್ಷದಾಯಕವಾದದ್ದು ಮುಕುಂದನ ಭಕ್ತಿ. 

ಆ ಮುಕುಂದನ ಭಕ್ತಿ ಗುರುಗಳ ಭಕ್ತಿಯಿಂದ ಹುಟ್ಟುತ್ತದೆ. 

ಅದು ಮಾತ್ರವಲ್ಲ - ಸಜ್ಜನರ ಅನುಗ್ರಹವೂ ಮುಕುಂದನ ಭಕ್ತಿಗೆ ಸಾಧನವಾಗುತ್ತದೆ. 

ಆ ಸಜ್ಜನರ ಅನುಗ್ರಹವನ್ನು ಎಡೆಬಿಡದಂತೆ ಸಾಧಿಸಬೇಕು. 

ಅದಕ್ಕಾಗಿ ಶ್ರೀ ವಾಯುದೇವರ ಅವತಾರ ಲೀಲೆಗಳನ್ನು ಹೇಳುವೆನು!!

" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಗುರುಮಧ್ವಪತಿವಿಠ್ಠಲರ ಮಾತಲ್ಲಿ.... "

ಶ್ರೀಪತಿ ನಾಭಿಯಿಂದ ಅಜನು ಜನಿಸಿದನು । ಅಜನ ಮಾನಸ ಪುತ್ರರೇ ಸನಕಾದ್ಯರು । ಸನಕಾದಿಗಳ ಪುತ್ರರೇ ದುರ್ವಾಸರು । ದುರ್ವಾಸರ ಶಿಷ್ಯರೇ ಸತ್ಯಪ್ರಜ್ಞರು । ಸತ್ಯಪ್ರಜ್ಞರ ಶಿಷ್ಯರೇ ಪರತೀರ್ಥರು । ಪರತೀರ್ಥರ ಶಿಷ್ಯರೇ ಪ್ರಾಜ್ಞತೀರ್ಥರು । ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು । ಅಚ್ಯುತಪ್ರೇಕ್ಷರ ಕರ ಸಂಜಾತರೇ ಪೂರ್ಣಪ್ರಜ್ಞರು । ಪೂರ್ಣಪ್ರಜ್ಞರೇ ನಮ್ಮ ಭಾಷ್ಯಕಾರರು । ನಮ್ಮ ಭಾಷ್ಯಕಾರರೇ ಶ್ರೀಮದಾನಂದತೀರ್ಥರು । ಗುರು ಮಧ್ವಪತಿವಿಠ್ಠಲನ್ನ ನಿಜ ದಾಸರು ।।

" ಪ್ರಸ್ತಾವನೆ "

" ಶ್ರೀ ವೆಂಕಟವಿಠ್ಠಲರ ಮಾತಲ್ಲಿ... "

ಹನುಮ ಭೀಮ ಮಧ್ವಮುನಿರಾಯ ಪೈಸರಿಲಿಂ । ಮಣಿ ಭೂರುಹ ಧೇನು ಯೆನಿಸಿ ಕೊಳುವಾ ।

ಘನತರದ ವೇದದಿಂದಲಿ ವಿರಾಜಿಸುತಿಪ್ಪ ।

ಪ್ರಣತ ಜನರಿಗೆ ಅಭೀಷ್ಟಗಳ ಕೊಡುವ ।।

ಮನೋವಾಚಕಯದಲಿ ಅನುದಿನದಲಿ ।

ನೈನೆವರಿಗೆ ಜನನ ಯವ್ವನ ಜರಾ ಮೃತ್ಯು ಕಡಿವಾ ।

ಅನಿಲದೇವನೆ ಯೆನ್ನ ಜನುಮ ಜನುಮಗಳಲಿ ।

ವನಜನಾಭನ ಚರಣ ವನಜ ಸೇವಿಯೊಳಿಟ್ಟು ।।

ಸುಮಾರು 786 ವರ್ಷಗಳ ಹಿಂದಿನ ಮಾತು. 

ಪಶ್ಚಿಮ ಕರಾವಳಿಯ ಶಿವಳ್ಳಿ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನದೆದುರು ಅಂದು ಭಾರೀ ಗಲಾಟೆ. 

ಉಡುಪಿಯ ಕ್ಷೇತ್ರ ಸ್ವಾಮಿಯಾದ ಶ್ರೀ ಅನಂತೇಶ್ವರ ಶ್ರೀ ಪರಶುರಾಮ ಕ್ಷೇತ್ರದ ಆದಿದೈವ. 

ಸಂಕ್ರಮಣ ದಿನದಂದು ಅಲ್ಲಿ ನೆರೆಯುವ ದೊಡ್ಡ ಜಾತ್ರೆಗೆ ಅಸಂಖ್ಯ ಭಕ್ತರು ಕಿಕ್ಕಿರಿದು ನೆರೆದಿದ್ದರು.

ಮಂಗಲ ವಾದ್ಯಗಳು ಭೋರ್ಗೋರೆಯುತ್ತಿದ್ದವು.

ವಿದ್ವಾಂಸರು ವೇದ ಘೋಷ ಮಾಡುತ್ತಿದ್ದರು.

ಉತ್ಸಾಹದ ಕಾರ್ಯ ಕಲಾಪಗಳನ್ನು ನಿರೀಕ್ಷಿಸುವ ಕುತೂಹಲದಿಂದ ದೇವಸ್ಥಾನದೆದುರು ಜನ ಜಾತ್ರೆಯು ಕೋಲಾಹಲವನ್ನು ಮಾಡುತ್ತಲಿತ್ತು.

ದೇವಾಲಯದ ಎದುರು ಗಗನ ಚುಂಬಿತವಾದ ಗರುಡಗಂಬವೊಂದು ತಲೆ ಎತ್ತಿ ನಿಂತಿದೆ. 

ಜನರ ಗುಂಪಿನೊಳಗಿಂದ ಹುಚ್ಚನಂತೆ ಕಾಣುವ ಒಬ್ಬ ಮನುಷ್ಯನು ಆ ಗರುಡಗಂಬವನ್ನು ಸರಸರ ಏರ ತೊಡಗಿದನು. 

ಜನರೆಲ್ಲರೂ ಕುತೂಹಲದಿಂದ ಉಸಿರು ಬಿಗಿ ಹಿಡಿದು ಅವನೆಡೆಗೆ ನೋಡ ಹತ್ತಿದರು. 

ಆ ಕಂಬವನ್ನು ಏರುವವನ ಮೈಯಲ್ಲಿ ದೇವರ ಆವೇಶವು ಬಂದಂತೆ ಇತ್ತು.

ತಲೆ ಎತ್ತಿ ನೋಡಿದರೆ ಕಣ್ಣು ತಿರುವಂತಿದ್ದ ಆ ಎತ್ತರ ಕಂಬವನ್ನು ಚಪಲತೆಯಿಂದ ಅರೆಚಣದಲ್ಲಿ ಏರಿದ ಆ ಅರೆ ಹುಚ್ಚ. 

ಅಂಗೈ ಅಗಲದ ಕಂಬದ ತುದಿಯಲ್ಲಿ ಅವನು ಕುಣಿಯ ತೊಡಗಿದ. 

ರಂಗಭೂಮಿಯ ಮೇಲೆ ನಟ ಸಾರ್ವಭೌಮನ ನೃತ್ಯದಂತೆ ಇತ್ತು ಅವನ ಆ ಸ್ವಚ್ಛಂಧ ನಾಟ್ಯ. 

ಜನರ ಸದ್ದು ಗದ್ದಲಗಳೆಲ್ಲ ಒಮ್ಮೆಲೆ ಶಾಂತವಾದವು.

ಎವೆ ಪಿಳಕಿಸದ ಸಾವಿರಾರು ಕಣ್ಣುಗಳು ಅವನಲ್ಲಿ ಕೇಂದ್ರೀಕೃತವಾದವು.

ಸ್ತಂಭದ ತುದಿಯಲ್ಲಿ ಸ್ವಚ್ಛಂಧವಾಗಿ ತಾಂಡವಗೈವ ಆ ನೃತ್ಯ ಧೀರನು ಎರಡೂ ಕೈಗಳನ್ನು ಮೇಲೆತ್ತಿ ಘೋಷಣೆ ಗೈದ. 

" ಸ್ವಲ್ಪ ದಿನಗಳಲ್ಲಿ ಸರ್ವಜ್ಞರ ಅವತಾರ. 

ಸಜ್ಜನರಿಗೆಲ್ಲ ಕಲ್ಯಾಣ. 

ಅದು ಕೂಡಾ ಈ " ಶ್ರೀ ಪರಶುರಾಮ ಕ್ಷೇತ್ರ " ದಲ್ಲಿ ಬೇಗನೆ ಆಗಲಿರುವದು "

ಅವನು ಈ ಮಾತನ್ನು ಮೂಲ ಸಲ ಜನರಿಗೆಲ್ಲಾ " ಕೇಳಿರಿ " " ಕೇಳಿರಿ " ಯೆಂದು ಕೈ ಎತ್ತಿ ಮತ್ತೆ ಮತ್ತೆ ಹೇಳಿದ. 

ಆಣೆಯಿಟ್ಟು ಹೇಳಿದಂತೆ ಯಿತ್ತು ಅವನ ಆ ನಿರ್ಧಾರದ ಕಣಿ.

ಹುಸಿ ಹೋಗಲಿಲ್ಲ ಆ ಹುಚ್ಚನ ಮಾತು. 

ಮುಂದೆ ಕೆಲವೇ ದಿನಗಳಲ್ಲಿ ಉಡುಪಿಯ ಸಮೀಪದ " ಪಾಜಕಾ ಕ್ಷೇತ್ರ " ದಲ್ಲಿ " ಜೀವೋತ್ತಮರಾದ ಶ್ರೀ ವಾಯುದೇವರು " ಅವತಾರ ಮಾಡಿದರು.

" ಪವಿತ್ರಂ ಪಾಜಕ ಕ್ಷೇತ್ರಂ "

ಪಾಜಕ ಕ್ಷೇತ್ರವು ಶ್ರೀ ಪರಶುರಾಮದೇವರ ಕಾಲದಿಂದಲೂ ಪ್ರಸಿದ್ಧ ಕ್ಷೇತ್ರವೆನಿಸಿದೆ. 

ಈ ಗ್ರಾಮದ ಬದಿಯ ಬೆಟ್ಟದಲ್ಲಿ ಆ ರಾಮ ಕೃಷ್ನನ ತಂಗಿಯನ್ನು ಪ್ರತಿಷ್ಠೆ ಮಾಡಿದ. 

ಶ್ರೀ ಪರಶುರಾಮರ ಈ ದುರ್ಗಾ ಪ್ರತಿಷ್ಠಾ ಮಹೋತ್ಸವವನ್ನು ನೋಡಲು ಅಂದು ವಿಮಾನದಲ್ಲಿ ಬಂದಿದ್ದರಂತೆ. 

ಅದಕ್ಕಾಗಿಯೇ " ವಿಮಾನಗಿರಿ " ಯೆಂದು ಈಗಲೂ ಅದಕ್ಕೆ ಹೆಸರು.

ಈ ಪಾಜಕದ ಸುತ್ತಲೂ ಶ್ರೀ ಪರಶುರಾಮದೇವರ ಬಿಲ್ಲು - ಬಾಣ - ಕೊಡಲಿ - ಗದೆಗಳಿಂದ ರೂಪುಗೊಂಡಿವೆ ನಾಲ್ಕು ತೀರ್ಥಗಳು. 

ನಿಸರ್ಗ ಸೌಂದರ್ಯದ ನೆಲೆವೀಡಾದ ಈ ಪಾವನ ಕ್ಷೇತ್ರವೆಲ್ಲವೂ ಮಧ್ಯಗೇಹ ಮನೆತನದ ಸಾಗರಿ ನಾರಾಯಣಾಚಾರ್ಯರ ಮನಸ್ಸನ್ನು ಸೆಳೆಯಿತು.

ಅವರನ್ನು ಶ್ರೀ ಮಧ್ಯಗೇಹಭಟ್ಟರೆಂದೂ ಕರೆಯುತ್ತಿದ್ದರು. 

ಶ್ರೀ ಭಟ್ಟರು ತಮ್ಮ ಗ್ರಾಮವನ್ನು ಬಿಟ್ಟು ಪಾಜಕ ಕ್ಷೇತ್ರ " ದಲ್ಲಿ ನೆಲೆಸಿದರು.

ಶ್ರೀ ಮಧ್ಯಗೇಹಭಟ್ಟರು ಉಡುಪಿಯ ಶ್ರೀ ಅನಂತೇಶ್ವರ…

" ಶ್ರೀ ಮಧ್ವರು -  2 "

" ಗ್ರಂಥಗಳು "

ಏಕಮೇವಾನ್ ದ್ವಿತಿ-

ಯೆಂಬ ಶ್ರುತ್ಯರ್ಥಗಳ ।

ನೇಕ ಭಾಷ್ಯ ಗ್ರಂಥಗಳ ಕಲ್ಪಿಸಿ ।

ಯೇಕವಿಂಶತಿ ಕುಮತ

ಕಾಕುಮಾಯಿಗಳನ । ನಿ ।

ರಾಕರಿಸಿ ಹರಿಯೇ ಜಗಕೀಶನೆನಿಸಿ ।।

ಯೇಕಚಿತ್ತದಿ ತನ್ನ ನಂಬಿದ್ದ 

ಭಕ್ತರ್ಗೆ ಶೋಕಗಳ ನಾಶಗೈಸಿ ।

ಮಾಕಳತ್ರನ ಸದನ-

ನೋಕನಿಯ್ಯನ ತೋರು ।

ಆಖಣಾಶ್ಮ ಸಮ ಚರಣ 

ವ್ಯಾಕುಲವ ಪರಿಹರಿಸು ।।




" ಗೀತಾ ಪ್ರಸ್ಥಾನ ಗ್ರಂಥಗಳು "

ಗೀತಾ ಪ್ರಸ್ಥಾನದ ಮೇಲೆ ಎರಡು ಗ್ರಂಥಗಳನ್ನು ರಚಿಸಿದ್ದಾರೆ.

1. ಗೀತಾಭಾಷ್ಯಮ್ 

2. ಗೀತಾತಾತ್ಪರ್ಯನಿರ್ಣಯಃ

" ಸೂತ್ರ ಪ್ರಸ್ಥಾನ ಗ್ರಂಥಗಳು "

1. ಸೂತ್ರಭಾಷ್ಯಮ್

2. ಅಣುಭಾಷ್ಯಮ್ 

3. ಅನುವ್ಯಾಖ್ಯಾನಮ್

4. ನ್ಯಾಯವಿವರಣಮ್

ಶ್ರೀ ಶಂಕರಾಚಾರ್ಯರೇ ಆಗಲೀ; ಶ್ರೀ ರಾಮಾನುಜಾಚಾರ್ಯರೇ ಆಗಲೀ " ಅಣುಭಾಷ್ಯ " ದಂಥ " ಸಂಗ್ರಹ ಭಾಷ್ಯ " ಬರೆದಿಲ್ಲ.

ಅಣುಭಾಷ್ಯ ಮತ್ತು ಅನುವ್ಯಾಖ್ಯಾನ ಎರಡೂ ಕೃತಿಗಳೂ ಶ್ಲೋಕ ರೂಪದಲ್ಲಿವೆ. 

ಸೂತ್ರಗಳಿಗೆ ಅಲಂಕಾರ ಕೊಟ್ಟು ತತ್ತ್ವ ಸಾಹಿತ್ಯಕ್ಕೆ ಶ್ಲೋಕ ರೂಪವಾಗಿ ಒದಗಿಸಿದ ಅದ್ವಿತೀಯ ಪ್ರತಿಭೆ ಶ್ರೀಮದಾಚಾರ್ಯರದ್ದು.

ಶ್ರೀ ಶಂಕರಾಚಾರ್ಯರು ಸೂತ್ರಕ್ಕೆ ಒಂದೇ ಒಂದು ಭಾಷ್ಯ ರಚಿಸಿದ್ದಾರೆ.

ಶ್ರೀ ರಾಮನಾಜಾಚಾರ್ಯರು ಶ್ರೀಭಾಷ್ಯ -  ವೇದಾಂತದೀಪ ಮತ್ತು ವೇದಾಂತಸಾರ ಎಂಬ ಮೂರು ಕೃತಿಗಳನ್ನು ರಚಸಿದ್ದಾರೆ.

" ಉಪನಿಷತ್ ಪ್ರಸ್ಥಾನ ಗ್ರಂಥಗಳು "

ಉಪನಿಷತ್ ಪ್ರಸ್ಥಾನದಲ್ಲಿ ಪ್ರಧಾನವಾದ " ಹತ್ತು " ( 10 ) ಉಪನಿಷತ್ತುಗಳಿಗೆ ಶ್ರೀಮದಾಚಾರ್ಯರು ಭಾಷ್ಯವನ್ನು ರಚಿಸಿದ್ದಾರೆ. 

ಅದರಲ್ಲೂ ಒಂದು ವಿಶೇಷವುಂಟು. 

ಬಹುಪಾಲು ವಿದ್ವಾಂಸರು ಐತರೇಯೋಪನಿಷತ್ತಿನ 3 ಅಧ್ಯಾಯಗಳಿಗೆ ಮಾತ್ರ ಟೀಕೆ ಬರೆದಿದ್ದರೇ -

ಶ್ರೀಮನ್ಮಧ್ವಾಚಾರ್ಯರು ಐತರೇಯ ಅರಣ್ಯಕದ ಇಡೀ ಉಪನಿಷತ್ಕಾಂಡಕ್ಕೆ ( 9 ಅಧ್ಯಾಯಗಳು ) ಭಾಷ್ಯ ರಚಿಸಿದ್ದಾರೆ.

ಐತರೇಯಭಾಷ್ಯಮ್ - ತೈತ್ತಿರೀಯಭಾಷ್ಯಮ್ - ಬೃಹದಾರಣ್ಯಕಭಾಷ್ಯಮ್ - ಈಶಾವಾಸ್ಯಭಾಷ್ಯಮ್ - ಕಾಠಕೋಪನಿಷದ್ಭಾಷ್ಯಮ್ -

ಛಾಂದೋಗ್ಯಭಾಷ್ಯಮ್ - ಅಥರ್ವಣಭಾಷ್ಯಮ್ - ಮಾಂಡೂಕ್ಯಭಾಷ್ಯಮ್ - ಷಟ್ಪ್ರಶ್ನಭಾಷ್ಯಮ್ - ತಲವಕಾರೋಪನಿಷದ್ಭಾಷ್ಯಮ್ - ಮಾಂಡೂಕೋಪನಿಷತ್ತಿನ ಮಧ್ಯದಲ್ಲಿ ಬರುವ ಶ್ಲೋಕಗಳನ್ನು ಗೌಡಪಾದರ ಕಾರಿಕೆಗಳೆಂದು ತಪ್ಪಾಗಿ ಭ್ರಮಿಸಲಾಗುತ್ತಿದೆ.

ಶ್ರೀ ರಾಮಾನುಜರು ಇವು ಉಪನಿಷತ್ತಿನ ಭಾಗವೇ ಎಂದು ಒಪ್ಪಿಕೊಂಡಿದ್ದಾರೆ.

ಶ್ರೀ ಮಧ್ವರಂತೂ ಈ ಮಂತ್ರಗಳಿಗೆ ಭಾಷ್ಯ ರಚಿಸಿ ಈ ತಪ್ಪು ಕಲ್ಪನೆಯನ್ನು ತಿರಸ್ಕರಿಸಿದ್ದಾರೆ.

ಬ್ರಹ್ಮಾನಂದ ಮುಂತಾದ ಹಿರಿಯ ಅದ್ವೈತ ವಿದ್ವಾಸಂರೂ ಸಹ ಇವು ಉಪನಿಷನ್ಮಂತ್ರಗಳೇ ಎಂದು ಒಪ್ಪಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು.

" ಶ್ರುತಿ ಪ್ರಸ್ಥಾನ ಗ್ರಂಥಗಳು "

ಶ್ರುತಿ ಪ್ರಸ್ಥಾನದಲ್ಲಿ ಋಗ್ವೇದದ 40 ಸೂಕ್ತಗಳಿಗೆ ಅಧ್ಯಾತ್ಮದ ಅರ್ಥ ಬರೆದು ಮಾರ್ಗದರ್ಶನ ಮಾಡಿದ್ದೂ ಅಲ್ಲದೇ, ಐತರೇಯ ಬ್ರಾಹ್ಮಣದ ಕೆಲವು ಖಂಡಗಳಿಗೂ; ಅರಣ್ಯಕದ ಮಹಾನ್ನಾಮ್ನೀಖಂಡಕ್ಕೂ ವ್ಯಾಖ್ಯಾನ ರಚಿಸಿ ಬ್ರಾಹ್ಮಣ - ಅರಣ್ಯಗಳ ಸಮನ್ವಯದ ದಾರಿ ತೋರಿದ್ದಾರೆ.

ಋಗ್ಭಾಷ್ಯಮ್

" ಇತಿಹಾಸ ಗ್ರಂಥಗಳು "

ಇತಿಹಾಸ ಪುರಾಣಗಳ ಸಮನ್ವಯಕ್ಕಾಗಿ ಮಹಾಭಾರತ, ಭಾಗವತಗಳ ಹೃದಯವನ್ನು ತೆರೆದು ತೋರುವ ಮೂಲ ಕೃತಿಗಳು.

ಮಹಾಭಾರತ ತಾತ್ಪರ್ಯ ನಿರ್ಣಯಃ - ಯಮಕ ಭಾರತಮ್ - ಭಾಗವತತಾತ್ಪರ್ಯ ನಿರ್ಣಯಃ

" ಪ್ರಕರಣ ಗ್ರಂಥಗಳು "

ಪ್ರಮಾಣ ಪ್ರಮೇಯಗಳ ನಿಷ್ಕರ್ಷೆಗಾಗಿ ಪ್ರಕರಣ ಗ್ರಂಥಗಳು.

ಪ್ರಮಾಣಲಕ್ಷಣಮ್ - ಕಥಾಲಕ್ಷಣಮ್ - ಮಾಯಾವಾದಖಂಡನಮ್ - ಉಪಾಧಿಖಂಡನಮ್ - ಪ್ರಪಂಚಮಿಥ್ಯಾತ್ವಾನುಮಾನಖಂಡನಮ್ - ತತ್ತ್ವ ಸಂಖ್ಯಾನಮ್ - ತತ್ತ್ವ ವಿವೇಕಃ - ತತ್ತ್ವೋದ್ಯೋತಃ - ಕರ್ಮನಿರ್ಣಯಃ -  ವಿಷ್ಣುತತ್ತ್ವನಿರ್ಣಯಃ

" ಆಚಾರ ಗ್ರಂಥಗಳು "

ಧರ್ಮಶಾಸ್ತ್ರದ ವ್ರತ - ಅನುಷ್ಠಾನಗಳ; ವಾಸ್ತುಶಿಲ್ಪ; ಮಂತ್ರ - ತಂತ್ರಗಳ; ಗೃಹಸ್ಥ ಮತ್ತು ಸಂನ್ಯಾಸಿಗಳ ಆಚಾರ, ಧರ್ಮಗಳ ಬಗ್ಗೆ ಮಾರ್ಗದರ್ಶನ ಮಾಡುವ ಗ್ರಂಥಗಳು.


ತಂತ್ರಸಾರಸಂಗ್ರಹಃ - ಸದಾಚಾರಸ್ಮೃತಿಃ - ಜಯಂತೀನಿರ್ಣಯಃ - ಕೃಷ್ಣಾಮೃತಮಹಾರ್ಣವಃ - ಯತಿಪ್ರಣವಕಲ್ಪಃ - ಸಂನ್ಯಾಸಪದ್ಧತಿ - ತಿಥಿನಿರ್ಣಯಃ

" ಸ್ತೋತ್ರ ಗ್ರಂಥಗಳು "

ನಖಸ್ತುತಿಃ - ದ್ವಾದಶಸ್ತೋತ್ರಮ್ - ಕಂದುಕಸ್ತುತಿಃ

" ಶ್ರೀಮದಾಚಾರ್ಯರ ಭಾಷ್ಯವೇ ಪರಮ ಶ್ರೇಷ್ಠ ಭಾಷ್ಯ "

ಇಪ್ಪತ್ತೊಂದು ಕುಭಾಷ್ಯ 

ತಪ್ಪಾನೆ ಸೋಲಿಸಿದ ।

ಸರ್ಪಶಯನನ 

ವೊಲಿಸಿದಾ ಕೋಲೆ ।

ಸರ್ಪಶಯನನ ವೊಲಿಸಿದ 

ಗುರುಗಳ ।

ಟಪ್ಪನೆ ನೆನೆವೇನ-

ನುದಿನ ಕೋಲೆ ।।

21 ಕುಭಾಷ್ಯಗಳ ವಿವರ...

1. ಭಾರತೀವಿಜಯ, 2. ಸಚ್ಚಿದಾನಂದ, 3. ಬ್ರಹ್ಮಘೋಷ, 4. ಶತಾನಂದ, 5. ಉಧ್ವರ್ತ, 6. ವಿಜಯ, 7. ರುದ್ರಭಟ್ಟ, 8. ವಾಮನಿ, 9. ಯಾದವಪ್ರಕಾಶ, 10. ರಾಮಾನುಜ, 11. ಭರ್ತೃ 12. ಪ್ರಪಂಚ, 13. ದ್ರಾವಿಡ, 14. ಬ್ರಹ್ಮದತ್ತಿ, 15. ಭಾಸ್ಕರ, 16. ಪಿಶಾಚ, 17. ವೃತ್ತಕಾರ, 18. ವಿಜಯಭಟ್ಟ, 19. ವಿಷ್ಣುಕ್ರಾಂತ, 20. ವಾದೀಂದ್ರ, ಮಾಧವದಾಸ, 21. ಶಂಕರಭಾಷ್ಯ.

ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮತ್ತು ಉತ್ತರ ಮೀಮಾಂಸಾ.

ಶ್ರೀಮದ್ವೇದವ್ಯಾಸದೇವರು ಉತ್ತರ ಮೀಮಾಂಸಾ ಪ್ರವರ್ತಕರು.

ಬ್ರಹ್ಮ ಸೂತ್ರಗಳಿಗೆ ಮೇಲೆ ತಿಳಿಸಿದಂತೆ 21 ಜನ ಆಚಾರ್ಯರುಗಳು ಭಾಷ್ಯವನ್ನು ಬರೆದರು. 

ಇವರೆಲ್ಲರ ಭಾಷ್ಯಗಳನ್ನೂ ಖಂಡಿಸಿ ಶ್ರೀಮದಾಚಾರ್ಯರು 22ನೇ ಭಾಷ್ಯವನ್ನು ರಚಿಸಿ...

" ಬ್ರಹ್ಮ ಸತ್ಯಂ ಜಗನ್ಮಿಥ್ಯಾ 

ಜೀವೋ ಬ್ರಹ್ಮೈವ ನಾಪರಃ "

ಎಂಬ ಮಾಯಾವಾದವನ್ನು ಶ್ರೀಮದಾನಂದತೀರ್ಥರು ಖಂಡಿಸಿದರು.

ಗುರುವಮಧ್ವರಾಯರೇ 

ಹರಿದಾಸ್ಯವಿತ್ತು ।

ದ್ಧರಿಸುವರು ಸರ್ವಜ್ನರೂ ।

ಹರಿಪುರವಕಾಂಬದಕೆ 

ಪ್ರಥಮಾಂಗರೆಂದೆಮ್ಮ ।

ಹಿರಿಯರೆಲ್ಲ ಪೇಳ್ವರೂ ।।

ಅರಿ ಶಂಖ ಗದ ಪದ್ಮಧರ 

ಶೇಷಶಾಯಿ । ಶ್ರೀ ।

ಸಿರಿಪತಿಯ ಚರಣ ತೋರೋ ।

ಪರಮ ಕರುಣಾನಿಧಿ 

ವರ ವೃಕೋದರ ಅಸ್ಮದ್ ।

ಗುರುಗಳಂತರ್ಯಾಮಿ 

ನರಹರಿ ಪೊಂಡಿಸು ।। 1 ।।

ಮೇದಿನಿಯ ಮ್ಯಾಲುಳ್ಳ 

ಪಾಜಕ ಕ್ಷೇತ್ರದಲಿ ।

ಮೋದತೀರ್ಥರಾಗಿ 

ಅವತರಿಸಿದೆ ।

ಬಾದರಾಯಣ ಪ್ರಸಾದ-

ದಿಂದಲಿ ಚತುರ ।

ವೇದಗಳ ವಡನುಡಿಸಿದೆ ।।

ಆದಿಕಾರಣ ಕರ್ತ 

ನಾರಾಯಣೆಂದರುಹಿ ।

ದ್ವಾದಶ ಸ್ತೋತ್ರದಿಂದಲಿ 

ಸ್ತುತಿಸಿದೆ ।

ವೇದಗರ್ಭನ 

ಜನಕ ವೆಂಕಟವಿಠ್ಠಲನ ।

ಪಾದ ಮೂಲದಲಿಪ್ಪ 

ಪವನರಾಯರೇ ದಯದಿ ।। 2 ।।

ಮಾಘ ಶುದ್ಧ ನವಮೀ ಅದೃಶ್ಯರಾಗಿ ದೊಡ್ಡ ಬದರಿಗೆ ತೆರಳಿದರು.

( ಶ್ರೀ ವೇದವಾಸ್ಯದೇವರ ವಾಸ ಸ್ಥಾನವಾದ ಬರದಿಕಾಶ್ರಮಕ್ಕೆ )

" ಅದೃಶ್ಯತೋ ರೌಪ್ಯ ಪೀಠೇಸ್ತಿ 

ದೃಶ್ಯೋಸ್ತಿ ಬದರೀ ತಟೇ "

ಬ್ರಹ್ಮಾಂತಾ ಗುರವಃ 

ಸಾಕ್ಷಾದಿಷ್ಟಂ ದೈವಂ ಶ್ರಿಯಃ ಪತಿಃ ।

ಆಚಾರ್ಯಃ ಶ್ರೀಮದಾಚಾರ್ಯಾ-

ಸ್ಸಂತು ಮೇ ಜನ್ಮಜನ್ಮನೀ ।।

ನಮಸ್ತೇ ಪ್ರಾಣೇಶ ಪ್ರಣತ 

ವಿಭವಾಯಾವನಿಮಗಾ ।

ನಮಸ್ವಾಮೀನ್ ರಾಮ 

ಪ್ರಿಯತಮ ಹನುಮಾನ್ 

ಗುರುಗುಣ ।।

ನಮಸ್ತುಭ್ಯ೦ ಭೀಮ 

ಪ್ರಬಲತಮ ಕೃಷ್ಣೇಷ್ಟ ಭಗವನ್ ।

ನಮ ಶ್ರೀ ಮನ್ಮಧ್ವ ಪ್ರದಿಶ 

ಸದೃಶ೦ ಜಯ ಜಯ ।।

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)