ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ಜರುಗಿದ ನಾಟ್ಯೇಶ್ವರ ನೃತ್ಯ ಶಾಲೆಯ ಹದಿನೇಳನೇ ವಾರ್ಷಿಕೋತ್ಸವ

varthajala
0

ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ.ಸತೀಶಬಾಬು ಹಾಗೂ ಶ್ರೀಮತಿ ವಾಣಿ ಸತೀಶಬಾಬು ಆಯೋಜಿಸಿದ್ದ "ನಾಟ್ಯೇಶ್ವರ ನೃತ್ಯ ಶಾಲೆಯ 17ನೇ ವಾರ್ಷಿಕೋತ್ಸವ--2025" ಜ.19ರಂದು ವಯ್ಯಾಲಿಕಾವಲಿನಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ  ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 


ಇದರಲ್ಲಿ ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ.ಸತೀಶ್ ಬಾಬು ಅವರೊಟ್ಟಿಗೆ ನೃತ್ಯ ಶಾಲೆಯ ಕಿರಿಯ ಹಾಗೂ ಹಿರಿಯ ಶಿಷ್ಯ ವೃಂದ ಹಾಗೂ ಇತರ ಮೂರು ನೃತ್ಯ ಶಾಲೆಗಳಾದ  ಮಂದಿರ ನೃತ್ಯ ಶಾಲೆ, ಸೂರ್ಯೋದಯ ನೃತ್ಯ ಶಾಲೆ ಮತ್ತು ಭುವನೇಶ್ವರಿ ನೃತ್ಯಾಲಯದ  ತಂಡದವರಿಂದ ಅಮೋಘವಾದ ನೃತ್ಯ ಪ್ರಸ್ತುತಿ  ಜರುಗಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಶೆಟ್ಟಿ, (ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು) ಹಾಗೂ ಶ್ರೀಮತಿ ಸೌಮ್ಯ ಶ್ರೀಕಾಂತ್ (ರೋಟೇರಿಯನ್ ಇಂದಿರಾನಗರ) ಆಗಮಿಸಿದ್ದರು.

Post a Comment

0Comments

Post a Comment (0)