ಯುವಕರ ಬಳಗದಿಂದ ಮಹಿಳೆಯರಿಗೆ ರಂಗೊಲಿ ಸ್ಪರ್ಧೆ

varthajala
0

ಶಿಡ್ಲಘಟ್ಟ : ತಾಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿಯ ಕೆ ಗೊಲ್ಲಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರು ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು. ರಂಗೋಲಿ ಸ್ಪರ್ಧೆಯು ಗ್ರಾಮದ ಪ್ರತಿಯೊಂದು ಮನೆಯಲ್ಲೂ ಮಹಿಳೆಯರು ಒಬ್ಬರಿಗಿಂತ ಒಬ್ಬರು ರಂಗೋಲಿಗಳನ್ನು ಆಕರ್ಷಣೀಯವಾಗಿ ಬಿಡಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಬಹುಮಾನವನ್ನು ಸಹ ವಿತರಿಸಿದರು. ವೆಂಕಟರತ್ನಮ್ಮ ಪ್ರಥಮ ಬಹುಮಾನವಾಗಿ ಕುಕ್ಕರ್, ರೇಣುಕ ದ್ವೀತಿಯ ಬಹುಮಾನವಾಗಿ ಹಾರ್ಟ್ ಬಾಕ್ಸ್,ಗಂಗಮ್ಮ ತೃತೀಯ ನೀರಿನ ಬಾಟಲ್ ಗಳನ್ನು ಪಡೆದರು. ಬಹುಮಾನಗಳನ್ನು ಊರಿನ ಯುವಕರ ಬಳಗದ ವತಿಯಿಂದ  ವಿತರಿಸಿದರು

ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ಶಿಕ್ಷಕಿ ದೇವಿಕ ಪಾಲ್ಗೊಂಡಿದ್ದರು.

ಯುವಕರ ಬಳಗದ ಮುಖಂಡ ಆನಂದ್ ಮಾತನಾಡಿ,ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಸ್ಪರ್ಧೆಗಳು ಗ್ರಾಮೀಣ ಭಾಗದಲ್ಲಿ ಅತ್ಯವಶ್ಯಕವಾಗಿದೆ. ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಕಲಿಕೆಯಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ತಮ್ಮ ಮನೆಯ ಮುಂಭಾಗದಲ್ಲಿ ಪ್ರತಿದಿನ ರಂಗೋಲಿ ಬಿಡಿಸುವುದು ಯಾಕೆ ಎಂದು ಬಣ್ಣದಲ್ಲಿ ಒಮ್ಮೆ ಮಾತ್ರ ಬಿಡಿಸಿ ಸುಮ್ಮನಾಗುತ್ತಾರೆ ಆದರೆ ಇಂದಿನ ಪೀಳಿಗೆಗೆ ಇಂತಹ ರಂಗೋಲಿ ಸ್ಪರ್ಧೆಗಳು ಸಹಕಾರಿಯಾಗಬೇಕು ಎಂದರು. 

ನಮ್ಮ ಊರಿನಲ್ಲಿ ಇಂತಹ ಕಾರ್ಯಕ್ರಮಗಳು ಯುವಕರು ಹಮ್ಮಿಕೊಂಡಿದ್ದು ಮಹಿಳೆಯರ ಆಗಿರುವ ರಂಗೋಲಿಗಳಿಗೆ ಬಹುಮಾನ ವಿತರಿಸಿ ಇದೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ನಮ್ಮ ಊರಿನಲ್ಲಿ ಹಮ್ಮಿಕೊಂಡಿದ್ದಾರೆ. ಇಂತಹ ಹಲವು ಕಾರ್ಯಕ್ರಮಗಳು ನಮ್ಮ ಊರಿನಲ್ಲಿ ನಡೆಯಲಿ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆ ಗೊಲ್ಲಹಳ್ಳಿ ಯುವಕರ ಬಳಗದ ಮುಖಂಡರಾದ ಅಶೋಕ್ ಜೆ.ಎ,ಮನೋಹರ್,ಪ್ರವೀಣ್,ಮಂಜುನಾಥ್, ಕಾರ್ತಿಕ್,ಸಂದೀಪ್ ಹಾಗೂ ಗ್ರಾಮದ ಯುವಕರು, ಮಹಿಳೆಯರು ಮತ್ತಿತರರು ಪಾಲ್ಗೊಂಡಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

Post a Comment

0Comments

Post a Comment (0)