38 ನೇ ರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ವೈಲ್ಡ್ ಕಾರ್ಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಜ, 17; ಟೇಕ್ವಾಂಡೋ ಫೆಡರೇಶನ್ ಆಫ್ ಇಂಡಿಯಾದಿಂದ ಬೆಂಗಳೂರಿನ ಬಸವೇಶ್ವರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಮತ್ತು ಉತ್ತರಾಖಂಡದ ಹಲ್ದ್ವಾನಿಯಲ್ಲಿ ಫೆಬ್ರವರಿ 4 ರಿಂದ 8 ರವರೆಗೆ ನಡೆಯಲಿರುವ 38 ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ವೈಲ್ಡ್ ಕಾರ್ಡ್ ಪ್ರವೇಶಕ್ಕಾಗಿ ಮುಕ್ತ ಆಯ್ಕೆ ಪ್ರಕ್ರಿಯೆ ಜನವರಿ 20 ಮತ್ತು 21 ರಂದು ಉತ್ತರ ಪ್ರದೇಶದ ಲಖನೌನದಲ್ಲಿ ನಡೆಯಲಿದೆ ಎಂದು ಟೇಕ್ವಾಂಡೋ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.
ಲಖನೌದ ಸಿಗ್ ಬಾಬು ಕ್ರೀಡಾಂಗಣದ ಟೇಕಾಂಡೋ ಟ್ರೈನಿಂಗ್ ಹಾಲ್ ನಲ್ಲಿ ಓಪನ್ ಸೆಲೆಕ್ಷನ್ ಟ್ರಯಲ್ಸ್ ನಡೆಯಲಿದೆ. ಅರ್ಹತೆ ಹೊಂದಿರುವ ಟೇಕ್ವಾಂಡೋ ಅಥ್ಲೀಟ್‌ಗಳು ವೈಲ್ಡ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
17 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಕುಕ್ಕಿವಾನ್ 1 ನೇ ಡಾನ್ ಮತ್ತು ಮೇಲಿನ ಕಪ್ಪು ಪಟ್ಟಿ ಪ್ರಮಾಣಪತ್ರ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅಸ್ಸಾಂ ರೈಫಲ್ಸ್, ಸಿಐಎಸ್ಫ್, ಸಿಆರ್ ಪಿಎಫ್, ಐಟಿಬಿಪಿ, ಬಿಎಸ್ಎಫ್ ನಂತಹ ಪ್ಯಾರಾ ಮಿಲಿಟರಿ ಪಡೆಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳು, ಅವರು 40 ನೇ ರಾಷ್ಟ್ರೀಯ ಹಿರಿಯ ಕ್ಯೋರುಗಿ ಮತ್ತು 13 ನೇ ರಾಷ್ಟ್ರೀಯ ಸೀನಿಯರ್ ಪೂಮ್ಸೇ ಟೇಕ್ವಾಂಡೋ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದವರು.
ಅರ್ಜಿ ಸಲ್ಲಿಸಲು https://forms.gle/Udzm7KBqyQV1kfhF7 ಜನವರಿ 18 ಕೊನೆಯ ದಿನವಾಗಿದೆ.