ಬೆಂಗಳೂರು : ಬೆಂಗಳೂರು ಮಹಾನಗರದ ಅರಮನೆ ಮೈದಾನದಲ್ಲಿ ಇದೇ ಜನವರಿ 18 ಮತ್ತು 19ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಾ ಸಮ್ಮೇಳನಕ್ಕೆ ಕ್ಷಣ ಗಣನೆ ಆರಂಭಗೊAಡಿದೆ. ಮೇಖ್ರಿ ವೃತ್ತದ ತ್ರಿಪುರ ವಾಸಿನಿಯಲ್ಲಿ ಜರುಗಲಿರುವ ಈ ಮಹಾ ಸಮ್ಮೇಳನಕ್ಕೆ ರಾಜ್ಯಾದ್ಯಂತ ವಿಪ್ರ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆಗಳೂ ನಡೆದಿವೆ.
ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಜರುಗುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎರಡು ದಿನಗಳ ಕಾಲ ನಡೆಯುವ ಮಹಾಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿರವರು, ಸಮಾವೇಶ ಸಮಿತಿಯ ಉಪಾಧ್ಯಕ್ಷರಾದ ಎಸ್.ರಘುನಾಥ್ ರವರು ಬ್ರಾಹ್ಮಣ ಸಮುದಾಯ ಮುಖಂಡರಾದ ಎಸ್.ರಘುನಾಥ್ ರವರು, ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಮತ್ತು ಕೆಪಿಸಿಸಿ ಸಂಯೋಜಕರಾದ ಸುದರ್ಶನ್, ಬ್ರಾಹ್ಮಣ ಸಮುದಾಯದ ಮುಖಂಡರಾದ ರಾಮ್ ಪ್ರಸಾದ್, ಜೆ.ಹೆಚ್.ಆನಿಲ್ ಕುಮಾರ್, ಹರಿಪ್ರಸಾದ್ ರವರು ಭಾಗವಹಿಸಿದ ಸಂದರ್ಭ.
ಬ್ರಾಹ್ಮಣ ಸಮ್ಮೇಳನ ಹಿಂದಿನ ದಿನದಂದ ಗುರುಪ್ರಾರ್ಥನೆ, ಗಣಪತಿಪೂಜೆ, ಮಹಾಸಂಕಲ್ಪ, ಪುಣ್ಯಹವಾಚನ, ಗಾಯಿತ್ರಿಮಹಾಯಾಗ, ಕಲಶಸ್ಥಾಪನೆ, ಗಾಯಿತ್ರಿ ಜಪ ಮಾಡಿ ಪ್ರಾರಂಭಿಸಲಾಯಿತು.