ಜ್ಞಾನರ್ಜನನಿಧಿ ಆರಂಬಿಸಲು ಎ ಕೆ ಬಿ ಎಂ ಎಸ್ ಗೆ ಶ್ರೀಸುಜಯ ನಿಧಿ ತೀರ್ಥರಿಂದ ಕೊಡುಗೆ

varthajala
0

ಬೆಂಗಳೂರು : ನಮ್ಮ ಸನಾತನ ಪರಂಪರೆಯನ್ನು ಉಳಿಸಿ ಬೆಳಸಲು ಮಹಾಸಭಾವು ಜ್ಞಾನರ್ಜನೆಯನ್ನು ಮಾಡಲು ಗುರುಕುಲ ಮಾಡುವಂತೆ ತಮ್ಮ ಶ್ರೀಪಾದರಾಜ ಮಠದ ವತಿಯಿಂದ ಒಂದುಲಕ್ಷ ವನ್ನು ಅಧ್ಯಕ್ಷ ಹಾರನಹಳ್ಳಿ ಅಶೋಕ್ ಅವರಿಗೆ ನೀಡಿದರು,





ಅವರು ಮಹಾಸಭಾವು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವಾಮಿತ್ರ ಸುವರ್ಣ ಸಂಭ್ರಮ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿ ಅನುಗ್ರಹ ಭಾಷಣ ಮಾಡಿ, ಇಂದು ಹೊರ ಪ್ರಪಂಚದಲ್ಲಿ ಬ್ರಾಹ್ಮಣರನ್ನು ಎಲ್ಲದಕ್ಕೂ ಕಾರಣವಾಗಿಸಿ ಅವರನ್ನು ಅವಹೇಳನಕಾರಿಯಾಗಿ ನಡೆಸಿಕೊಳ್ಳುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ, ಆದರೆ ವಾಸ್ತವ ಬೇರೆಯೇ ಇದೇ ಯಾವುದೇ ಬ್ರಾಹ್ಮಣರಿಂದ ಸಮಾಜಕ್ಕೆ ಕೆಡುಕು ಉಂಟಾಗುವ ಕಾರ್ಯ ನೆಡೆದಿಲ್ಲ ಎಂದ ಸುಜಯನಿಧಿ ತೀರ್ಥರು ಅದೇ ನಾವು ಮಾಡುವ ಪೂಜೆ ಪುನಸ್ಕಾರ, ಹೋಮ ಹವನಾದಿಗಳನ್ನು ಮಾಡಿ ಭಗವಂತನಲ್ಲಿ ನನ್ನ ಒಬ್ಬನನ್ನು ಉದ್ದರಿಸು ಒಳ್ಳೆಯದು ಮಾಡು ಎಂದು ಬೇಡುವುದಿಲ್ಲ, ಎಲ್ಲರನ್ನು ಉದ್ದರಿಸು ಎಲ್ಲರಿಗೂ  ಒಳ್ಳೆಯದು ಮಾಡು ಎಂದು ಲೋಕಸಮಸ್ತ ಸುಖಿನೋಭವಂತು ಎಂದು ಕೇಳುತ್ತೇವೆ ಎಂದರು.


ಮಹಾಸಭಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯವಾದದು, ನಮ್ಮ ಸಮುದಾಯದ ಹಿತಕ್ಕಾಗಿ ಕಾರ್ಯ ನಿರ್ವಹಿಸಿ ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳಸುವ ಕಾರ್ಯದ ಜತೆಗೆ ತ್ರಿಮತಸ್ತಾರನ್ನು ಒಟ್ಟುಗೂಡಿಸಿ ಕಾರ್ಯ ನಿರ್ವಹಿಸಿ ಎಂದರು.



ಈ ಸಂದರ್ಭದಲ್ಲಿ ಸೋಸಲೆ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ,ಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಹಿರಿಯ ಪತ್ರಕರ್ತ ಎನ್ ಎಸ್ ಸುಧೀಂದ್ರ ರಾವ್, ರಾಘವೇಂದ್ರ ಮೈಯ ಸೇರಿದಂತೆ ಸಮಾಜದ ಮುಖಂಡರು ಇದ್ದರು.

Post a Comment

0Comments

Post a Comment (0)