ಯೂತ್ಸ್ ಆಫ್ ಮಲ್ಲೇಶ್ವರ ಮತ್ತು ಶ್ರೀ ಕಾಡುಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಜನವರಿ 31ರಂದು ಬೆಳಗ್ಗೆ 9ರಿಂದ ಸಂಜೆ 4ಗಂಟೆವರಗೆ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ||ಪುನೀತ್ ರಾಜ್ ಕುಮಾರ್ ಸವಿಸ್ಮರಣೆಯಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಅಪ್ಪು ಕ್ರೀಡೋತ್ಸವ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಇದರ ಕುರಿತು ಮಾಧ್ಯಮಗೋಷ್ಟಿ.
ಯೂತ್ಸ್ ಆಫ್ ಮಲ್ಲೇಶ್ವರ ಸಂಸ್ಥೆಯ ಸಂಸ್ಥಾಪಕರಾದ ಬಿ.ಟಿ.ಚಂದ್ರಮೌಳಿ, ಅಧ್ಯಕ್ಷರಾದ ಎಂ.ಹೇಮಂತ್ ಗೌಡರವರು, ಸಮಾಜ ಸೇವಕರಾದ ಶ್ರೀವಲ್ಲಭ, ರಾಜಶಶಿಧರ್, ಮನುಪ್ರಕೃತ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
*ಸಂಸ್ಥಾಪಕರಾದ ಚಂದ್ರಮೌಳಿರವರು* ಮಾತನಾಡಿ ಪ್ರತಿಯೊಂದು ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯ ಜೀವಿಸುವ ಬಾಳಿ, ಬದುಕುವ ಹಕ್ಕು ಇದೆ. ಕೆಲವೊಂದು ಕಾರಣಗಳಿಂದ ಮಕ್ಕಳಿಗೆ ವಿಶೇಷ ಚೇತನ ಮಕ್ಕಳಾಗಿ ಹುಟ್ಟಿರುತ್ತಾರೆ. ಭೂಮಿಗೆ ಬಂದ ಅಮೂಲ್ಯ ರತ್ನಗಳಾದ ಅ ಮಕ್ಕಳಿಗೆ ಸ್ವಲ್ಪ ಸಮಾಜದಿಂದ ವಾತ್ಯಲ್ಯ, ಸಹಕಾರ ದೊರೆತರೆ ಅವರ ಸಹ ಸಮಾಜದಲ್ಲಿ ನಮ್ಮಂತೆ ಜೀವನ ಸಾಗಿಸಲು ಸಾಧ್ಯ ಅದ್ದರಿಂದ ವಿಶೇಷ ಚೇತನ ಮಕ್ಕಳಿಗೆ ಅಪ್ಪು ಸ್ಮರಣೆಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ನಿಮ್ಮ ಜೊತೆಯಲ್ಲಿ ನಾವಿದ್ದೇವೆ ನಿಮ್ಮ ಬದುಕು ಹೊಸದಿಕ್ಕಿನತ್ತ ಸಾಗಲಿ ಎಂಬ ಆಶಯ ನಮ್ಮದು.
ದಿವ್ಯ ಸಾನಿಧ್ಯವನ್ನು ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಶ್ರೀ ಯದುಗರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿರವರು , ಉದ್ಘಾಟನೆಯನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಶಾಸಕರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್ ರವರು, ಕಾಡುಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಮಲ್ಲೇಶ್ವರಂ ವಿಧಾನಸಭಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನೂಪ್ ಅಯ್ಯಂಗಾರ್ ರವರು ನೇರವೆರಿಸುವರು. ಮುಖ್ಯ ಅತಿಥಿಗಳಾಗಿ ,ನಿವೃತ್ತ ಕುಲಪತಿಗಳಾದ ಡಾ.ಎಸ್.ಕುಮಾರ್, ಡಾ.ಪ್ರಕಾಶ್ ಮತ್ತು ಚಲನಚಿತ್ರ ನಿರ್ಮಾಪಕ ಸುರೇಶ್ ಗೌಡರು, ದವನಂ ಜ್ಯುವೆಲರಿ ಮಾಲೀಕರಾದ ಅರವಿಂದ್ ಡಿ.ವಿ. ಮತ್ತು ಅಂತರಾಷ್ಟ್ರೀಯ ಪ್ಯಾರ ಓಲಂಪಿಕ್ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತ ಕೆ.ವೈ.ವೆಂಕಟೇಶ್, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪರವರು ಭಾಗವಹಿಸಲಿದ್ದಾರೆ.
ಸಮಾಜ ಸೇವಕರಾದ ಶ್ರೀವಲ್ಲಭ ರವರು ಮಾತನಾಡಿ, ಮಕ್ಕಳು ದೇವರ ಸಮಾನ ಅವರಿಗೆ ಎಲ್ಲ ಸೌಲಭ್ಯ, ಅವಕಾಶ ಸಿಗಬೇಕು, ವಿಶೇಷ ಚೇತನ ಮಕ್ಕಳು ಸಹ ಅವರ ಪ್ರತಿಭೆಯನ್ನು ಹೊರತರಲು, ಪ್ರೋತ್ಸಾಹಿಸಲು ದೇವರ ಕೃಪೆ ಇರಲಿ ಎಂದು ಕ್ರೀಡೋತ್ಸವ ಅಚರಿಸಲಾಗಿದೆ.
ಅಧ್ಯಕ್ಷರಾದ ಹೇಮಂತ್ ಗೌಡ* ರವರು ಮಾತನಾಡಿ ಬೆಂಗಳೂರಿನ 18ವಿಶೇಷ ಚೇತನ ಶಾಲೆಯ 500ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಚೇತನ ಮಕ್ಕಳಿಗೆ ರನ್ನಿಂಗ್ ರೇಸ್, ಶಾರ್ಟ್ ಪುಟ್, ಮೂಸಿಕಲ್ ಚೇರ್ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಸಂಜೆ ಪಾರಿತೋಷಕ ಹಾಗೂ ಚಾಂಪಿಯನ್ ಟ್ರೋಫಿ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಕ್ಕಳ ಸುರಕ್ಷತೆ, ಆರೋಗ್ಯ ರಕ್ಷಣೆ ತಜ್ಞ ವೈದ್ಯರುಗಳು ತಂಡ, ಅಂಬುಲೆನ್ಸ್ ನಿಯೋಜನೆ ಮಾಡಲಾಗಿದೆ . ಸಾರ್ವಜನಿಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ವಿನಂತಿ ಎಂದು ಹೇಳಿದರು.