ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮಧ್ಜನವಮಿ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 6ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಹೆಸರಾಂತ ವಿದ್ವಾಂಸರುಗಳಿಂದ ಮಧ್ವ ಪ್ರವಚನ ಮಾಲಿಕೆಯನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ.
ಜನವರಿ 30-ಶ್ರೀ ಕಲ್ಲಾಪುರ ಪವಮಾನಾಚಾರ್. ವಿಷಯ : "ಮಧ್ವಾಚಾರ್ಯರ ಸಂದೇಶಗಳು", ಜನವರಿ 31-ಶ್ರೀ ಖೇಡಾ ಪ್ರಮೋದಾಚಾರ್. ವಿಷಯ : "ಸದಾಚಾರ ಸ್ಮೃತಿ", ಫೆಬ್ರವರಿ 1-ಶ್ರೀ ಅಂಬರೀಶಾಚಾರ್. ವಿಷಯ : "ಹನುಮ-ಭೀಮ-ಮಧ್ವ", ಫೆಬ್ರವರಿ 2-ಶ್ರೀ ಜಗನ್ನಾಥಾಚಾರ್. ವಿಷಯ : "ಜಗದ್ಗುರು ಮಧ್ವರು", ಫೆಬ್ರವರಿ 3-ಶ್ರೀ ಕಲ್ಯಾ ಶ್ರೀಕಾಂತಾಚಾರ್. ವಿಷಯ : "ಹರಿವಾಯುಸ್ತುತಿ", ಫೆಬ್ರವರಿ 4-ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ. ವಿಷಯ : "ಪಾಜಕ ಕ್ಷೇತ್ರ", ಫೆಬ್ರವರಿ 5-ಶ್ರೀ ಚಿಮ್ಮಲಗಿ ಆಚಾರ್. ವಿಷಯ : "ದ್ವಾದಶ ಸ್ತೋತ್ರ" ಫೆಬ್ರವರಿ 6-ಶ್ರೀ ರಾಮವಿಠಲಾಚಾರ್. ವಿಷಯ : "ಸುಮಧ್ವ ವಿಜಯ".