ದೇವಸ್ಥಾನ ಸಂಸ್ಕೃತಿ ರಕ್ಷಣೆಯ ಧ್ಯೇಯದೊಂದಿಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಜಯಕಾರವು ಮೊಳಗಿತು !
ಬೆಂಗಳೂರು : ಪ್ರಸ್ತುತ ಕಾಲದಲ್ಲಿ ಧಾರ್ಮಿಕ ಅಲೆಯಿಂದಾಗಿ ಜೈ ಶ್ರೀ ರಾಮ ಎಂದರೆ ಪ್ರತೀ ಹಿಂದೂವಿನ ಮನ ಮನದಲ್ಲಿಯೂ ಘೋಷಣೆ ಮೊಳಗುತ್ತಿದೆ. ಪ್ರತಿಯೊಂದು ದೇವಸ್ಥಾನವು ಧರ್ಮಶ್ರಧ್ಧೆಯನ್ನು ಮೂಡಿಸುವ ಕಾರ್ಯವನ್ನು ಮಾಡಬೇಕು. ದೇವಸ್ಥಾನವು ಧರ್ಮಶಿಕ್ಷಣ ನೀಡುವ ಕೇಂದ್ರವಾಗಬೇಕು, ದಾನವನ್ನು ಮಾಡಬೇಕು, ಸೇವಾಕೇಂದ್ರಗಳಾಗಬೇಕು. ತರುಣ ಸಂಘದಿಂದ ಸಮಾಜ ಕಲ್ಯಾಣದ ಕಾರ್ಯವನ್ನು ಮಾಡಿಸುವುದು ದೇವಸ್ಥಾನದ ಕರ್ತವ್ಯವಾಗಿದೆ. ತರುಣರಲ್ಲಿ ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗವನ್ನು ಕಲಿಸಿ ಅವರನ್ನು ಧಾರ್ಮಿಕವಾಗಿ ಸಧೃಡರನ್ನಾಗಿಸಬೇಕು ಎಂದು ದೇವಸ್ಥಾನ ವಿಶ್ವಸ್ಥರಿಗೆ ಶ್ರೀ. ಚಕ್ರವರ್ತಿ ಸುಲಿಬೆಲೆ ಧ್ಯೇಯವನ್ನು ನೀಡಿದರು.
ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ' ವು ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಹಾಲ್, ಬಸವೇಶ್ವರ ನಗರ, ಬೆಂಗಳೂರಿನಲ್ಲಿ ಉತ್ಸಾಹದಿಂದ ಮೊದಲನೆಯ ದಿನ ಸಂಪನ್ನವಾಯಿತು.
*ಧರ್ಮಶಿಕ್ಷಣವನ್ನು ನೀಡುವುದು ದೇವಸ್ಥಾನದ ಕರ್ತವ್ಯವಾಗಿದೆ ! - ಪೂಜ್ಯ. ರಮಾನಂದ ಗೌಡ, ಧರ್ಮಪ್ರಸಾರಕರು , ಸನಾತನ ಸಂಸ್ಥೆ*
ಪ್ರಾಚೀನ ಕಾಲದಿಂದ ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ವಿಶ್ವವಿದ್ಯಾಲಯವಾಗಿ, ನ್ಯಾಯ ನೀಡುವ ನ್ಯಾಯಾಲಯಗಳಾಗಿ, ರೋಗಗಳನ್ನು ಗುಣ ಪಡಿಸುವ ಆಸ್ಪತ್ರೆಗಳಾಗಿ, ಕಲೆ ಶಿಲ್ಪಕಲೆ, ನೃತ್ಯ, ಸಂಗೀತ ಮತ್ತು ಮೂರ್ತಿಕಲೆಗಳನ್ನು ಜೋಪಾಸನೆ ಮಾಡುವ ಕಾರ್ಯವನ್ನು ಮಾಡಿದೆ. 1835 ಇಂಗ್ಲಿಷ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದು ಗುರುಕುಲ ಶಿಕ್ಷಣವನ್ನು ನಿಲ್ಲಿಸಿದರು. ಅದರ ಪರಿಣಾಮ ಕಳೆದ ೪ ಪೀಳಿಗೆಯು ಧರ್ಮ ಶಿಕ್ಷಣದಿಂದ ವಂಚಿತವಾಯಿತು. ಇದರಿಂದ ಇಂದು ಮತಾಂತರ, ದೇವತೆಗಳ ಅಪಮಾನ, ಹಿಂದೂಗಳಲ್ಲಿ ಸ್ವಾಭಿಮಾನ ಕೊರತೆ, ಹೀಗೆ ಅನೇಕ ಸಂಕಟಗಳನ್ನು ಎದುರಿಸುತ್ತಿದ್ದೇವೆ. ಧರ್ಮ ಶಿಕ್ಷಣ ನೀಡುವ ವ್ಯವಸ್ಥೆ ತರಲು ಪ್ರಯತ್ನಿಸಬೇಕು. ದೇವಸ್ಥಾನಗಳಲ್ಲಿ ಭಕ್ತರಿಗೆ ಧರ್ಮದ ಬಗ್ಗೆ ಧರ್ಮ ಶಿಕ್ಷಣ ನೀಡುವ ಕಾರ್ಯ ಮಾಡಬೇಕು ಮತ್ತು ಅದರಿಂದ ದೇಶಭಕ್ತಿಯ ಪೀಳಿಗೆ ನಿರ್ಮಾಣವಾಗುತ್ತದೆ.
*ದೇವಸ್ಥಾನವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಸಂಘಟಿತರಾಗಿ ಹೋರಾಡುವುದು ಅವಶ್ಯಕ !- ಶ್ರೀ.ಸುನಿಲ್ ಘನವಟ್, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ*
ಭಾರತದಲ್ಲಿನ ‘ಸೆಕ್ಯುಲರ್’ ಸರಕಾರಕ್ಕೆ ಹಿಂದೂಗಳ ಮಂದಿರಗಳನ್ನು ಕಬಳಿಸಿ ಅವುಗಳಲ್ಲಿನ ಹಣವನ್ನು ದೋಚಿ, ಸರಕಾರ ಧರ್ಮಕ್ಕಾಗಿ ಯಾವುದೇ ರೀತಿಯ ಸಹಾಯ ಅಥವಾ ಕಾರ್ಯ ಮಾಡುವುದಿಲ್ಲ.ಹಿಂದೂಗಳನ್ನು ಜಾಗೃತಗೊಳಿಸಿ, ದೇವಸ್ಥಾನಗಳ ವಿಶ್ವಸ್ಥರನ್ನು ಸಂಘಟಿಸುವ ಕಾರ್ಯ ಮಾಡಬೇಕಾಗಿದೆ. ಭಾರತದಲ್ಲಿ ಆಂಗ್ಲರು ೧೯೨೭ ರಲ್ಲಿ ಮಂದಿರಗಳ ಸರಕಾರೀಕರಣ ಆರಂಭಿಸಿದರು; ಆದರೆ ಭಾರತ ಸ್ವತಂತ್ರವಾದ ನಂತರವೂ ದೇವಸ್ಥಾನಗಳು ಸ್ವತಂತ್ರವಾಗಿಲ್ಲ. ಮಂದಿರ ಸರಕಾರೀಕರಣದ ವಿರುದ್ಧ ಹೋರಾಟದ ತೀವ್ರತೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಉಪಸ್ಥಿತರಿಗೆ ತಿಳಿಸಿದರು.
*ಸನಾತನ ಬೋರ್ಡ್ ಯಶಸ್ವಿಯಾಗಲು ಹಿಂದೂ ಸಂಘಟನೆ ಬಹು ಮುಖ್ಯ ! - ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಹಿರಿಯ ವಕೀಲರು, ಕರ್ನಾಟಕ ಉಚ್ಛ ನ್ಯಾಯಾಲಯ*