ಸಂಕ್ರಮನದಲ್ಲಿ ಅಂದರೆ ಧನುರ್ಮಾಸದಲ್ಲಿ ಕೆಲವು ವಿಶೇಷ ಪೂಜೆ ಪುನಸ್ಕಾರ ಮಾಡುವರು.ಇದು ಮುತ್ತೈದೆಯರು ಮಾಡುವಂಥದ್ದು.ಸಂಕ್ರಮಣ ಕಾಲದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇರುವುದರಿಂದ ಈ ಪೂಜೆಗಳು ಆಚರಣೆಗೆ ಬಂದಿರಬಹುದು.ಹೊಸಾ ಬೆಳೆ ಕೂಡಾ ಬಂದಿರುತ್ತದೆ.
ಬನ್ನಿ ಕೆಲವು ಪೂಜೆಗಳ ಬಗ್ಗೆ ತಿಳಿಯೋಣ.
ಧನುರ್ಮಾಸದಲ್ಲಿ ಭತ್ತ, ಎಳ್ಳು ಒಂದೆಡೆ ಹರಡಿ ಅದರ ಮೇಲೆ ದೀಪ ಇಟ್ಟು, ಎಣ್ಣೆ ಅಥವಾ ತುಪ್ಪ ಹಾಕಿ ದೀಪ ಬೆಳಗಿಸಿ ಸರಳವಾಗಿ ಲಕ್ಷ್ಮಿಪೂಜೆ ಮಾಡುವುದು. ಈ ದಿನ ಒಪ್ಪೊತ್ತು ಊಟ ಮಾಡಬೇಕು.ಅದು ಪೂಜಿಯ ನಂತರ.ರಾತ್ರಿಗೆ ಬೇಕಾದರೆ ಫಲಾಹಾರ ಸೇವಿಸಬಹುದು.ಸಂಜೆಗೆ ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಿ ತಾಂಬೂಲ ಯಥಾಶಕ್ತಿ ನೀಡಬೇಕು.
ಸಂಕ್ರಮಣದಲ್ಲಿ ಒಂದು ದಿನ ಹೊಸಾ ಸ್ಟೀಲ್ ಪಾತ್ರೆ, ಸೌಟು ಒಲೆಯ ಮೇಲಿಟ್ಟು ನೀರು ಸುರಿದು, ಕುದಿಸಿ ಅಕ್ಕಿ ತೊಳೆದು ಹಾಕಿ ಅನ್ನ ಮಾಡುವುದು.ನಂತರ ಪಾತ್ರೆ, ಸೌಟು ಅನ್ನದ ಸಮೇತ ಮುತ್ತೈದೆಗೆ ಕೊಡುವುದು.ಪಾತ್ರೆಗೆ ಸುಣ್ಣದ ಗೆರೆ ಕಂಠದ ಸುತ್ತ ಬರೆದಿರಬೇಕು. ಮುತ್ತೈದಿಗೆ ಅರಿಶಿಣ, ಕುಂಕುಮ ಹಾಗು ಯಥಾಶಕ್ತಿ ತಾಂಬೂಲ ಜೊತೆಯಲ್ಲಿ ನೀಡಬೇಕು.ಸಂಕ್ರಾಂತಿ ದಿನ ಹೊಸ ಪಾತ್ರೆಗೆ ಸುಣ್ಣದ ಗೆರೆ ಹಚ್ಚಿ, ರಥಸಪ್ತಮಿವರೆಗೆ ದಿನಾಲು ಬೊಗಸೆ ಅಕ್ಕಿ ಹಾಕಿ ಕಡೆಯ ದಿನ ಮುತ್ತೈದೇಗೆ ಕುಂಕುಮ ಕೊಟ್ಟು , ತಾಂಬೂಲದ ಜೊತೆಗೆ ಅಕ್ಕಿ ಸಮೇತ ಹೊಸ ಪಾತ್ರೆ ನೀಡುವುದು.ಸ್ವಲ್ಪ ಅಕ್ಕಿ ನಾವು ತೆಗೆದಿಟ್ಟುಕೊಳ್ಳಬೇಕು.ಅಥವಾ ಮುತ್ತೈಡೆಗೆ ನೀಡಿದ ಬಳಿಕ ಅವರ ಕೈಯಿಂದ ಸ್ವಲ್ಪ ಅಕ್ಕಿ ಪಡೆಯಬೇಕು.ಇದಕ್ಕೆ ಅಕ್ಷಯ ಪಾತ್ರೆ ಪೂಜೆ ಎನ್ನುವರುಧನುರ್ ಮಾಸದಲ್ಲಿ ಬೆಳಗಿನ ಜಾವ ೪-೫ ಕ್ಕೆ ಎದ್ದು ಸ್ನಾನ ಮಾಡಿ ದೀಪ ಹಚ್ಚಿ ದೇವಸ್ಥಾನಕ್ಕೆ ಹಣ್ಣು ಕಾಯಿ ಪೂಜೆಗೆ ಕೊಡುವುದು.ಇದು ಸರಳವಾದ ಪೂಜೆ.
ಹೊಸ ಪಾತ್ರೆಗೆ ಸುಣ್ಣದಲ್ಲಿ ಗೆರೆ ಎಳೆದು ಭತ್ತ,ಅಕ್ಕಿ, ಎಳ್ಳು ತುಂಬಿ ಮುತ್ತೈದೆಗೆ ಅರಿಶಿಣ, ಕುಂಕುಮ ಯಥಾಶಕ್ತಿ ತಾಂಬೂಲದ ಜೊತೆಗೆ. ಕೊಡುವುದು
ಹೊಸಾ ಸ್ಟೀಲ್ ಪಾತ್ರೆಗೆ ಸುನ್ನದಲ್ಲಿ ಗೆರೆ ಬರೆದು ಅದಕ್ಕೆ ಮೊಸರು ಹಾಕಿ ಹೊಸಾ ಕಡೆಗೋಳಿನಲ್ಲಿ ಕಡೆದು , ಪಾತ್ರೆಯನ್ನು ಕಡೆಗೋಳು, ಮೊಸರು ಸಮೇತ ಮುತ್ತೈದೆಗೆ ಅರಿಶಿಣ, ಕುಂಕುಮ, ಯಥಾಶಕ್ತಿ ತಾಂಬೂಲದ ಜೊತೆಗೆ ಕೊಡುವುದು.
ಹೊಸಾ ಸ್ಟೀಲ್ ಪಾತ್ರೆಗೆ ಸುಣ್ಣ ದ ಗೆರೆ ಬರೆದು ಹೆಪ್ಪು ಹಾಕಿದ ಕೆನೆ ಹಾಕಿ ಕಡೆದು ಬೆಣ್ಣೆ ತೆಗೆದು ಬೆಣ್ಣೆಯಲ್ಲಿ ಚಿಕ್ಕ ಬೆಳ್ಳಿಯ ಕೃಷ್ಣನನ್ನು ಮುಚ್ಚಿಟ್ಟು ಮುತ್ತೈ ದೆಗೆ ಕೊಡುವುದು.ಇದಕ್ಕೆ ಗುಪ್ತ ದಾನ ಎನ್ನುವರು.ಅರಿಶಿಣ ಕುಂಕುಮ, ಯಥಾಶಕ್ತಿ ತಾಂಬೂಲ ಜೊತೆಯಲ್ಲಿ ನೀಡಬೇಕು.
೫ ಜನ ಮುತ್ತೈದೆಯರಿಗೆ ೫-೧೦ ಗಾಜಿನ ಬಳೆಗಳನ್ನು ಕೊಡುವುದು. ಹೀಗೆ ೫ ವರುಷ ಮಾಡಬೇಕು.ಬಳೆ ನೋ0ಪಿ.
ಹೊಸಾ ಪಾತ್ರೆಗೆ ಸುಣ್ಣದಲ್ಲಿ ಗೆರೆ ಬರೆದು ಅಕ್ಕಿ ತುಂಬಿ ಪೂಜೆ ಮಾಡಿ ಮುತ್ತೈದೆಗೇ ಅರಿಶಿಣ, ಕುಂಕುಮ, ಯಥಾಶಕ್ತಿ ತಾಂಬೂಲದ ಜೊತೆಗೆ ನೀಡುವುದು.
೫-೧೦ ಮುತ್ತೈದೆಯರಿಗೆ ಅರಿಶಿಣ ಬೊಗಸೆ ನೀಡುವುದು ನಂತರ ಕುಂಕುಮ, ಯಥಾಶಕ್ತಿ ತಾಂಬೂಲ ನೀಡುವುದು.
ವೈಚಾರಿಕವಾಗಿ ನೋಡಿದರೆ ಹೊಸಾ ಬೆಳೆ ಬರುವ ಕಾಲ.ಆದ್ದರಿಂದ ಈ ದಿನಗಳಲ್ಲಿ ದಾನ ಧರ್ಮ ಹೆಚ್ಚು. ಈ ಆಚರಣೆಗಳು ನಾವು ಬೆಳೆದಿದ್ದನ್ನು ಹಂಚಿ ತಿನ್ನುವ ಬಗೆ. ಬನ್ನಿ ಓದುಗರೇ ನಾವು ಸಾಧ್ಯವಾದಷ್ಟು ಪೂಜೆ ಪುನಸ್ಕಾರ ಮಾಡೋಣ.
ಹೊಸದಾಗಿ ಮದುವೆ ಆದವರು ಸಂತ್ರಾಂತಿ ಎಳ್ಳಿನ ಜೊತೆ ಹೊಸ ಸ್ಟೀಲ್ ಬಟ್ಟಲನ್ನು ನೀಡುವರು.ಗಂಡು ಮಗು ಆದವರು ಬೆಳ್ಳಿಯ ಕೃಷ್ಣನನ್ನು ಎಳ್ಳಿನ ಜೊತೆ ಬೀರಿದರೆ, ಹೆಣ್ಣು ಮಗು ಆದವರು ಬೆಳ್ಳಿ ಬಟ್ಟಲು ಬಿರುವರು.ಇದು ನಮ್ಮ ಸಂಪ್ರದಾಯ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com