*ಯತಿಕುಲಚಕ್ರವರ್ತಿ ಪೇಜಾವರ ಶ್ರೀ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಮಹಾಸಮಾರಾಧನೆಯ ಸರಣಿಕಾರ್ಯಕ್ರಮಗಳ ನಡುವೆ ವಿಶೇಷ ಅತಿಥಿಗಳು ಆಗಮಿಸಿದರು.
*ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಬಿಜೆಪಿ ಯುವಮೋರ್ಚಾ ಅಧ್ಯಕ್ಷರೂ ಆದ ಶ್ರೀಯುತ ತೇಜಸ್ವಿಸೂರ್ಯ ಇವರು ಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಿಂದೂಧರ್ಮದ ಸಂಘಟನೆಗಾಗಿ ನಡೆಸಿದ ಕಾರ್ಯಕ್ರಮಗಳು, ಅವುಗಳ ಹಿಂದಿನ ಪರಿಶ್ರಮ, ಅವರ ಸ್ಪಷ್ಟದೂರದೃಷ್ಟಿ, ಸಮಾಜಸಂಘಟನೆಗಾಗಿ ಶಂಖನಾದದ ರೀತಿಯಲ್ಲಿ ಅವರು ನೀಡುತ್ತಿದ್ದ ಕರೆಗಳು ಇವುಗಳ ಬಗ್ಗೆ ಸುಂದರವಾಗಿ ಬಣ್ಣಿಸಿ ಪರಮಪೂಜ್ಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ಶ್ರೀಕೃಷ್ಣ-ಗುರುಗಳ ಪ್ರಸಾದವನ್ನು ಸ್ವೀಕರಿಸಿದರು.ಈ ವೇಳೆ ಬಸವನಗುಡಿ ಶಾಸಕ ಶ್ರೀಯುತ ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.*