ಸಂಗೀತದಿಂದ ಪುರುಷಾರ್ಥ ಸಾಧನೆ ಸಾಧ್ಯ
# ಶ್ರೀ ವೀರೇಶಾನಂದ ಸ್ವಾಮೀಜಿ ಅಭಿಮತ
#
ಅನುಗ್ರಹ ಸಂಗೀತ ಮಹಾವಿದ್ಯಾಲಯದ ರಜತ ಮಹೋತ್ಸವ
* ಡಾ. ಕೆ.ಎಸ್. ಚೈತಾಲಿ, ಎ.ಆರ್. ರಘುರಾಮ, ಹಿರಿಯಣ್ಣ ಮತ್ತು ವಿದ್ವಾಂಸ ಪಿ.ಎಸ್. ಪ್ರಸನ್ನಕುಮಾರ್‌ಗೆ ವಿಶೇಷ ಸನ್ಮಾನ
ತುಮಕೂರು :ಭಾರತೀಯ ಸಂಗೀತ ಕಲಿಕೆಯಿಂದ ಹಲವು ರಂಗದ ಸಾಧನೆ ಸಾಧ್ಯ ವಾಗಲು ಪ್ರೇರಣೆ ದೊರಕು ತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ
ರಜತ ಮಹೋತ್ಸವದ ಅಂಗ ವಾಗಿ ಮಾಕಂ ಕಲ್ಯಾಣ ಮಂಟಪದಲ್ಲಿ ಹಮ್ಮಿ ಕೊಂಡಿದ್ದ ಶ್ರೀ ಪುರಂದರ ದಾಸರ - ಸದ್ಗುರು ಶ್ರೀ ತ್ಯಾಗರಾಜರ ಸ್ವಾಮಿಗಳ 25ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನಿಸಿಅನುಗ್ರಹ ಸಂದೇಶ ನೀಡಿದರು.
ಸಂಗೀತದಿಂದ ಮನೆ,ಮನದಲ್ಲಿ ಮಾತ್ರವಲ್ಲ, ದೇಶ ದೇಶಗಳ ನಡುವಿನ ಸೌಹಾರ್ದ ಸ್ಥಾಪನೆತಾಗುತ್ತದೆ ಎಂದರು.
ಗಣಿತ ತಜ್ಞ ಬಿ. ವಿ. ವಿದ್ಯಾಶಂಕರ ಮಾತನಾಡಿ, ಸಂಗೀತದಲ್ಲಿ ಗಣಿತವಿದೆ. ಗಣಿತ ಕಲಿಕೆಗೆ ಸಂಗೀತ ಸ್ಫೂರ್ತಿ ನೀಡುತ್ತದೆ. ಹಾಗಾಗಿ ಮಕ್ಕಳಿಗೆ ಎಳವೆಯಲ್ಲೇ ಸಂಗೀತ ಕಲಿಸಿ ಎಂದು ಪಾಲಕರಿಗೆ ಸಲಹೆ ನೀಡಿದರು.
ರಜತ ಹಬ್ಬದ ಅಂಗವಾಗಿ ವಿವಿಧ ರಂಗದ ಸಾಧಕರಾದ ಕನ್ನಡ ಪ್ರಾಧ್ಯಾಪಕಿ ಡಾ. ಕೆ.ಎಸ್. ಚೈತಾಲಿ (ಸಾಹಿತ್ಯನುಗ್ರಹಶ್ರೀ)
ಲೇಖಕ ಎ.ಆರ್. ರಘುರಾಮ (ಅಧ್ಯಾತ್ಮಾನುಗ್ರಹ ಶ್ರೀ),ಖ್ಯಾತ ಬಾಣಸಿಗ ಹಿರಿಯಣ್ಣ(ಪೋಷಕಾನುಗ್ರಹಶ್ರೀ)
ಮತ್ತು ಪಿಟೀಲು ವಿದ್ವಾಂಸ ಪಿ.ಎಸ್. ಪ್ರಸನ್ನ ಕುಮಾರ್ ಅವರಿಗೆ ಸಂಗೀತ ನಾದಾನುಗ್ರಹಶ್ರೀ)ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಾರುತಿ ಇಂಟರ್ನ್ಯಾಷನಲ್ ಶಾಲೆ ಕಾರ್ಯದರ್ಶಿಬಿ.ವಿ. ಶ್ರೀನಿವಾಸ್, ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್, ವಸುಮತಿ ಭಟ್ ಹಾಜರಿದ್ದರು. ಇದೇ ಸಂದರ್ಭ ಅತಿಥಿಗಳು ‘ಗುರು ಪೂರ್ಣಿಮಾರ್ಚನಂ’ ಕೃತಿ ಬಿಡುಗಡೆ ಗೊಳಿಸಿದರು.
ಇದಕ್ಕೂ ಮುನ್ನ ಶ್ರೀ ತ್ಯಾಗರಾಜರ ‘ಘನರಾಗ ಪಂಚ ರತ್ನ’ ಕೃತಿಗಳ ಗೋಷ್ಠಿ ಗಾಯನ, ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ ಗಾಯನವಿದ್ಯಾಲಯದ ಹಿರಿಯ, ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ಸಂಪನ್ನಗೊಂಡಿತು.
ನಗರದ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಮಾಕಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಪುರಂದರ - ಶ್ರೀ ತ್ಯಾಗರಾಜರ 25ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಡಾ. ಕೆ.ಎಸ್. ಚೈತಾಲಿ, ಲೇಖಕ ಎ.ಆರ್. ರಘುರಾಮ, ಬಾಣಸಿಗ ಹಿರಿಯಣ್ಣ ಮತ್ತು ಪಿಟೀಲು ವಿದ್ವಾಂಸ ಪ್ರಸನ್ನ ಕುಮಾರ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ವಿದ್ವಾನ್ ಶ್ರೀಕಂಠ ಭಟ್ ಇತರರು ಇದ್ದರು.