ರಾಜಗೋಪುರ ನಿರ್ಮಾಣಕ್ಕೆ ಮುಜರಾಯಿ ಸಚಿವರ ಸ್ಪಂದನೆ

varthajala
0

ಶಿಡ್ಲಘಟ್ಟ : ತಾಲೂಕಿನ ಸಾದಲಿ ಹೋಬಳಿಯ ತಲಕಾಯಲಬೆಟ್ಟದಲ್ಲಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಪುರಾತನ  ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಪ್ರವರ್ಗ "ಎ" ವರ್ಗದ ದೇವಾಲಯವಾಗಿ ಗುರುತಿಸಲ್ಪಟ್ಟಿದ್ದು, ಲಕ್ಷಾಂತರ ಭಕ್ತಾಧಿಗಳನ್ನು ಸೆಳೆಯುತ್ತಿದೆ. ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಬಾರಿ ಧನಗಳ ಜಾತ್ರೆ ಮತ್ತು ರಥೋತ್ಸವದೊಂದಿಗೆ ದೇವಾಲಯದಲ್ಲಿ ವಿಶೇಷವಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ.

ದೇವಾಲಯದ ಪ್ರವೇಶದ್ವಾರದಲ್ಲಿ ರಾಜಗೋಪುರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನುಮತಿಯನ್ನು ನೀಡಲು ಮುಜುರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ದೇವಾಲಯದ ಸಮಿತಿ ಅಧ್ಯಕ್ಷ ಡಿಪಿ ನಾಗರಾಜ್ ಹಾಗೂ ಸ್ಥಳಿಯ ಮುಖಂಡರ ಜೊತೆ ಭೇಟಿ ನೀಡಿ ಲಿಖಿತವಾಗಿ ಪತ್ರದ ಮೂಲಕ ಅನುಮತಿ ಕೇಳಲಾಗಿತ್ತು.

 ದೇವಾಲಯದ ಮಹತ್ವ ತಿಳಿಸಿದ ಹಿನ್ನೆಲೆಯಲ್ಲಿ.‌ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ  ತಕ್ಷಣ ಸ್ಪಂದಿಸಿ, ಮುಜುರಾಯಿ ಆಯುಕ್ತರಿಗೆ ಶಿಫಾರಸ್ಸು ಮಾಡುವ ಮೂಲಕ ದೇವಾಲಯದ ಅಭಿವೃದ್ಧಿಗೆ ನೆರವಾಗುವ ಭರವಸೆ ನೀಡಿದರು.

ರಾಜೀವ್ ಗೌಡ ಅವರ ಶ್ರಮಕ್ಕೆ ಭಕ್ತರ ಪ್ರಶಂಸೆ :

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಹಲವು ದಿನಗಳಿಂದ ಶ್ರಮಿಸುತ್ತಿದ್ದು, ರಾಜಗೋಪುರ ನಿರ್ಮಾಣದಿಂದ ಭಕ್ತಾದಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂಬ ಅವರ ಕನಸು ದೇವರ ಕೃಪೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಭಕ್ತಾದಿಗಳು ರಾಜೀವ್ ಗೌಡ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಆಧ್ಯಾತ್ಮಿಕ ತಾಣವಾಗಿ ಭಕ್ತರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇದು ಶಿಡ್ಲಘಟ್ಟದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಬಿಂಬಿಸುತ್ತದೆ. ದೇವಾಲಯದ ರಾಜಗೋಪುರ ನಿರ್ಮಾಣ ಕಾರ್ಯವು ಪೂರ್ಣಗೊಂಡ ನಂತರ, ಇದು ಭಕ್ತಾಧಿಗಳಿಗೆ ಹೊಸ ಆಕರ್ಷಣೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಒದಗಿಸಲಿದೆ.  ಈ ತೀರ್ಮಾನವು ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಆಶೆಯನ್ನು ಉಂಟುಮಾಡಿದೆ.

ದೇವಾಲಯ ಸಮಿತಿ ಅಧ್ಯಕ್ಷ ಡಿ.ಪಿ ನಾಗರಾಜ್ ಮಾತನಾಡಿ,ಶಿಡ್ಲಘಟ್ಟ ತಾಲೂಕಿನಲ್ಲಿ ಉತ್ತರ ದಿಕ್ಕಿನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದ್ದು ಎರಡನೇ ತಿರುಪತಿ ಎಂದು ಕರೆಯಲ್ಪಡವ ಈ ದೇವಾಲಯವು ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಾರಿ ದನಗಳ ಜಾತ್ರೆ ಹಾಗೂ ರಥೋತ್ಸವವು ಬಹಳ ಅದ್ದೂರಿಯಾಗಿ ನಡೆಯುತ್ತದೆ. ದೇವಾಲಯದ ಪ್ರವೇಶ ದ್ವಾರವು, ರಾಜಗೋಪುರ ನಿರ್ಮಾಣ ಮಾಡಲು ಸರ್ಕಾರದ ಗಮನಕ್ಕೆ ಈಗಾಗಲೇ ನೀಡಲಾಗಿತ್ತು. ಅದು ಗುರುವಾರ ಅಂಗೀಕಾರ ಪಡೆದುಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Post a Comment

0Comments

Post a Comment (0)