ಬ್ರಾಹ್ಮಣರ ಸಂಸ್ಕೃತಿ, ಸಂಪ್ರಾದಯ ಬಿಂಬಸುವ ಮಹಾಸಮ್ಮೇಳನಕ್ಕೆ ಸ್ವಾಗತ-ಎಸ್.ರಘುನಾಥ್

varthajala
0

ರಾಜಾಜಿನಗರ: ವಿಶ್ವ ವಿಪ್ರತೇಯಿ ಸಾಮಾಜಿಕ ಸಂಘಟನೆ ರಾಜ್ಯಾಧ್ಯಕ್ಷರು, ಬ್ರಾಹ್ಮಣ ಸಮಾವೇಶದ  ಸಮಿತಿಯ ಉಪಾಧ್ಯಕ್ಷರಾದ ಎಸ್.ರಘುನಾಥ್ ರವರಿಗೆ ಬ್ರಾಹ್ಮಣ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ.

ಎಸ್.ರಘುನಾಥ್ ರವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್, ಕೆಪಿಸಿಸಿ ಸಂಯೋಜಕರಾದ ಸುದರ್ಶನ್, ಬ್ರಾಹ್ಮಣ ಸಮುದಾಯದ ಮುಖಂಡರಾದ ರಾಘವೇಂದ್ರರಾವ್ ದೇಶಪಾಂಡೆ, ಸುದರ್ಶನ್, ಶೇಷನಾರಾಯಣ್ ರವರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಎಸ್.ರಘುನಾಥ್ ರವರು ಮಾತನಾಡಿ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ 25ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬುದ್ದಿವಂತ, ವಿದ್ಯಾವಂತ ಸಮಾಜ ಎಂದು ಗುರುತಿಸಿಕೊಂಡಿದ್ದರು ಇಂದು ಸಾಕಷ್ಟು ಸಂಕಷ್ಟಗಳು ಎದುರಿಸುತ್ತಿದ್ದಾರೆ.

ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಸಮರ್ಪಕ ಉದ್ಯೋಗ ಸಿಗುತ್ತಿಲ್ಲ ಹಾಗೂ ಅರ್ಚಕರು, ಅಡುಗೆ ಕೆಲಸ ಮಾಡುವವರ ಸ್ಥಿತಿ ಶೋಚನಿಯವಾಗಿದೆ.

ಬ್ರಾಹ್ಮಣರು ಸಂಘಟಿತರಾಗಬೇಕು, ನಮ್ಮ ಹಕ್ಕು ಹೋರಾಟಗಳಿಗೆ ನಾವೆಲ್ಲರು ಒಂದೇ ಎಂದು ಮುಂದೆ ಸಾಗಬೇಕು ಆಗ ಮಾತ್ರ ಬ್ರಾಹ್ಮಣ ಸಮುದಾಯ ಅಭಿವೃದ್ದಿ ಸಾಧ್ಯ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50ವರ್ಷ ತುಂಬಿದ ಶುಭಾ ಸಂದರ್ಭದಲ್ಲಿ  ಸುವರ್ಣ ಸಂಭ್ರಮ ಮತ್ತು ಮಹಾಸಮ್ಮೇಳನವನ್ನು ಜನವರಿ 18,19ನೇ ತಾರೀಖು ಎರಡು ದಿನಗಳ ಮಹಾ ಸಮಾವೇಶವನ್ನು ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ.

ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರು ಭಾಗವಹಿಸಿ ಯಶ್ವಸಿಗೊಳಿಸಬೇಕಾಗಿ ವಿನಂತಿ, ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಹೇಳಿದರು.

Post a Comment

0Comments

Post a Comment (0)