No title

varthajala
0

 ವೈಕುಂಠ ಏಕಾದಶಿ 


ಪುಷ್ಯ ಮಾಸದ ಶುದ್ಧ ಏಕಾದಶಿ ವೈಕುಂಠ ಏಕಾದಶಿ. ಈ ದಿನ ವೈಕುಂಟದ ಬಾಗಿಲು ತೆರೆದಿರುತ್ತದೆ ಎನ್ನುವರು.ಪುರಾಣಗಳ ಪ್ರಕಾರ ಬಹಳಷ್ಟು ಕಥೆಗಳು ಈ ದಿನದ ಬಗ್ಗೆ ಇವೆ.

ಇದರ ಆಚರಣೆ ಬಗ್ಗೆ ತಿಳಿಯೋಣ.

ಈ ದಿನ ಶ್ರೀ ಮಹಾವಿಷ್ಣು ಹಾಗು ಅವನ ಅವತಾರಗಳು, ಲಕ್ಷ್ಮಿದೇವಿಯನ್ನು ಮನೆ ದೇವರಾಗಿ ಉಳ್ಳವರು ಹಾಗು ವಿಷ್ಣು ಭಕ್ತರು ವಿಶೇಷವಾಗಿ ಆಚರಣೆ ಮಾಡುವರು.ಅಯ್ಯಂಗಾರರಿಗೆ ಈ ದಿನ ಬಹಳ ವಿಶೇಷ.ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ.

ಈ ದಿನ ಬೆಳಿಗ್ಗೆ ಅಭ್ಯಂಗ ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಶ್ರೀ ಮಹಾ ವಿಷ್ಣುವಿನ ವಿಗ್ರಹಕ್ಕೆ ಲಕ್ಷ್ಮಿ ಸಮೇತ  ಷೋಡಶೋಪಚಾರ ಪೂಜೆ ಮಾಡುವರು.ಪುರುಷಸೂಕ್ತ, ಶ್ರೀ ಸೂಕ್ತ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ಈ ದಿನ ಉಪವಾಸ ಅಂದರೆ ಬೇಯಿಸಿದ ಆಹಾರ ನಿಷಿದ್ಧ.ಹಾಗಾಗಿ ಹಣ್ಣುಗಳು, ಹಣ್ಣಿನ ರಸಾಯನ, ಹಣ್ಣಿನ ರಸ, ಅವಲಕ್ಕಿ, ಗೊಜ್ಜವಲಕ್ಕಿ, ಕೋಸಂಬರಿ, ಗುಲುಪಾವಟೆ,  ಇತ್ಯಾದಿ ತಯಾರಿಸುತ್ತಾರೆ.ಅದನ್ನೇ ದೇವರಿಗೆ ನೈವೇದ್ಯವಾಗಿ ಇಡುತ್ತಾರೆ.

ಮನೆಯಲ್ಲಿ ಪೂಜೆಯ ನಂತರ ತೀರ್ಥ ತೆಗೆದುಕೊಂಡು ಆಹಾರ ಸೇವಿಸುವರು.ನಂತರ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡುವರು.ಸಾಮಾನ್ಯವಾಗಿ ವೈಷ್ಣವ ದೇವಾಲಯಗಳಲ್ಲಿ ಇಂದು ವೈಕುಂಟದ ಅಲಂಕಾರ, ಹಾಗು ದೇವರನ್ನು ಉಯ್ಯಾಲೆ ಯಲ್ಲಿ ಕೂರಿಸುವ  ಆಚರಣೆ ಇದೆ.ದೇವಾಲಯಗಳಲ್ಲಿ ಉತ್ತರದ ದಿಕ್ಕಿನಿಂದ ದೇವರನ್ನು ನೋಡುವ ವ್ಯವಸ್ಥೆ ಇರುತ್ತದೆ.ಅಲ್ಲದೆ ಲಡ್ಡು ಇತ್ಯಾದಿ ಸಿಹಿ ಪ್ರಸಾದದ ವಿತರಣೆ ಮಾಡುವರು.

ದೇವಾಲಯಗಳಲ್ಲಿ ವಿಷ್ಣುವಿನ ಮೆಚ್ಚಿನ ಪತ್ರೆಯಾದ ತುಳಸಿ ಹಾರದ ಅಲಂಕಾರ ಈ ದಿನ ವಿಶೇಷವಾಗಿರುತ್ತದೆ.ಭಕ್ತರು ಕೂಡಾ ತುಳಸಿ ಮಾಲೆಯನ್ನು ಈ ದಿನ ನಾರಾಯಣನಿಗೆ ಸಮರ್ಪಿಸುವರು.ಮಿಕ್ಕಂತೆ ಸುಗಂಧ ಪತ್ರೆಗಳು, ಸು ಗಂಧಿತವಾದ ಹೂಗಳು ಸ್ವಾಮಿಗೆ ಈ ದಿನ ಅರ್ಪಿಸಲ್ಪಡುತ್ತವೆ.ನಾರಾಯಣನ ಜೊತೆಯಲ್ಲಿ ಶ್ರೀ ಲಕ್ಷ್ಮಿ ದೇವಿಗೂ ಕೂಡಾ ಎಲ್ಲ ಪೂಜೆ ಪುನಸ್ಕಾರ ನಡೆಯುವುದು. ಕೆಲ ಹಿರಿಯರು ಸಂಜೆ ಯವರೆಗೂ ಏನು ತಿನ್ನದೇ ಹಣ್ಣು ಹಾಲು ಸೇವಿಸಿ ರಾತ್ರಿ ಫಲಾಹಾರ ಎಂದರೆ ಮುಸುರೆ ಇಲ್ಲದ ಅಂದರೆ ಬೇಯಿಸದ ಆಹಾರ ಸೇವಿಸುತ್ತಾರೆ.

ಮಕ್ಕಳು, ಮುದುಕರು, ರೋಗಿಗಳು, ಗರ್ಭಿಣಿ ಸ್ತ್ರೀಯರು ಏನಾದರೂ ಉಪಹಾರ ಅಂದರೆ ತಿಂಡಿ ತಿನ್ನಬಹುದು.

ಈ ದಿನ ವಿಷ್ಣು ಸಹಸ್ರನಾಮ ಪಠಣ ಅತ್ಯುತ್ತಮ.ಸ್ವಾಮಿಗೆ ಕ್ಷೀರಾಭಿಷೇಕ ಕೂಡಾ ಶ್ರೇಷ್ಠ,ತುಳಸಿ,ಪಾರಿಜಾತ ಕೂಡಾ ಶ್ರೇಷ್ಠ. ಈ ದಿನ ವೈಷ್ಣವ ಪುರಾಣಗಳನ್ನು ಓದಬಹುದು.ವಿಷ್ಣು ಪುರಾಣ ಪದ್ಮಪುರಾಣ ಇತ್ಯಾದಿ.

ಈ ದಿನ ದೇವರಲ್ಲಿ ಏನ್ನನ್ನು ಪ್ರಾರ್ಥಿಸಿದರು ದೇವರು ಕೊಡುವನು ಎಂಬ ನಂಬಿಕೆ ಭಕ್ತರಲ್ಲಿದೆ.ತಿರುಪತಿ ಹಾಗು ಇತರೆ ಪ್ರಸಿದ್ಧ ವೈಷ್ಣವ ಆಲಯಗಳಲ್ಲಿ ಇದರ ಆಚರಣೆ ಬಹಳ ವೈಭವೋಪೇತವಾಗಿ ಜರುಗುತ್ತದೆ.ಬನ್ನಿ ನಾವು ವಿಷ್ಣುವನ್ನು ಲಕ್ಷ್ಮಿ ಸಮೇತ ಆರಾಧಿಸಿ ದರ್ಶನ ಪಡೆಯೋಣ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ. ಮಾರನೇ ದಿನ ಅಂದರೆ ದ್ವಾದಶಿ ದಿನ ಭೋಜನ ಮಾಡ್ಡಬಹುದು    

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

brahmies@gmail.com


Post a Comment

0Comments

Post a Comment (0)