" ಭಾರತದಲ್ಲಿನ ಭಕ್ತಿ ಸಾಹಿತ್ಯ ಪಥ "

varthajala
0

 " ಭಾರತದಲ್ಲಿನ ಭಕ್ತಿ ಸಾಹಿತ್ಯ ಪಥ "

( ಭಕ್ತಿ ಸಾಹಿತ್ಯ ನಡೆದು ಬಂದ ದಾರಿ )

ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ಕರ್ನಾಟಕದ ಪಾತ್ರ ಬಹಳ ಮಹತ್ವವಾದುದು. 

ಕರ್ನಾಟಕದ ಧಾರ್ಮಿಕ ಇತಿಹಾಸದಿಂದ ವೈಷ್ಣವ ಮತ ಕ್ರಿ ಶ 6ನೇ ಶತಮಾನದಲ್ಲಿ ಪ್ರಬಲವಾಗಿತ್ತು ಎಂದು ತಿಳಿಯುತ್ತದೆ.

 ಜೈನ ಮತ ಕಳೆಗುಂದುತ್ತಿರುವಾಗ ಶೈವ ಹಾಗೂ ವೈಷ್ಣವ ಮತಗಳು ಪ್ರಬಲವಾದವು. 

ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಕೇರಳದ " ಕಾಲಟಿ " ಅವತರಿಸಿ ನರ್ಮದಾ ನದೀ ತೀರದಲ್ಲಿ ಸಂನ್ಯಾಸವನ್ನು ಸ್ವೀಕರಿಸಿ ಇಡೀ ಭಾರತ ಖಂಡದಲ್ಲೆಲ್ಲಾ " ಅದ್ವೈತ ಸಿದ್ಧಾಂತ " ವನ್ನು ಪ್ರಚುರ ಪಡಿಸಿದರು. 

ಅವರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ " ಶೃಂಗೇರಿ ಮಠ " ವೂ ಒಂದು. 

ತಮಿಳುನಾಡಿನಲ್ಲಿ ಅವತರಿಸಿ ಅಲ್ಲಿಯ ಧಾರ್ಮಿಕ ಅಸಹಿಷ್ಣುತೆಯಿಂದ ನೊಂದು ತಾಯ್ನಾಡನ್ನು ಬಿಟ್ಟು ಬಂದ ಶ್ರೀ ರಾಮಾನುಜಾಚಾರ್ಯರು ( ಕ್ರಿ ಶ 11ನೇ ಶತಮಾನ ) ಕರ್ನಾಟಕವನ್ನು ತಮ್ಮ ತಪೋಭೂಮಿ- ಯನ್ನಾಗಿಸಿಕೊಂಡರು. 

ಇವರು " ವಿಶಿಷ್ಟಾದ್ವೈತ ಸಿದ್ಧಾಂತ " ವನ್ನು ಪ್ರಚುರ ಪಡಿಸಿದರು. 

ದ್ವೈತ ಮತ ಸಂಸ್ಥಾಪಕರಾದ ಶ್ರೀ ಮನ್ಮಧ್ವಾಚಾರ್ಯರು ಕ್ರಿ ಶ 13ನೇ ಶತಮಾನದಲ್ಲಿ ಕರ್ಣಾಟಕದಲ್ಲೇ ಅವತರಿಸಿದರು. 

" ವೈದಿಕ ಪರಂಪರೆಯ ಪ್ರಧಾನವಾದ ಮೂರು ಮತಗಳನ್ನು ಭಾರತೀಯ ಸಂಸ್ಕೃತಿಗೆ ನೀಡಿದ ಗೌರವ ಕರ್ನಾಟಕಕ್ಕೆ ಇದೆ. 

" ಭಕ್ತಿಯ ಹರಿಕಾರ "

ಅಳ್ವಾರರಿಂದ ಭಕ್ತಿಯು ದ್ರಾವಿದರಲ್ಲಿ ಹಬ್ಬಿತು. ಅಳ್ವಾರರು ಅಂದರೆ ಭಕ್ತಿಯಲ್ಲಿ ಮುಳುಗಿದವರು ಎಂದರ್ಥ. " ನಾಲಾಯಿರ ಪ್ರಬಂಧ " ಎಂಬ ಗ್ರಂಥದಲ್ಲಿ ಅಳ್ವರರ ಚರಿತ್ರೆ ಇದೆ. 

ವೈಷ್ಣವ ಭಕ್ತಿಯೊಂದಿಗೆ ಶೈವ ಭಕ್ತಿಯೂ ಬೆಳೆಯಿತು.

 ಸಾಂಪ್ರದಾಯ ಭಕ್ತಿಯಲ್ಲಿ ಭಕ್ತಿಯು ಸಂನ್ಯಾಸ ಮಾರ್ಗವಲ್ಲ. 

" ಸಂಸಾರ ಸಮುದ್ರದಲ್ಲಿ ಈಸಬೇಕು ಇದ್ದು ಜಯಿಸಬೇಕು " ಎಂಬ ಮೂಲ ತತ್ತ್ವವಾಗಿದೆ. 

ವೈರಾಗ್ಯ, ಅನಾಸಕ್ತಿ ಯೋಗವನ್ನು ಭಕ್ತಿಯು ತಿರಸ್ಕರಿಸದಿದ್ದರೂ ಸಾಮಾನ್ಯ ಗೃಹಸ್ಥ ಅನುಸರಿಸಬಹುದಾದ ಸುಲಭ ಮಾರ್ಗ " ಭಕ್ತಿ ಪಂಥ " ವೆಂದು ಮನವರಿಕೆ ಆಯಿತು. 

ಕರ್ನಾಟಕದಲ್ಲಿ ಶ್ರೀ ಶಂಕರಾಚಾರ್ಯರಿಂದ " ಅದ್ವೈತ ಮತ "; ಶ್ರೀ ರಾಮಾನುಜಾಚಾರ್ಯರಿಂದ " ವಿಶಿಷ್ಟಾದ್ವೈತ ಮತ "; ಶ್ರೀ ಮಧ್ವಾಚಾರ್ಯರಿಂದ " ದ್ವೈತ ಮತ " ವೂ ಬೆಳೆದವು. 

ಶ್ರೀ ಶಂಕರಾಚಾರ್ಯರು ಬ್ರಹ್ಮವಾದವನ್ನು ಪ್ರತಿಪಾದಿಸಿದರು ( ಕ್ರಿ ಶ 788 - 820 )

ಶ್ರೀ ರಾಮಾನುಜಾಚಾರ್ಯರ  ಶ್ರೀ ನಾರಾಯಣನ ಮಹಿಮೆ, ದೈವೀ ಕೃಪೆ ಎಂಬ ತತ್ತ್ವ ಜನ ಸಾಮಾನ್ಯರಿಗೆ ಹಿಡಿಸಿದವು.  ( ಕ್ರಿ ಶ 1017 - 1137 )

ಶ್ರೀ ಮಧ್ವಾಚಾರ್ಯರು ಹರಿ ಸರ್ವೋತ್ತಮತ್ವವನ್ನು ಪ್ರತಿಪಾದಿಸಿದರು ( ಕ್ರಿ ಶ 1238 - 1317 )

ಶ್ರೀ ಶಂಕರಾಚಾರ್ಯರ ತತ್ತ್ವಗಳು ಆಡು ಭಾಷೆಯಾದ ಕನ್ನಡದಲ್ಲಿ ಬರೆಯದೇ ಇರುವುದರಿಂದ ಹೆಚ್ಚು ಪ್ರಚುರವಾಗಲಿಲ್ಲ. 

ಶ್ರೀ ರಾಮಾನುಜಾಚಾರ್ಯರ ತತ್ತ್ವಗಳು ತಮಿಳುನಲ್ಲಿರುವುದರಿಂದ ಕನ್ನಡದ ಜನಕ್ಕೆ ಹತ್ತಿರವಾಗಲಿಲ್ಲ. 

ಆದರೆ ದ್ವೈತ ಸಿದ್ಧಾಂತವು ಹರಿದಾಸರ ಕೈಯಲ್ಲಿ ಮನೆ - ಮನೆಯನ್ನೂ; ಮನ - ಮನವನ್ನೂ ಮುತ್ತಿದ್ದರಿಂದ " ದ್ವೈತ ಭಕ್ತಿ " ಗೆ ವ್ಯಾಪಕ ಪ್ರಚಾರ ಸಿಕ್ಕಿತು. 

ಕರ್ನಾಟಕದಲ್ಲಿ ಮಧ್ಯ ಯುಗದಲ್ಲಿ ಭಕ್ತಿ ಪಂಥಗಳಾಗಿ ಬೆಳೆದು ಬಂದ ಶರಣರ - ಹರಿದಾಸರ ಭಕ್ತಿ ಪಂಥವನ್ನು ವಿವೇಚಿಸುವ ಮುಂಚೆ ಭಾರತದ ಇತರೆ ಪ್ರದೇಶಗಳಲ್ಲಿ ಭಕ್ತಿ ಪಂಥದ ಪ್ರಮುಖರ ಪರಿಚಯವನ್ನು ಸ್ಥೂಲವಾಗಿ ಮಾಡಿಕೊಳ್ಳಬಹುದು. 

" ತಮಿಳುನಾಡಿನ ಭಕ್ತಿ ಪಂಥ "

 ಕ್ರಿ ಶ 7 - 9 ನೇ ಶತಮಾನಗಳ ನಡುವೆ ಇದ್ದಂಥಹ ತಮಿಳುನಾಡಿನ ವೈಷ್ಣವ ಭಕ್ತರೇ ಅಳ್ವಾರರು. " ಅಳ್ವಾರರು ಎಂದರೆ ಭಕ್ತಿಯಲ್ಲಿ ಮುಳುಗಿದವರು ಎಂದರ್ಥ. 

ಈ ಅಳ್ವಾರರು ಒಟ್ಟು 12 ಜನ. ಇವರಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ. 

" ಅಂಡಾಳ್ " ಎಂಬ ಹೆಣ್ಣು ಮಗಳೂ ಇದ್ದಾಳೆ. 

ಇವರು ನಿರ್ಗುಣ ವಾದಿಗಳಲ್ಲ.

 ಸಮಸ್ತ ಕಲ್ಯಾಣ ಗುಣ ಪರಿಪೂರ್ಣನಾದ ಶ್ರೀಮನ್ನಾರಾಯಣನ ಉಪಾಸಕರು.

 ಈ ಅಳ್ವಾರರ ಸಾಹಿತ್ಯದಲ್ಲಿ ಮಧುರ ಭಾವದ ಪ್ರತಿಪಾದನೆ ಇದೆ. 

" ಆಂಧ್ರಪ್ರದೇಶದ ಭಕ್ತಿ ಪಂಥ "

ತೆಲುಗಿನಲ್ಲಿ ಶೈವ ಧರ್ಮದ ಮೂಲ ಭಕ್ತಿ ಸಾಹಿತ್ಯ ಪ್ರಾರಂಭವಾಯಿತು. 

ಬಸವಣ್ಣನ ಸಮಕಾಲೀನರಾಗಿದ್ದ ಮಲ್ಲಿಕಾರ್ಜುನ ಪಂಡಿತರು ಇದಕ್ಕೆ ಚಾಲನೆ ನೀಡಿದರು. 

ನಂತರ ಪಾಲ್ಕುರಿಕೆ ಸೋಮನಾಥ  " ಬಸವ ಪುರಾಣ " ವನ್ನು ಬರೆದು ಭಕ್ತಿ ಸಾಹಿತ್ಯವನ್ನು ಮುಂದುವರೆಯುವಂತೆ ಮಾಡಿದರು. 

ಇಲ್ಲಿ ವೈಷ್ಣವ ಭಕ್ತಿ ಪಂಥ ತಡವಾಗಿ ಆರಂಭವಾದರೂ ಗಟ್ಟಿಯಾಗಿ ನೆಲೆಯೂರಿತು. 

ಕ್ರಿ ಶ 13ನೇ ಶತಮಾನದಲ್ಲಿ ಬದುಕಿದ ಶ್ರೀ ಕೃಷ್ಣಚಾರ್ಯ " ಸಿಂಹಗಿರಿ ವಚನಮುಲು " ದಲ್ಲಿ ಭಕ್ತಿಗೆ ಪ್ರಾಶಸ್ತ್ಯವಿತ್ತಿದ್ದಾರೆ. 

ಭಕ್ತಿ ಸಾಹಿತ್ಯಕ್ಕೆ ಅಪಾರವಾದ ಕಾಣಿಕೆ ನೀಡಿದವರು ಶ್ರೀ ತಳ್ಳಪಾಕ ಅನ್ನಮಾಚಾರ್ಯರು. 

ಅವರ ಮಕ್ಕಳು, ಮರಿ ಮಕ್ಕಳು ಭಕ್ತಿ ಸಾಹಿತ್ಯವನ್ನು ಬೆಳೆಸಿದರು. 

ಶ್ರೀ ಶ್ರೀನಿವಾಸನ ಅನನ್ಯ ಭಕ್ತರಾಗಿದ್ದ ಶ್ರೀ ಅನ್ನಮಾಚಾರ್ಯರು ಜಾನಪದ ಮಟ್ಟುಗಳನ್ನು ಸ್ವೀಕರಿಸಿ ಶ್ರೀಸಾಮಾನ್ಯನ ಭಾಷೆಯಲ್ಲಿ ಹಾಡುಗಳನ್ನು ರಚಿಸಿ ಸಂಗೀತ - ಸಾಹಿತ್ಯ ಎರಡೂ ಕ್ಷೇತ್ರಗಳಿಗೆ ಮಹದುಪಕಾರ ಮಾಡಿದ್ದಾರೆ. 

ಶ್ರೀ ಅನ್ನಮಾಚಾರ್ಯರ ಧರ್ಮಪತ್ನಿ ಸಾಧ್ವೀ ತಿಮ್ಮಕ್ಕನವರು " ಸುಭದ್ರಾ ಕಲ್ಯಾಣ " ಎಂಬ ಕಾವ್ಯವನ್ನು ರಚಿಸಿದ್ದಾರೆ. 

ನಂತರ ಶ್ರೀ ಧೂರ್ಜಟಿ, ಶ್ರೀ ಕ್ಷೇತ್ರಯ್ಯ ಮತ್ತು ಶ್ರೀ ರಾಮದಾಸು ಅವರುಗಳು ಪ್ರಮುಖರು. 

ಶ್ರೀ ಧೂರ್ಜಟಿ ಕೃಷ್ಣದೇವರಾಯನ ಆಸ್ಥಾನ ವಿದ್ವಾಂಸರೆಂದು ನಂಬಲಾಗಿದೆ. 

ಅವರು " ಕಾಳಹಸ್ತೇಶ್ವರ ಮಹಾತ್ಮ್ಯೇ " ಮತ್ತು " ಶ್ರೀ ಕಾಳಹಸ್ತೇಶ್ವರ ಶತಕ " ಗಳನ್ನು ರಚಿಸಿದ್ದಾರೆ. 

ಶ್ರೀ ಕ್ಷೇತ್ರಯ್ಯರ ಕೀರ್ತನೆಗಳು ಸಂಗೀತ - ನೃತ್ಯ ಕ್ಷೇತ್ರಗಳೆರಡನ್ನೂ ಶ್ರೀಮಂತಗೊಳಿಸಿದವು. ಇವರು ತಮ್ಮ ಕೀರ್ತನೆಗಳಲ್ಲಿ ಮಧುರ ಭಾವಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. 

ಇವರ ಕಾಲ ಕ್ರಿ ಶ 1600 - 1680.

ಶ್ರೀ ರಾಮದಾಸರ ಪದಗಳಲ್ಲಿ ಭಕ್ತಿಯ ತನ್ಮಯತೆ ಇದೆ. ಧನ್ಯತಾ ಭಾವ ಸಮರ್ಪಣೆ ಇದೆ. ಶ್ರೀ ರಾಮನೊಂದಿಗೆ ಪ್ರೀತಿಯಿಂದ ಗೆಳೆಯನಂತೆ ಮಾತನಾಡಬಲ್ಲ; ಮಗುವಿನಂತೆ ಮುನಿಸಿಕೊಳ್ಳಬಲ್ಲ ಅದ್ಭುತ ಕವಿ ಶ್ರೀರಾಮದಾಸು. ಕಾಲ ಕ್ರಿ ಶ 1620 - 1680.

ಶ್ರೀ ತ್ಯಾಗರಾಜರು ನಾದಯೋಗಿಯಾಗಿ ಭಕ್ತಿಯ ತರಂಗವನ್ನು ಮನೆಮನೆಗೂ ಮುಟ್ಟಿಸಿದರು. ಅವರು ಮುಗ್ಧ ಭಕ್ತರು. ಇವರು " ನಳ ಚರಿತ್ರೆ " ಮತ್ತು " ಪ್ರಹ್ಲಾದ ಚರಿತ್ರೆ " ಎಂಬ ಎರಡು ಯಕ್ಷಗಾನಗಳನ್ನು ರಚಿಸಿದ್ದಾರೆ ಹಾಗೂ ಅನೇಕ ಭಕ್ತಿ ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಕಾಲ ಕ್ರಿ ಶ 1767 - 1847.

ಶ್ರೀ ಪೋತನಾಮಾತ್ಯರು " ಆಂಧ್ರ ಮಹಾಭಾಗವತ " ವನ್ನು ರಚಿಸಿದರು. ಇವರ ಭಾಗವತ ಪ್ರತಿಯೊಬ್ಬರ ಬಾಯಲ್ಲೂ ನಲಿದಾಡುತ್ತಿದೆ. ತೆಲುಗು ಭಕ್ತಿ ಸಾಹಿತ್ಯದಲ್ಲಿ ಇವರಿಗೆ ವಿಶಿಷ್ಟವಾದ ಸ್ಥಾನವಿದೆ. ಕಾಲ ಕ್ರಿ. ಶ 1450 - 1510.

ಆತುಕೂರಿ ಮೊಲ್ಲ ಎಂಬ ಹೆಣ್ಣು ಮಗಳು ತೆಲುಗು ಮಹಾಕವಿ ಶ್ರೀ ತಿಕ್ಕನ ಸೋಮಯಾಜಿಯಾ ವರ ಪ್ರಸಾದದಿಂದ ತಿಳಿಯಾದ ತೆಲುಗಿನಲ್ಲಿ " ರಾಮಾಯಣ " ವನ್ನು ರಚಿಸಿದ್ದಾಳೆ. ಕಾಲ ಕ್ರಿ ಶ 1440 - 1530.

" ಮಹಾರಾಷ್ಟ್ರದಲ್ಲಿನ ಭಕ್ತಿ ಪಂಧ "

ಕರ್ನಾಟಕದ ಭಾಗವತ ಭಕ್ತಿಯೇ ಮಹಾರಾಷ್ಟ್ರದಲ್ಲಿ ಸಂತರಾದ ಶ್ರೀ ಜ್ಞಾನೇಶ್ವರ, ಶ್ರೀ ತುಕಾರಾಮ, ಶ್ರೀ ನಾಮದೇವ ಮೊದಲಾದವರಿಗೆ ಸ್ಫೂರ್ತಿ ನೀಡಿತು.

 ಇವರೆಲ್ಲರಿಗೂ ಪಂಢರಾಪುರವೇ ಕಾರ್ಯ ಕ್ಷೇತ್ರವಾಗಿತ್ತು. ಮರಾಠಾ ಸಂತರಲ್ಲಿ ನಾಥಾ ಪಂಥೀಯರೂ, ಮಹಾನುಭಾವ ಪಂಥೀಯರೂ ಹಾಗೂ ವಾರ್ಕರೀ ಪಂಥೀಯರೂ ಎಂಬ ಮೂರು ವಿಧಗಳಿವೆ. 

ವಾರ್ಕರೀ ಪಂಥದವರು ಭಾಗವತ ಸಂಪ್ರದಾಯಕ್ಕೆ ಸೇರಿದ ಅದ್ವೈತಿಗಳು. 

ಮಹಾನುಭಾವ ಪಂಥವು 12ನೇ ಶತಮಾನದಲ್ಲಿ ಶ್ರೀ ಚಕ್ರಧರ ಸ್ವಾಮಿಯಿಂದ ಆರಂಭಗೊಂಡಿತು. 

ಇವರು ಮೂರ್ತಿ ಪೂಜೆಯನ್ನೂ, ವೇದ ಪ್ರಾಮಾಣ್ಯವನ್ನೂ ಒಪ್ಪುವುದಿಲ್ಲ. " ಭಗವದ್ಗೀತೆ " ಇವರಿಗೆ ಮಾನ್ಯವಾದುದು.

 ಹೆಣ್ಣು, ಗಂಡು ಈ ಪಂಥಕ್ಕೆ ಸೇರಿ ಮೋಕ್ಷ ಪಡೆಯಬಹುದೆಂಬ ನಂಬಿಕೆ ಇವರಲ್ಲಿದೆ. 

ನಾಥ ಪಂಥೀಯ ಮೂಲ ಪುರುಷ ಶ್ರೀ ಆದಿನಾಥ. ಅವರಿಂದ ಮತ್ಸೈಂದ್ರನಾಥ, ಗೋರಕನಾಥ, ನಿವೃತ್ತಿನಾಥ ಮೊದಲಾಗಿ ಶ್ರೀ ಜ್ಞಾನದೇವನ ವರೆಗೆ ಈ ಪರಂಪರೆ ನಡೆದು ಬಂದಿದೆ. 

ಶ್ರೀ ತುಕಾರಾಮರು ಶ್ರೀ ಜ್ಞಾನೇಶ್ವರರಿಂದ ಪ್ರಭಾವಿತರಾದವರು. 

ಶ್ರೀ ಜ್ಞಾನೇಶ್ವರ, ಶ್ರೀ ನಾಮದೇವ, ಶ್ರೀ ಏಕನಾಥ, ಶ್ರೀ ತುಕಾರಾಮ ಮತ್ತು ಶ್ರೀ ರಾಮದಾಸರನ್ನು ಮಹಾರಾಷ್ಟ್ರದಲ್ಲಿ " ಸಾಧು ಪಂಚಾಯತನ " ಎಂದು ಕರೆಯುತ್ತಾರೆ. 

" ಶ್ರೀ ನಾಮದೇವ "

Sant Namadev or Namadeo or Namadeva or Bhagat Namdeo is a poet - Saint from the Varkari sect of Hinduism. He is also venerated in Sikhism. He was born on October 29, 1270 in the State of Maharashtra, village of Narasi - Bamani in Hingoli District ( A D 1270 - 1350 ).

" ಶ್ರೀ ಜ್ಞಾನೇಶ್ವರ "

ಇವರು ಸಂಸ್ಕೃತ ಪಂಡಿತರಾಗಿದ್ದು ಸಂಸ್ಕೃತ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಮಹದುಪಕಾರ ಮಾಡಿದ್ದರೆ. ಇವರ ಕಾಲ ಕ್ರಿ ಶ  1275 - 1296.

" ಶ್ರೀ ರಾಮದಾಸು "

" ದಾಸಬೋಧೆ " ಯನ್ನು ಬರೆದ ಶ್ರೀ ರಾಮದಾಸರಿಗೆ ರಾಷ್ಟ್ರದ ಹಿತ, ಅಭ್ಯುದಯ ಪ್ರಮುಖವಾಗಿತ್ತು. ನಿದ್ರಿಸುತ್ತಿದ್ದ ಸಮಾಜವನ್ನು ಅವರು ಎಚ್ಚರಿಸುತ್ತಾ ಮೊದಲು ಹರಿಕಥೆ ಕೇಳುವುದೂ; ಎರಡೆನೆಯದು ಒಳ್ಳೆಯ ರೀತಿಯ ರಾಜಕಾರಣ, ಮೂರನೆಯದಾಗಿ ಸರ್ವ ವಿಷಯಗಳಲ್ಲಿಯೂ ಜಾಗ್ರತೆಯಿಂದ ಇರುವುದು ಎಂದು ಅಂದಿನ ಯುವ ಜನತೆಯನ್ನು ಎಚ್ಚರಿಸಿದರು. ಇವರ ಕಾಲ ಕ್ರಿ ಶ 1606 - 1682. 

" ಶ್ರೀ ತುಕಾರಾಂ "

ಇವರು ಮಹಾರಾಷ್ಟ್ರದ ಮತ್ತೊಬ್ಬ ಭಾಗವತ ಕವಿ. ಶ್ರೀ ಜ್ಞಾನೇಶ್ವರರಿಂದ ಬಹುವಾಗಿ ಪ್ರಭಾವಿತರಾದವರು. ಇವರ ಕಾಲದಲ್ಲಿ " ವಿಠ್ಠಲ ಭಕ್ತಿ " ತನ್ನ ಪರಾಕಾಷ್ಠೆಯನ್ನು ಮುಟ್ಟಿತು. ಇವರು ಏಕಾಂತ ಭಕ್ತಿಯ ಮೇಲ್ಮೆಯನ್ನು ಅಭಂಗಗಳಲ್ಲಿ ವರ್ಣಿಸಿದ್ದಾರೆ. ಇವರ ಕಾಲ ಕ್ರಿ ಶ 1577 - 1650.

ಮಹಾರಾಷ್ಟ್ರದ ಸಂತರೆಲ್ಲಾ ಅದ್ವೈತ ಭಕ್ತಿ ಪರಂಪರೆಗೆ ಸಂಬಂಧಿಸಿದವರು. ಮಾರಾಠಿ ಭಕ್ತಿ ಸಾಹಿತ್ಯದಲ್ಲಿ ಸಂತರು ಮಾಡಿದ ಸಾಧನೆಯನ್ನು ಶ್ರೀ ತುಕಾರಮರ ಶಿಷ್ಯ ಬಹಿಣ ಹೀಗೆ ಹೇಳುತ್ತಾರೆ.. 

ಶ್ರೀ ಜ್ಞಾನದೇವರು ಭಾಗವತ ಮಂದಿರಕ್ಕೆ ಹಾಕಿದ ಅಡಿಪಾಯವನ್ನು ಶ್ರೀ ರಾಮದೇವರು ವಿಸ್ತರಿಸಿದರು. 

ಶ್ರೀ ಏಕನಾಥ ಅವರು ಕಂಬಗಳನ್ನು ಕೊಟ್ಟರು. 

ಶ್ರೀ ತುಕಾರಾಮ ಅವರು ದೇವಾಲಯಕ್ಕೆ ಕಲುಶವನ್ನು ಇಟ್ಟರು. 

ಸಂತರಾದ ಗೋರಕುಂಬಾರ, ಸೋನಾನಾವಿ, ಚೌಕಾಮೇಳಾ ಇವರೆಲ್ಲಾ ಬದುಕಿನ ಅನುಭವಕ್ಕೆ ಹುಚ್ಚಿನ ಪ್ರಾಶಸ್ತ್ಯ ಕೊಟ್ಟರು. 

ಸಾಮತವಾಳಿ ಎಂಬ ಸಂತ ವೃತ್ತಿಯಲ್ಲಿ ಒಕ್ಕಲಿಗನಾಗಿದ್ದು ತನ್ನ ತೋಟದಲ್ಲಿ ಬೆಳೆದಿದ್ದ ಉಳ್ಳಾಗಡ್ಡಿ, ಮೂಲಂಗಿಗಳಷ್ಟೇ ಸಹಜವಾಗಿ ವಿಠ್ಠಲನ್ನು ಕಾಣುತ್ತಿದ್ದನು. 

" ಶ್ರೀ ಏಕನಾಥ "

Sant Eknath was a prominent Marathi Saint, Scholar and religious Poet. In the development od Marathi Literature, Sant Eknath is seen as a bridge between the towering predecessors Dnyaneshwara & Namadeva. ( AD 1533 - 1599 ).

" ಶ್ರೀ ಜಯದೇವ "

Sri jayadeva was a Sanskrit Poet circa 1200 AD. He is most known for his composition, the epic poem Gita Govinda, Which depictsthe devine love of Krishna - an avatar of Vishnu an his consort, Radha. 

" ಶ್ರೀ ವಲ್ಲಭಾಚಾರ್ಯರು "

ಇವರು ಪುಷ್ಟಿ ಮಾರ್ಗದ ಪ್ರವರ್ತಕರು. ಇವರು ಮೂಲತಃ ಆಂಧ್ರದವರು. ವೈಷ್ಣವ ತತ್ತ್ವವನ್ನೇ ಅನುಸರಿಸಿದರೂ ವೈದಕ ಕರ್ಮಾನುಷ್ಠಾನಗಳಿಲ್ಲದೇ ಭಗವಂತನ ಅನುಗ್ರಹ ಪಡೆಯಬಹುದೆಂದರು. 

ಅನನ್ಯ ಭಕ್ತಿಯಿಂದ ಶ್ರೀ ಕೃಷ್ಣನಿಗೆ ಶರಣಾದರೆ ಸಾಕು. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಾರವಾದ ಭಕ್ತಿ ಪಂಥದಲ್ಲಿ ಸಂನ್ಯಾಸ ತೆಗೆದುಕೊಳ್ಳದೇ ಪರಮಾತ್ಮನಿಗೆ ದಾಸನಾದರೆ ಸಾಕು ಎಂಬ ನಂಬಿಕೆ ಇದೆ. 

ಶ್ರೀ ವಲ್ಲಭಾಚಾರ್ಯರ ಮಗನಾದ ಶ್ರೀ ವಿಠ್ಠಲನಾಥರಿಂದ ಈ ಪರಂಪರೆ ಬೆಳೆಯಿತು. 

ಕಾಲಾಂತರದಲ್ಲಿ ಶ್ರೀ ಕೃಷ್ಣ ಭಕ್ತಿಯೊಂದಿಗೆ ರಾಧೆಯ ಭಕ್ತಿಯೂ ಸೇರಿಕೊಂಡಿತು. 

ಶ್ರೀ ವಲ್ಲಭಾಚಾರ್ಯರ ಕಾಲ ಕ್ರಿ ಶ 1479 - 1534.

" ಶ್ರೀ ಚೈತನ್ಯರು "

ರಾಧಾ ಕೃಷ್ಣರ ಮಧುರ ಅನುರಾಗವನ್ನು ಬಹುವಾಗಿ ಪ್ರಚುರ ಪಡಿಸಿದರು. ಪಶ್ಚಿಮ ಬಂಗಾಳದಲ್ಲಿ ಹುಟ್ಟಿದವರು ಶ್ರೀ ಚೈತನ್ಯರು. ತುಂಬಾ ರೂಪವಂತರಾದ್ದರಿಂದ ಅವರನ್ನು " ಗೌರಾಂಗರ " ಎಂದು ಕರೆಯಲಾಗುತ್ತಿತ್ತು. ಇವರು ಯಾವುದೇ ಪುಸ್ತಕ ಬರೆಯದಿದ್ದರೂ ಇವರ ಶಿಷ್ಯರಾದ ರೂಪ ಗೋಸ್ವಾಮಿ, ಸನಾತನ ಗೋಸ್ವಾಮಿ ಮೊದಲಾದವರು ಚೈತನ್ಯ ಭಕ್ತಿ ವ್ಯಾಖ್ಯೆಯನ್ನು, ಭಕ್ತಿ ಪಂಥವನ್ನು ಬೆಳೆಸಿದರು. ಈ ಪಂಥಕ್ಕೆ ಸೇರಿದವರೇ " ವಾದರತ್ನಾವಲೀ ಗ್ರಂಥಕಾರರೂ, ಶ್ರೀ ರಾಜೇಂದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ವಿಷ್ಣುದಾಸಾಚಾರ್ಯರು " . ಶ್ರೀ ಚೈತನ್ಯರ ಕಾಲ ಕ್ರಿ ಶ 1486 - 1534.

" ಶ್ರೀ ಕಬೀರದಾಸ "

ಇವರು ಹಿಂದಿ ಸಾಹಿತ್ಯ ಚರಿತ್ರೆಯಲ್ಲಿ ಧಾರ್ಮಿಕ ನೆಲೆಯಲ್ಲಿಯೂ ಸಾಮಾಜಿಕ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಎತ್ತಿಕೊಂಡು ಕಾವ್ಯ ಕಟ್ಟಿದ ಶ್ರೇಷ್ಠಕವಿ. ಇವರ ಕಾಲ ಕ್ರಿ ಶ 1440 - 1518.

" ಶ್ರೀ ತುಳಸೀದಾಸರು "

ಇವರು " ರಾಮಚರಿತ ಮಾನಸ " ದ ಕರ್ತೃಗಳು. ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಇವರ ಕಾಲ ಕ್ರಿ ಶ 1497 - 1623.

" ಶ್ರೀ ಸೂರದಾಸರು "

ಇವರು ಶ್ರೀ ಕೃಷ್ಣ ಗೋಪಿಯರ, ಶ್ರೀ ಕೃಷ್ಣ ರಾಧೆಯರ ಕುರಿತು ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಕೀರ್ತನೆಗಳು ವಾತ್ಸಲ್ಯ ರಸ ಭರಿತವಾಗಿವೆ. ಇವರ ಕಾಲ ಕ್ರಿ ಶ 1478 - 1573.

" ಕೃಷ್ಣ ಭಕ್ತೆ ಮೀರಾಬಾಯಿ "

ಇವಳು ರಾಜ ಭಾಗವನ್ನು ತಿರಸ್ಕರಿಸಿ ವಿರಾಗಿಣಿಯಾಗಿ ಭಕ್ತಿ ಮಾರ್ಗದಲ್ಲಿ ಸಿದ್ಧಿಯನ್ನು ಪಡೆದವಳು. ವಿರಹ ಪೂರ್ಣವಾದ ಮಧುರ ಭಕ್ತಿಯ ಸಾಧಕಿಯಾದ ಮೀರಾಬಾಯಿ ಶ್ರೀ ಕೃಷ್ಣನ ಭಕ್ತಳು. ಈಕೆಯ ಕಾಲ ಕಿ ಶ 1498 - 1547.

" ಶ್ರೀ ರಮಾನಂದರು "

ಇವರು ವಿಶಿಷ್ಟಾದ್ವೈತಿಯಾಗಿ ಜಾತಿಯ ಕಟ್ಟುಪಾಡುಗಳಿಗೆ ಸಿಲಿಕದೇ ಎಲ್ಲರನ್ನೂ ಸಮಾನ ಭಾವದಿಂದ ಕಾಣುತ್ತಿದ್ದರು. ಇವರ ಶಿಷ್ಯರನ್ನು ನೋಡಿದರೆ ಸಾಕು ಇವರ ವಿಶಾಲ ಮನಸ್ಸಿನ ಅರಿವಾಗುತ್ತದೆ. ನೇಯ್ಗೆಯವನಾದ ಶ್ರೀ ಕಬೀರ, ರಾಜಪುತರ ಮುಖಂಡನಾದ ಪೀಪಾ. ಕ್ಷೌರಿಕನಾದ ಸೇನಾ, ಚಮ್ಮಾರನಾದ ರೈದಾಸ. ಹೀಗೆ ಸಮಾಜದ ವಿವಿಧ ವರ್ಗಗಳಿಂದ ಬಂದ ಜನ ಇವರ ಶಿಷ್ಯರಾಗಿದ್ದರು. ಶ್ರೀ ರಮಾನಂದರ ಕಾಲ ಕ್ರಿ ಶ 1400 - 1480.

" ಕರ್ನಾಟಕ ಭಕ್ತಿ ಸಾಹಿತ್ಯ ಪರಂಪರೆ " -

 ಮುಂದುವರೆಯುವುದು.... 

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)