" ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು "
"ದಿನಾಂಕ : 14.01.2025 ಮಂಗಳವಾರ - " ಮಕರ ಸಕ್ರಾಂತಿ ಪರ್ವ ಕಾಲ "
ಮಾನವ ವಿಜ್ಞಾನಕ್ಕೆ ಸರ್ವಸ್ವವೂ ವೇದವೇ ಆಗಿದೆ.
ವೇದ ವಾಙ್ಞಯದಲ್ಲಿ ಜ್ಯೋತಿಷ ಶಾಸ್ತ್ರವು ಮುಕುಟಪ್ರಾಯವಾಗಿದೆ.
ವಿಜ್ಞಾನವು ಎಷ್ಟು ಮುಂದೆವರೆದರೂ [ ವಿಕಸಿತವಾದರೂ ] ಭೂತ - ಭವಿಷತ್ - ವರ್ತಮಾನ ಕಾಲಗಳಿಗೆ ಜ್ಯೋತಿಷ ಶಾಸ್ತ್ರವು ಮಾರ್ಗದರ್ಶಕವಾಗಿವೆ.
ಸಕಲ ಚರಾಚರಾ ಸೃಷ್ಟಿ ಯಾವತ್ತೂ ಶ್ರೀ ಹರಿಯ ಅಧೀನವಾಗಿವೆ.
ಈ ಸೃಷ್ಟಿಯಲ್ಲಿಯ ಜಲಚರ - ಭೂಚರ ಪ್ರಕೃತಿಯಲ್ಲಿರುವ ಸಮಸ್ತ ಪ್ರಾಣಕೋಟಿಯೂ ಪರಬ್ರಹ್ಮನಾದ ಶ್ರೀ ಹರಿಯ ನಿರ್ಣಯವಾಗಿದೆ.
ವೇದದ ಷದಾಂಗದಲ್ಲಿ " ಜ್ಯೋತಿಷ " ಶಾಸ್ತ್ರವು ಅತ್ಯಂತ ಮುಖ್ಯವಾಗಿದೆ.
" ವೇದದ ಅಂಗಗಳು "
ಶಿಕ್ಷಾವ್ಯಾಕರಣಃ ಛಂದೋ
ನಿರುಕ್ತ೦ ಜ್ಯೋತಿಷಂ ತಥಾ ।
ಕಲ್ಪಶ್ಚೇತಿ ಷಡಾ೦ಗಾನಿ
ವೇದಸ್ಯಾಹುರ್ಮನೀಷೀಣಃ ।।
ಸರ್ವೇಂದ್ರಿಯಾಣಾಂ
ನಯನಂ ಪ್ರಧಾನಂ ।
ಷಟ್ ಶಾಸ್ತ್ರಾಣಾಂ
ಜ್ಯೋತಿಷಂ ಪ್ರಧಾನಂ ।।
ಜ್ಯೋತಿಷ ಶಾಸ್ತ್ರದ ಪ್ರಕಾರ " ಮಕರ ಸಂಕ್ರಾಂತಿ " ಗೆ ವಿಶೇಷತೆ ಉಂಟು.
" ಶ್ರೀ ಸೂರ್ಯ ಭಗವಾನ್ ಮಕರ ರಾಶಿಯಲ್ಲಿ ಪ್ರವೇಶ ಮಾಡುವ ಶುಭದಿನ ಸಂಕ್ರಾಂತಿಯೆಂದು ಕರೆಯಲ್ಪಡುತ್ತದೆ.
ಮಕರ ಹಾಗೂ ಕುಂಭರಾಶಿಗಳು ಉತ್ತರ ದಿಕ್ಕನ್ನು ಪ್ರತಿನಿಧಿಸುತ್ತದೆ.
ಉತ್ತರೋತ್ತರ ಅಭಿವೃದ್ಧಿಯನ್ನು ಕೊಡುವ ಅಯನ " ಉತ್ತರಾಯನ ".
ಉತ್ತರಾಯನದ ಪ್ರಾರಂಭದ ದಿನವೇ " ಸಂಕ್ರಾಂತಿ "
ಈ ಸಂಕ್ರಾಂತಿಯಂದು " ಎಳ್ಳು - ಬೆಲ್ಲ " ನೀಡುವುದು ಸಂಪ್ರದಾಯವಾಗಿದೆ.
" ಎಳ್ಳು - ಬೆಲ್ಲದ ವೈಶಿಷ್ಟೇ "
ಸಕಲ ಜೀವ ರಾಶಿಗಳ ಆರೋಗ್ಯಕ್ಕೆ ಸೂರ್ಯನ ಬೆಳಕು ಅವಶ್ಯಕ.
ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಕಾಲವೇ ಮಕರ ಸಂಕ್ರಮಣ.
ಮಾಗಿಯ ಚಳಿಗೆ ನಡುಗಿದ್ದ ದೇಹಕ್ಕೆ ಉತ್ತರಾಯಣ ಕಾಲದಲ್ಲಿ ಬೀರುವ ಸೂರ್ಯನ ತೀಕ್ಷ್ಣವಾದ ಬೆಳಕು ಹೊಸ ಹುರುಪನ್ನು ತುಂಬಿ ನಮ್ಮಲ್ಲಿ ಮತ್ತಷ್ಟು ಲವಲವಿಕೆ ತುಂಬುವುದು ಹಾಗೂ ಆರೋಗ್ಯ ಕೂಡ ಉತ್ತಮವಾಗುವುದು.
ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಈ ಕಾಲದಲ್ಲಿ ಸೂರ್ಯನು ತೀಕ್ಷ್ಣವಾಗಿ ಉರಿಯುತ್ತಾನೆ.
ಈ ಸಮಯದಲ್ಲಿ ಹಗಲಿನ ಸಮಯ ಹೆಚ್ಚಾಗಿದ್ದು, ಇರುಳಿನ ಸಮಯ ಕಡಿಮೆ ಇರುತ್ತದೆ.
ಇದರ ಜೊತೆಗೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮವೂ ಬದಲಾದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದ್ದರಿಂದ ಎಳ್ಳು ಬೆಲ್ಲ ಈ ಸಮಯದಲ್ಲಿ ತಿಂದರೆ ತುಂಬಾ ಒಳ್ಳೆಯದು.
ಬೆಲ್ಲ ದೇಹದ ಉಷ್ಣತೆ ಕಾಪಾಡುತ್ತದೆ ಉತ್ತರಾಯಣ ಕಾಲದಲ್ಲಿ ಸೂರ್ಯನ ಕಿರಣಗಳು ತುಂಬಾ ತೀಕ್ಷ್ಣವಾಗಿರುತ್ತದೆ.
ಎಳ್ಳು ಸೂರ್ಯನ ಕಿರಣಗಳ ತೀಕ್ಷ್ಣತೆಗೆ ಮೈ ಉಷ್ಣತೆ ಹೆಚ್ಚಾಗುತ್ತದೆ,
ಈ ಸಮಯದಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ಎಳ್ಳು ಸಹಕಾರಿ.
ಬೆಲ್ಲದಲ್ಲಿ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಎಳ್ಳು ಬೆಲ್ಲ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಎಳ್ಳಿನಲ್ಲಿ ಇರುವಂತಹ ಪ್ರೋಟೀನ್ ಸ್ನಾಯುಗಳ ಕೋಶ ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಸರಿಪಡಿಸುವುದು.
ಇದು ಕೋಶಗಳ ಸಂಪೂರ್ಣ ಬೆಳವಣಿಗೆ, ಶಕ್ತಿಯ ಮಟ್ಟ, ಆರೋಗ್ಯವನ್ನು ಸುಧಾರಿಸುವುದು.
ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದು.
ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಎಳ್ಳು-ಬೆಲ್ಲ ಸಹಕಾರಿ.
ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವ ಗುಣ ಎಳ್ಳು ಬೆಲ್ಲದಲ್ಲಿದೆ.
ಇದು ಲಿವರ್‌ನ ಕ್ಲೀನ್ ಮಾಡಿ (ಲಿವರ್‌ನಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವುದು) ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.
ಎಳ್ಳು, ಬೆಲ್ಲದಲ್ಲಿರುವ ಸತುವಿನಂಶ ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಎಳ್ಳು ಬೆಲ್ಲ ಸಹಕಾರಿ.
ಎಳ್ಳಿನಲ್ಲಿರುವ ಕೊಬ್ಬಿನಂಶ ಹಾಗೂ ಬೆಲ್ಲದಲ್ಲಿರುವ ಕ್ಯಾಲೋರಿಯಂಶ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
ಎಳ್ಳು ವಾತದೋಷಮ ಕಫ ದೋಷ ನಿವಾರಣೆಗೆ ಸಹಕಾರಿ.
ತ್ವಚೆಯ ಹೊಳಪು ಹೆಚ್ಚಿಸುತ್ತದೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.
ಎಳ್ಳು ದೇಹಕ್ಕೆ ಶಕ್ತಿಯನ್ನು ನೀಡಿದರೆ, ಎಳ್ಳನ್ನು ಶಕ್ತಿಯಾಗಿ ಪರಿವರ್ತಿಸುವ ಇಂಧನ ಬೆಲ್ಲ.
ಇನ್ನು ಬೆಲ್ಲದಲ್ಲಿ ಆರೋಗ್ಯಕರ ಕಾರ್ಬೋಹೈಡ್ರರೇಟ್ಸ್ ಇದೆ.
ಇನ್ನು ಎಳ್ಳು ಬೆಲ್ಲದಲ್ಲಿ ಕೊಬ್ಬರಿ ಬಳಸಲಾಗುವುದು.
ಇದರಿಂದ ದೇಹಕ್ಕೆ ಅಗ್ಯತವಾದ ಕೊಬ್ಬಿನಂಶ ದೊರೆಯುತ್ತದೆ.
ಬೆಲ್ಲ ದೇಹದ ಬಿಸಿಯನ್ನು ಹೆಚ್ಚಿಸುತ್ತದೆ.
ಇವೆರಡನ್ನೂ ಬೆರೆಸಿ ಮಾಡಿದ ಉಂಡೆಗಳ ಸೇವನೆಯಿಂದ ದೇಹಕ್ಕೆ ಬಿಸಿ ಮತ್ತು ಶಕ್ತಿ ಎರಡೂ ದೊರಕುತ್ತವೆ.
ತನ್ಮೂಲಕ ದೇಹ ಬೆಚ್ಚಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇದೇ ಕಾರಣಕ್ಕೆ ಎಳ್ಳು ಮತ್ತು ಬೆಲ್ಲವನ್ನು ಬೇಯಿಸಿ ಉಂಡೆ ಮಾಡಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸೇವಿಸಲಾಗುತ್ತದೆ.
ಮಲಗುವಾಗಲಿ ಏಳುವಾಗಲಿ ।
ಕುಳಿತು ಮಾತಾಡುತಲಿ ಮನೆಯೊಳು ।
ಕೆಲಸಗಳ ಮಾಡುತಲಿ -
ಮೈದೊಳೆವಾಗ ಮೆಲುವಾಗ ।।
ಕಲುಷ ದೂರನ ಸಕಲ ಠಾವಿಲಿ ।
ತಿಳಿಯೆ ತತ್ತನ್ನಾಮ ರೂಪವ ।
ಬಳಿಯಲಿಪ್ಪನು ಒಂದರಕ್ಷಣ
ಬಿಟ್ಟಗಲನವರ ।। 13/3 ।।
ನಾಡಿನ ಸಮಸ್ತ ಸುಜನರಿಗೆ...
ಪರಮ ಪವಿತ್ರವಾದ ಉತ್ತರಾಯನ ಪರ್ವ ಕಾಲದ ಮಕರ ಸಂಕ್ರಾಂತಿಯು -
"ಆಯುರಾರೋಗ್ಯ - ಸುಖ - ಶಾಂತಿ - ನೆಮ್ಮದಿ - ಕೀರ್ತಿ -ಯಶಸ್ಸನ್ನು ದಯಪಾಲಿಸಲಿ " ಎಂದು ಶ್ರೀ ಹರಿ ವಾಯು ಗುರುಗಳು - ಹರಿದಾಸರಲ್ಲಿ ಪ್ರಾರ್ಥಿಸುತ್ತಾ...
" ನಾಡಿನ ಸಜ್ಜನ ಆಧ್ಯಾತ್ಮ ಬಂಧುಗಳಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು "
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ