ದಿನಾಂಕ 27-ಡಿಸೆಂಬರ್-2024ರ ಶುಕ್ರವಾರ ಪೂರ್ಣ ದಿನ, ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ, ಅಖಿಲ ಭಾರತ ಕನ್ನಡ ಕವಿಗಳ 11ನೇ ಸಮ್ಮೇಳನ ಮತ್ತು ಅಖಿಲ ಭಾರತ ಕನ್ನಡ ಕಾವ್ಯ ಪರಿಷತ್ ಉದ್ಘಾಟನೆ ಮತ್ತು ಕವಿತಾ ರಚನೆ ಸ್ಪರ್ಧೆಗೆ ಕರೆ ನೀಡಲಾಗಿದೆ.
ಕನ್ನಡ ಕಾವ್ಯ ಲೋಕದಲ್ಲಿ ಈಗಾಗಲೇ, ಹತ್ತು ಜನ ಹಿರಿಯ ಕವಿಗಳ ಸಮ್ಮೇಳನಾಧ್ಯಕ್ಷತೆಯಲ್ಲಿ “ಅಖಿಲ ಕರ್ನಾಟಕ ಕವಿ ಸಮ್ಮೇಳನ” ನಡೆಯಿಸಿರುವ ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ವಿಶ್ವೇಶ್ವರಯ್ಯ ಪ್ರತಿಷ್ಠಾನಗಳು, ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ.
ಈ ಸಂದರ್ಭದಲ್ಲಿ 71ನೇ ಸಾಂಸ್ಕøತಿಕ ಪ್ರತಿಭೋತ್ಸವ ಹಾಗೂ 10ನೇ ರಾಷ್ಟ್ರೀಯ ನೃತ್ಯ ಕಲಾಮೇಳವನ್ನು ಆಯೋಜಿಸಿ, ಕನ್ನಡದ ಹೆಸರಾಂತ ಕವಿಗಳು ಮತ್ತು ಸಾಹಿತಿ ಶ್ರೀ ಮ.ಚಿ. ಕೃಷ್ಣರವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಅವರ ನೇತೃತ್ವದಲ್ಲಿ ಆಯೋಜಿಸಿದೆ. ಹಿರಿಯ ಲೇಖಕ ಮ.ಚಿ. ಕೃಷ್ಣರವರು ಈಗಾಗಲೇ ರಾಜ್ಯಮಟ್ಟದಲ್ಲಿ ಕವನ ಸಂಕಲನ, ಜೀವನ ಚರಿತ್ರೆ, ಪತ್ರಿಕಾ ಲೇಖಕ ಹೀಗೆ 100ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ.
ಸುರ್ವೆ ಕಲ್ಚರಲ್ ಅಕಾಡೆಮಿಯ ನೂತನ ಗೌರವ ಅಧ್ಯಕ್ಷರಾಗಿ ಹಿರಿಯ ರಂಗಭೂಮಿ ಕಲಾವಿದೆ ಡಾ. ಸುಮತಿಶ್ರೀ ನವಲಿ ಹಿರೇಮಠರು ಪದಗ್ರಹಣ ಮಾಡಲಿದ್ದಾರೆ.
ರಾಜ್ಯದ ಕವಿಗಳು, ನೃತ್ಯ ಕಲಾವಿದರು, ಗಾಯಕರು, ಜನಪದ ಗಾಯಕರು, ಚಿತ್ರ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಕವಿತಾ ವಾಚಕರಾಗಿ ಶ್ರೀಮತಿ ಡಿ. ನಳಿನ, ಶ್ರೀಮತಿ ಸಾವಿತ್ರಿ ಮುಜುಮ್‍ದಾರ, ಗೊರೂರು ಪಂಕಜಾ, ಶ್ರೀಮತಿ ವೀಣಾ ಮಹಂತೇಶ, ಶ್ರೀಮತಿ ಶಾಂತಾ ಕೆ. ಬಸವರಾಜ್, ಶ್ರೀ ಜಿ.ಎಸ್. ಗೋನಾಳ್, ಶ್ರೀ ಅಣ್ಣಪ್ಪ ಮೇಟಿಗೌಡ, ಶ್ರೀ ಚಂದ್ರಶೇಖರ್ ಮಾಡಲಗೇರಿ ಶ್ರೀ ಸುರೇಶ ದೇಸಾಯಿ, ಶ್ರೀ ಬೀರಪ್ಪ ಶಂಭೋಜಿ, ಶ್ರೀ ಜಯರಾಮರೈ ಕುಂಜಾಡಿರವರು ಮೇಲ್ಕಂಡ ಹಿರಿಯ ಸಾಹಿತಿಗಳ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕವನ ರಚನಾ ಸ್ಪರ್ಧೆ : 1992 ರಿಂದ ಸುರ್ವೆ ಕಲ್ಚರಲ್ ಅಕಾಡೆಮಿಯು, ಸಾಂಸ್ಕøತಿಕ ಲೋಕದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ, ಲಕ್ಷಾಂತರ ಕಲಾವಿದರಿಗೆ ವೇದಿಕೆ ನೀಡಿದೆ. ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ ಹೆಸರಿನಲ್ಲಿ, ತಲಾ ನಾಲ್ಕು ದಿನಗಳ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿಸಿ, ಇಂದಿನ ಪೀಳಿಗೆಗೆ ಅವರ ಸಾಧನೆ ಮತ್ತು ಕೃತಿಗಳ ಪರಿಚಯ ಮಾಡುತ್ತಾ ಬಂದಿದೆ.
8 ಜ್ಞಾನಪೀಠ ಪ್ರಶಸ್ತಿ ತಂದ ಮಹನಿಯರಾದ 8 ಜನ ಹಿರಿಯ ಸಾಹಿತಿಗಳು ಕುರಿತು, “ಕವಿಗಳ ಕಣ್ಣಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಮಾಲಿಕೆ” ಅಡಿಯಲ್ಲಿ ಅವರ ವ್ಯಕ್ತಿತ್ವ, ಸಾಹಿತ್ಯದ ಕೃತಿಗಳು ಮತ್ತು ಸಾಧನೆ ಕುರಿತು, ಕವಿತಾ ರಚನೆ ಸ್ಪರ್ಧೆಗೆ ಕರೆ ನೀಡಿದೆ.
ಪ್ರಸ್ತುತ ಡಿಸೆಂಬರ್ 27ರಂದು ಭಾಗವಹಿಸಿ, ಕವಿತಾ ರಚನೆ ಮಾಡಬೇಕು. ಸ್ಪರ್ಧೆಗೆ ಬಂದ ಕವಿಗಳ, ಎಲ್ಲಾ ಕವನಗಳನ್ನು 2025ರ ಸಂಕಲನದ ಪ್ರಕಟಣೆಯಲ್ಲಿ ಸೇರಿಸಲಾಗುವುದು. ಜೊತೆಗೆ ಭಾಗವಹಿಸಿದ್ದಕ್ಕಾಗಿ, ಒಂದು ವಾರದೊಳಗೆ ಫೋಟೋ ಸಮೇತ ಪ್ರಮಾಣ ಪತ್ರವನ್ನು ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಲಾಗುವುದು.
ಬೆಂಗಳೂರಿನಿಂದ ಹೊರ ಊರಿನವರು, ತಾವು ರಚಿಸಿದ ಕವನದ ಡಿಟಿಪಿ ಪ್ರತಿಯ ಜೊತೆ, ಎರಡು ಭಾವಚಿತ್ರ, ವಿಳಾಸ, ದೂರವಾಣಿ ಹಾಗೂ ಸ್ವವಿವರ ಮಾಹಿತಿ, ಆಧಾರ್ ಕಾರ್ಡ್ ಜೆರಾಕ್ಸ್‍ನೊಂದಿಗೆ, 30-ಡಿಸೆಂಬರ್ 2024ರೊಳಗೆ ಕಳುಹಿಸಬಹುದು. ಬೆಂಗಳೂರಿನಲ್ಲಿ ಭಾಗವಹಿಸುವ ಕವಿಗಳು, ಎಲ್ಲಾ ಮಾಹಿತಿಯೊಂದಿಗೆ ನಯನ ರಂಗಮಂದಿರದಲ್ಲಿ ನೊಂದಾಯಿಸಿಕೊಂಡು ಭಾಗವಹಿಸಬಹುದು.
ಪ್ರವೇಶ ಶುಲ್ಕ 200 ರೂ ಇದ್ದು, ಒಬ್ಬರಿಗೆ ಎರಡು ಕವಿತೆಗಳಿಗೆ ಮಾತ್ರ ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಲು, ಕವಿಗಳು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಮೊಬೈಲ್ ಸಂಖ್ಯೆ : 9845307327 ಕರೆ ಮಾಡಿ, ಮಾಹಿತಿ ಪಡೆದುಕೊಳ್ಳಿ. ನೋಂದಾಯಿಸಿಕೊಂಡು ಸ್ಥಳದಲ್ಲಿ ಬ್ಯಾಡ್ಜ್ ಪಡೆದುಕೊಳ್ಳಿ ಎಂದು ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.