ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ವಿಶಿಷ್ಟ ವಿನೂತನ ಕನ್ನಡ ಜಾಗೃತಿ ಅಭಿಯಾನ

varthajala
0

ಕನ್ನಡ ಮಾತಾಡೋ ಬಾಯಿಗೆ ಮಿಠಾಯಿ,ಮಾತಾಡಲಿಲ್ಲ ಅಂದ್ರೆ ಕನ್ನಡ ಕಲಿಯುವ ಪುಸ್ತಕ ಕೊಟ್ಟು ಕನ್ನಡ ಭಾಷೆ ಕಲಿಯುವಂತೆ ಕನ್ನಡ ಜಾಗೃತಿ ಅಭಿಯಾನ

ಬೆಂಗಳೂರು: ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ  ಕನ್ನಡ ಮಾತಾಡೋ ಬಾಯಿಗೆ ಮಿಠಾಯಿ, ಮಾತಾಡಿಲಿಲ್ಲ ಅಂದ್ರೆ ಕನ್ನಡ ಕಲಿಯುವ ಪುಸ್ತಕ ಕೊಡುವ ಕಾರ್ಯಕ್ರಮ.

ಉದ್ಘಾಟನೆಯನ್ನು ಚಲನಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಕನ್ನಡ ನುಡಿ ಗಾರುಡಿಗ,ಕನ್ನಡ ಪ್ರಾಧ್ಯಾಪಕ  ಕೃಷ್ಣೇಗೌಡರವರು,ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಮಾಜಿ ರಾಜ್ಯಸಭಾ ಸದಸ್ಯರುಗಳಾದ  ಎಲ್.ಹನುಮಂತಯ್ಯ, ರಾಜೀವ್ ಗೌಡ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜು, ಮಾಜಿ ಬಿಬಿಎಂಪಿ ಸದಸ್ಯ ಎಸ್.ಕೇಶವಮೂರ್ತಿರವರು ಕನ್ನಡ ಮಾತನಾಡಿದವರಿಗೆ ಸಿಹಿ ತಿನ್ನಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾವೇರಿನಗರ ದಿಂದ ಆರಂಭವಾಗಿ ಕುರುಬರಹಳ್ಳಿ ವೃತ್ತ, ಜೆ.ಸಿ.ನಗರ, ಶಂಕರಮಠದ ಮೂಲಕ ಕಿರ್ಲೋಸ್ಕರ್ ಕಾಲೋನಿ, ಕೆಂಪೇಗೌಡ ಉದ್ಯಾನವನ, ಶಕ್ತಿಗಣಪತಿನಗರ, ಸಂಜಯ್ ಗಾಂಧಿನಗರ, ಕಮಲನಗರ, ಗೃಹಲಕ್ಷ್ಮಿ ಬಡಾವಣೆ, ಕಮಲನಗರ ಮಾರ್ಕೆಟ್, ಕಸ್ತೂರಿ ಬಡಾವಣೆ, ಶಂಕರ್ ನಾಗ್ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು.

*ಸಂಗೀತ ನಿರ್ದೇಶಕ ಹಂಸಲೇಖರವರು* ಮಾತನಾಡಿ ರಾಜ್ಯದ ಎಲ್ಲ ಕಡೆ ಕನ್ನಡಮಯವಾಗಬೇಕು, ಕನ್ನಡಿಗರು ಅಯಸ್ಕಾಂತ ತರಹ, ಪರ ಭಾಷಿಗರು ಕಬ್ಬಿಣದ ಚುರುಗಳು ಇದ್ದಂತೆ ಕನ್ನಡಿಗರು ಸೆಳದುಬಿಡುತ್ತಾರೆ. ರಾಜ್ಯದಲ್ಲಿ ಕನ್ನಡದ ಸರ್ಕಾರ, ಕನ್ನಡದ ಮುಖ್ಯಮಂತ್ರಿ, ಕನ್ನಡ ರಾಮಯ್ಯರವರು ಆಗಿದ್ದಾರೆ.

ಪರಭಾಷಿಗರು ಬಂದಿದ್ದುಆಯಿತು, ಸಲಗೆ ಬೆಳಸಿಕೊಳ್ಳಲಾಯಿಕು ನೀವು ಕನ್ನಡ ಭಾಷೆ ಕಲಿಯಬೇಕು, ಕನ್ನಡಕ್ಕೆ ಜೈ ಎನ್ನಬೇಕು ಎಂದು ಹೇಳಿದರು.

*ಹೆಚ್.ಎಂ.ರೇವಣ್ಣ* ರವರು ಮಾತನಾಡಿ ಕನ್ನಡ ಭಾಷೆಗೆ ಕನ್ನಡಿಗರಿಂದಲೇ ಅಪಾಯದ ಸ್ಥಿತಿ ತಲುಪಿದೆ. ಕನ್ನಡ ಭಾಷೆಗೆ 2000ಸಾವಿರ ವರ್ಷಗಳ ಇತಿಹಾಸವಿದೆ.

ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಅದ ಎಷ್ಟು ಶ್ರೀಮಂತ ಭಾಷೆ ಎಂದು ತಿಳಿಯುತ್ತದೆ, ಕನ್ನಡಿಗರು ಕನ್ನಡ ಭಾಷೆಯನ್ನ ಕಲಿಯಬೇಕು, ಅನ್ಯ ಭಾಷಿಕರಿಗೆ ಕನ್ನಡ ಕಲಿಸಬೇಕು ಎಂದು ಹೇಳಿದರು.



*ಎಲ್.ಹನುಮಂತಯ್ಯ* ಕನ್ನಡದ ಮನಸ್ಸುಗಳು ಒಂದಾಗಬೇಕು.ನಮ್ಮ ಭಾಷೆ ಉಳಿಸಿಕೊಳ್ಳಲು ಅಪೂರ್ವವಾದ ಕಾರ್ಯಕ್ರಮ.ಯಾವುದೇ ರಾಜ್ಯದಲ್ಲಿ ನೆಲಸಿರುವ ವ್ಯಕ್ತಿಗಳು ಅ ರಾಜ್ಯದ ಭಾಷೆ ಕಲಿಯಬೇಕು ಮತ್ತು ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿದೆ,ಕನ್ನಡ ಚಿನ್ನದ ಭಾಷೆಯಾಗಿದೆ.

ಕನ್ನಡಿಗರು ಬಹಳ ಹೃದಯವುಳ್ಳವರು ಕನ್ನಡಿಗರು ಎಲ್ಲರಿಗೂ ಅವಕಾಶ ನೀಡುತ್ತಾರೆ.

ಅನ್ಯ ಪರಿಭಾಷಿಕರ ಹತ್ತಿರ ಕನ್ನಡದಲ್ಲಿ ಮಾತನಾಡಬೇಕು, ಅವರು ಮಾಡುವುದಕ್ಕೆ ಬಂದಿಲ್ಲ ಅಂದರೆ  ಅವರಿಗೆ ಕನ್ನಡ ಭಾಷೆಯನ್ನು ಕಲಿಸಬೇಕು .ಇಂದು ನಾಳೆ ಮುಂದಿನ ಪೀಳಿಗೆಗೆ ಕನ್ನಡದ ಅರಿವು ಮೂಡಿಸಬೇಕು ಎಂದು ಹೇಳಿದರು.

*ಪ್ರೋ.ಕೃಷ್ಣೆಗೌಡ* ಕನ್ನಡಿಗರು ಅಭಿಮಾನಿಗಳು, ಹೃದಯವಂತರು ಕನ್ನಡಿಗರ ತರಹ ಯಾವ ದೇಶದಲ್ಲಿಯೊ ಇಲ್ಲ. ಭಾಷೆಯನ್ನು ಹೇಗೆ ಪ್ರೀತಿಸಬೇಕು ಎಂದು ಕನ್ನಡಿಗರನ್ನ ನೋಡಿ ಕಲಿಯಬೇಕು. ಬೇರೆ ಭಾಷಿಗರು ಇಲ್ಲಿ ಬಂದು ನೆಲಸಿದ್ದಾರೆ ಅವರು ಮತ್ತು ಅವರ ಮಕ್ಕಳು, ಮೊಮ್ಮಕ್ಕಳು ಕನ್ನಡ ಕಲಿಯಬೇಕು .

1956 ಏಕೀಕರಣದ ಶುಭ ಸಂದರ್ಭದಲ್ಲಿ ಕಾಳಿಂಗರಾಯರು ಅಂದು ಹಾಡಿದ ಕನ್ನಡ ಭಾಷೆ ಹಾಡು ಉದಯವಾಗಲಿ ನಮ್ಮ ಚೆಲುವ  ಕನ್ನಡ ನಾಡು ಎಂದು ಹಾಡಿ ನಾಡಿನ ಜನರನ್ನು   ರೋಮಾಂಚನ ಗೊಳಿಸಿದರು.

ಪ್ರಪಂಚದ ಸುಂದರ ಭಾಷೆ ಎಂದರೆ ಕನ್ನಡ, ವಿನೋಭ ಭಾವೆರವರು ಕನ್ನಡ ಭಾಷೆಯನ್ನು ಲಿಪಿಗಳ ರಾಣಿ ಎಂದು ಕರೆದರು.

ಅಂಗ್ಲ ಭಾಷೆಯಲ್ಲಿ ಅಪ್ರಬುದ್ದ ಭಾಷೆ ವಿಶ್ವಮಾನ್ಯ ಮಾಡಿದರು, ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದೆ ಅದರು ಜನರು ಮಾತನಾಡುವುದಿಲ್ಲ.

ಇಲ್ಲಿಗೆ ಬಂದ ಪರಭಾಷಿಕರು ಕನ್ನಡ ಕಲಿಯಬೇಕು. ಕನ್ನಡ ನಾಡಿನಲ್ಲಿ ಬೇಲೂರು, ಹಂಪೆ , ವಿವಿಧ ಪ್ರಾಚೀನ ಕಲೆಯನ್ನು ಕೆತ್ತಿದವರು ಕನ್ನಡಿಗರು.ವಿಶ್ವದ ಶೇಷ್ಠ ನಟ ಡಾ.ರಾಜ್ ಕುಮಾರ್ ರವರು. ಕನ್ನಡ ಎಂದರೆ ಜೀವನ ವಿಧಾನ. ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಿರಿ ಎಂದು ಹೇಳಿದರು. 

ನೆಲಸೊಗಡು ಲಕ್ಷ್ಮಣರವರ ತಂಡದವರಿಂದ ಹಾಲಕ್ಕಿ ಕುಣಿತ, ಸುಗ್ಗಿ ಕುಣಿತ, ಯಕ್ಷಗಾನ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಚಿಲಿಪಿಳಿ ಗೊಂಬೆ, ಮರಗಾಲು ಕುಣಿತ, ಹುಲಿ ವೇಷ, ಪೂಜಾ ಕುಣಿತ, ತಮಟೆ ವಾದ್ಯ, ವೀರಭದ್ರ ಕುಣಿತ, ಗೊರವರ ಕುಣಿತ, ಚಂಮೇಳ, 150ಕ್ಕೂ ಹೆಚ್ಚು ಕಲಾವಿದರಾದ ಭಾಗವಿಸಿದ್ದರು.

Post a Comment

0Comments

Post a Comment (0)